|
| ಗುರುಗಳ ಭಕ್ತಿ | |
ಲೇಖಕರ ಪರಿಚಯ - ಡಾ| ವಿ. ಗೋಪಾಲಕೃಷ್ಣ ಅವರು ನಿವೃತ್ತ ಕನ್ನಡ ಪ್ರಾಧ್ಯಾಪಕರು. ಬಹುಭಾಷಾ ವಿದ್ವಾಂಸರಾದ ಇವರು ಭಾಷಾ ಶಾಸ್ತ್ರ, ಸ್ಥಳನಾಮ ಶಾಸ್ತ್ರ, ನಿಘಂಟು ಹಾಗೂ ಸಂಪಾದಕರಾಗಿ, ಅನುವಾದಕರಾಗಿ ಬಹುಮುಖ ಸೇವೆ ಸಲ್ಲಿಸಿದ್ದಾರೆ. ಇವರ ಅನೇಕ ಸಂಶೋಧನಾತ್ಮಕ ಗ್ರಂಥಗಳು, ಲೋಖನಗಳು ಪ್ರಕಟವಾಗಿವೆ. ಪ್ರಸ್ತುತ ಚೆನ್ನೈ ನಗರದ ಅಡಯಾರಿನ ಒಂದು ಸಂಶೋಧನಾತ್ಮಕ ಸಂಸ್ಥೆಯ ನಿರ್ದೇಶಕರಾಗಿದ್ದು, ಸಂಶೋಧನೆಯಲ್ಲಿ ಮತ್ತು ಮಾರ್ಗದರ್ಶನ ನೀಡುವುದರಲ್ಲಿ ತೊಡಗಿದ್ದಾರೆ.
ಒಂದು ದಿನ ದಯಾಳುವಾದ ಒಬ್ಬ ಬ್ರಾಹ್ಮಣ ರಾಮಾನುಜರ ಬಳಿಗೆ ಬಂದು, ಭಗವಾನರೆ, ಈ ದಾಸ ತಮಗೆ ಸೇವೆ ಸಲ್ಲಿಸಿ ಆತ್ಮವನ್ನು ಶುದ್ಧಿ ಮಾಡಿಕೊಳ್ಳಬೇಕೆಂದು ಬಂದಿದ್ದೇನೆ. ತಾವು ಎಲ್ಲರನ್ನೂ ಶುದ್ಧ ಮಾಡುವ ಗುರುಗಳು. ತಮಗೆ ಸೇವೆ ಮಾಡುವುದರ ಮೂಲಕ ದಾಸನಾದ ನಾನು ಮತ್ತೆ ತಾಪತ್ರಯ ಎಂಬ ಮೂರು ಬಗೆಯ ದುಖಃಗಳಿಂದ ದಾಸಲಾಗದೆ ಅಪಾರ ದುಖಃಗಳಿಂದ ಮುಕ್ತನಾಗುತ್ತೇನೆ ಎಂದನು.
ಅದಕ್ಕೆ ರಾಮಾನುಜರು, ಪ್ರಿಯರೇ ನೀವು ಹೇಳುವುದು ಸರಿಯಾಗಿಯೇ ಇದೆ. ಜೀವಿಗಳು ಮುಕ್ತಿ ಪಡೆಯಲು ಸೇವೆ ಮಾಡವುದಲ್ಲದೆ ಬೇರೆ ದಾರಿಯಿಲ್ಲ. ಸೇವೆಯ ಮೂಲಕ ನನ್ನನ್ನು ನೀವು ಸಂತೋಷಪಡಿಸಬೇಕಾದರೆ, ನನ್ನೊಂದಿಗೆ ನೀವು ಬದುಕಿರುವವರೆಗೂ ನಾನು ಹೇಳಿದಂತೆಯೇ ಮಾಡಬೇಕು ಎಂದರು. ಅದಕ್ಕೆ ಆ ಬ್ರಾಹ್ಮಣ, ಸ್ವಾಮಿ ದಯೆಮಾಡಿ ಅಪ್ಪಣೆಯಾಗಲಿ. ಅದರಂತೆಯೇ ಮಾಡಲು ಸಿದ್ಧನಾಗಿದ್ದೇನೆ ಎಂದನು.
ಅವರ ಭಕ್ತಿಯನ್ನು ಕಂಡ ಶ್ರೀರಾಮಾನುಜರು ಪ್ರಿಯರೇ, ಭಕ್ತನೊಬ್ಬನ ಪಾದಗಳನ್ನು ತೊಳೆದ ಪವಿತ್ರ ತೀರ್ಥವನ್ನು ಸ್ವೀಕರಿಸಿದ ನಂತರವೇ ಪ್ರತಿದಿನ ನಾನು ಭಗವಂತನ ಧ್ಯಾನವನ್ನು ಮಡಬೇಕೆಂಬ ತೀರ್ಮಾನಿಸಿದ್ದೇನೆ. ದೇವರ ದಯೆಯಿಂದ ದಯಾಳುವಾದ ನಿಮ್ಮಂತಹ ಭಕ್ತರೊಬ್ಬರು ನನಗೆ ದೊರೆತಿರುವುದು ನನ್ನ ಪುಣ್ಯ. ಇಲ್ಲಿಯೇ ಇದ್ದು, ಪ್ರತಿದಿನವೂ ನೀವು ನಿಮ್ಮ ದಿವ್ಯ ಪದಗಳನ್ನು ತೊಳೆದ ಪವಿತ್ರ ತೀರ್ಥವನ್ನು ನನಗೆ ಕೊಡಬೇಕು. ನೀವು ಹಾಗೆ ಮಾಡಿದರೆ ನನಗೆ ನಿಜವಾದ ಸೇವೆ ಮಾಡಿದಂತಾಗುತ್ತದೆ ಎಂದು ಅಪ್ಪಣೆ ಮಾಡಿದರು.
ವಿಶಾಲ ಮನಸ್ಸಿನ ಆ ಬ್ರಾಹ್ಮಣನು ದಯೆಯಿಂದ ಅದಕ್ಕೆ ಒಪ್ಪಿದನು. ಪ್ರತಿದಿನವು ರಾಮನುಜರಿಗಾಗಿ ಅವನು ಮಠದಲ್ಲಿ ಕಾದಿರುತ್ತಿದ್ದನು. ಮಧ್ಯಾಹ್ನದ ವೇಳೆಯಲ್ಲಿ ಕಾವೇರಿಯ ಸ್ನಾನಮಾಡಿ ಬಂದ ನಂತರ ರಾಮಾನುಜರು ಆ ಬ್ರಾಹ್ಮಣನ ಪಾದಗಳನ್ನು ತೊಳೆದ ತೀರ್ಥವನ್ನು ಸ್ವೀಕರಿಸಿದ ನಂತರವೇ ಅವರು ಭಗವಂತನ ಪೂಜೆ ಮಾಡುತ್ತಿದ್ದುದು. ಒಂದು ದಿನ ತಮ್ಮ ಶಿಷ್ಯರೊಬ್ಬರ ಕೋರಿಕೆಯಂತೆ ರಾಮಾನುಜರು ಕಾವೇರಿಯಲ್ಲಿ ಮುಂದು ನಂತರ ನೇರವಾಗಿ ಆ ಶಿಷ್ಯನ ಮನೆಗೆ ಹೋದರು. ಅಲ್ಲಿ ಭಗವಂತನ ಪೂಜೆಯ ನಂತರ ಪ್ರಸಾದ ಉಂಡು ಸ್ವಲ್ಪ ಸಮಯ ವಿಶ್ರಾಂತಿ ಪಡೆದರು. ಅನಂತರ ಜತೆಯಲ್ಲಿದ್ದ ಶಿಷ್ಯರೊಂದಿಗೆ ಆಧ್ಯಾತ್ಮಿಕ ವಿಚಾರಗಳ ಚರ್ಚೆಯಲ್ಲಿ ತೊಡಗಿದರು.
ಇವೆಲ್ಲವನ್ನೂ ಮುಗಿಸಿ ರಾಮಾನುಜರು ತಮ್ಮ ಮಠಕ್ಕೆ ಹಿಂತಿರುಗಿದಾಗ ರಾತ್ರಿ ಬಹಳ ತಡವಾಗಿತ್ತು. ಆದರೆ ಆ ಹೊತ್ತಿನಲ್ಲಿಯೂ ರೂಢಿಯಂತೆ ಪಾದತೀರ್ಥವನ್ನು ಕೊಡುತ್ತಿದ್ದ ಆ ಬ್ರಾಹ್ಮಣನು ತಮ್ಮ ಸ್ಥಳದಲ್ಲಿ ತಮಗಾಗಿ ಕಾದು ಕುಳಿತುಕೊಂಡಿರುವುದನ್ನು ರಾಮಾನುಜರು ನೋಡಿದರು. ಆಶ್ಚರ್ಯದಿಂದ ಆ ಭಕ್ತರೊಂದಿಗೆ ರಾಮಾನುಜರು, ಮಹಾತ್ಮರೆ, ನನಗೆ ಇನ್ನೂ ಕಾದಿದ್ದೀರಾ, ಊಟ ಮಾಡಿದ್ದೀರಿ ಎಂದುಕೊಂಡೆ ಎಂದರು.
ಅದಕ್ಕೆ ಆ ಭಕ್ತನು ಮುಗುಳ್ನಗುತ್ತಾ ಭಗವಾನರೆ ತಮಗೆ ಸೇವೆ ಮಾಡದ ಮುಂಚೆ ಅದು ಹೇಗೆ ತಾನೆ ಈ ಸೇವಕ ಪ್ರಸಾದ ಸ್ವೀಕರಿಸುತ್ತಾನೆ ಎಂದನು. ಅವನು ಹೇಳಿದುದನ್ನು ಕೇಳಿದ ರಾಮಾನುಜರು ಬಹಳ ಸಂತೋಷಪಟ್ಟು, ನೀವು ನಿಜವಾಗಿಯೂ ಬಹಳ ಭಾಗ್ಯವಂತರು ಗುರುಭಕ್ತಿಯ ಎಲ್ಲೆಯನ್ನು ನೀವು ತಲುಪಿದ್ದೀರಿ. ಭಕ್ತಿಯ ಮೂಲಕ ನೀವು ಒಳಗಿರುವ ಪರಮಾತ್ಮನ್ನು ಎಂದೆಂದಿಗೂ ಸೇವಕನನ್ನಾಗಿ ಮಾಡಿ ಕೊಂಡಿದ್ದೀರಿ ಎಂದು ಅಭಿನಂದಿಸಿದರು.
ಹೀಗೆ ಹೇಳಿದ ರಾಮಾನುಜರು ಆ ಭಕ್ತನ ದಿವ್ಯಪಾದಗಳನ್ನು ತೊಳೆದ ತೀರ್ಥವನ್ನು ಮತ್ತೆ ಮತ್ತೆ ಸ್ವೀಕರಿಸಿ ತಮ್ಮ ಶಿಷ್ಯರೆಲ್ಲರಿಗೂ ಅದನ್ನು ನೀಡಿದರು. ರಾಮಾನುಜರ ಅಪಾರ ಆಶೀರ್ವಾದದಿಂದ ಬ್ರಾಹ್ಮಣ ಪ್ರಖ್ಯಾತನಾಗಿ ಭಕ್ತಪರಾಯಣನಾದ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|