|
| ಊಟವೇ ಉಪದೇಶ
| |
ಲೇಖಕರ ಪರಿಚಯ - ಡಾ| ವಿ. ಗೋಪಾಲಕೃಷ್ಣ ಅವರು ನಿವೃತ್ತ ಕನ್ನಡ ಪ್ರಾಧ್ಯಾಪಕರು. ಬಹುಭಾಷಾ ವಿದ್ವಾಂಸರಾದ ಇವರು ಭಾಷಾ ಶಾಸ್ತ್ರ, ಸ್ಥಳನಾಮ ಶಾಸ್ತ್ರ, ನಿಘಂಟು ಹಾಗೂ ಸಂಪಾದಕರಾಗಿ, ಅನುವಾದಕರಾಗಿ ಬಹುಮುಖ ಸೇವೆ ಸಲ್ಲಿಸಿದ್ದಾರೆ. ಇವರ ಅನೇಕ ಸಂಶೋಧನಾತ್ಮಕ ಗ್ರಂಥಗಳು, ಲೋಖನಗಳು ಪ್ರಕಟವಾಗಿವೆ. ಪ್ರಸ್ತುತ ಚೆನ್ನೈ ನಗರದ ಅಡಯಾರಿನ ಒಂದು ಸಂಶೋಧನಾತ್ಮಕ ಸಂಸ್ಥೆಯ ನಿರ್ದೇಶಕರಾಗಿದ್ದು, ಸಂಶೋಧನೆಯಲ್ಲಿ ಮತ್ತು ಮಾರ್ಗದರ್ಶನ ನೀಡುವುದರಲ್ಲಿ ತೊಡಗಿದ್ದಾರೆ.
ಗೌತಮ ಬುದ್ಧನ ಶಿಷ್ಯನೊಬ್ಬನು ಒಂದು ದಿನ ಒಬ್ಬ ಭಿಕ್ಷುಕನನ್ನು ಭೇಟಿ ಮಾಡಿದ. ಅವನಿಗೆ ಧರ್ಮ ಬೋಧೆ ಮಾಡಲು ಆ ಶಿಷ್ಯ ಮೊದಲು ಮಾಡಿದ. ಆದರೆ ಭಿಕ್ಷುಕನ ಮನಸ್ಸು ಅವನ ಉಪದೇಶದ ಕಡೆಗೆ ಹೋಗಲಿಲ್ಲ. ಶಿಷ್ಯನಿಗೆ ಗೋಪ ಬಂತು.
ಅವನು ನೇರವಾಗಿ ಬುದ್ಧನ ಬಳಿಗೆ ಹೋಗಿ, ಅಲ್ಲಿ ಒಬ್ಬ ಭಿಕ್ಷುಕನಿದ್ದಾನೆ. ನಾನು ಅವನಿಗೆ ಹಲವು ರೀತಿಯಲ್ಲಿ ಒಳ್ಳೆಯ ಉಪದೇಶಗಳನ್ನು ಮಾಡಿದೆ, ಆದರೆ ಅವನು ಅದಾವುದನ್ನೂ ಕಿವಿಯಲ್ಲಿ ಹಾಕಿಕೊಳ್ಳಲಿಲ್ಲ ಎಂದು ದೂರಿದನು. ಅವನನ್ನು ನನ್ನ ಹತ್ತಿರ ಕರೆದುಕೊಂಡು ಬಾ ಎಂದನು ಬುದ್ಧ.
ಶಿಷ್ಯನು ಆ ಭಿಕ್ಷುಕನನ್ನು ಬುದ್ಧನ ಬಳಿಗೆ ಕರೆದುಕೊಂಡು ಬಂದನು. ಬುದ್ಧ ಆ ಭಿಕ್ಷುಕನ ಪರಿಸ್ಥಿತಿಯನ್ನು ನೋಡಿದ. ಹಲವು ದಿನಗಳಿಂದ ಅವನು ಉಪವಾಸವಿದ್ದ ಎಂಬುದು ತಿಳಿದುಬಂತು. ಕೂಡಲೆ ಅವನಿಗೆ ಹೊಟ್ಟೆ ತುಂಬ ತಿನ್ನಲು ಆಹಾರ ಕೊಡಲಾಯಿತು. ಅನಂತರ ಅವನಿಗೆ, ನೀನಿನ್ನು ಹೋಗಬಹುದು ಎಂದನು.
ನೀವು ಅವನಿಗೆ ಊಟ ತಾನೇ ಕೊಟ್ಟದ್ದು, ಉಪದೇಶವನ್ನೇನೂ ಮಾಡಲಿಲ್ಲವಲ್ಲ ಎಂದು ಕೇಳಿದನು ಶಿಷ್ಯ.
ಅದಕ್ಕೆ ಬುದ್ಧದೇವ, ಈಗ ಅವನಿಗೆ ಊಟವೇ ಒಳ್ಳೆಯ ಉಪದೇಶ. ಇದೇ ಅವನಿಗೆ ಮೊಟ್ಟ ಮೊದಲು ಬೇಕಾಗಿರುವ ಅಗತ್ಯ. ಆದ್ದರಿಂದ ಅವನಿಗೆ ಊಟ ಕೊಡಲಾಯಿತು. ಅವನ ಹಸಿವು ತೀರಿದರೆ ಅವನು ಖಂಡಿತವಾಗಿ ಉಪದೇಶ ಕೇಳಲು ಇಲ್ಲಿಗೆ ಬರುತ್ತಾನೆ ಎಂದು ಉತ್ತರ ನೀಡಿದ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|