ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಾಹಿತ್ಯ ಆತ್ಮಚರಿತ್ರೆ
ಮಹಾನ್ ಧರ್ಮ
- ಡಾ| ವಿ. ಗೋಪಾಲಕೃಷ್ಣ
ಲೇಖಕರ ಪರಿಚಯ - ಡಾ| ವಿ. ಗೋಪಾಲಕೃಷ್ಣ ಅವರು ನಿವೃತ್ತ ಕನ್ನಡ ಪ್ರಾಧ್ಯಾಪಕರು. ಬಹುಭಾಷಾ ವಿದ್ವಾಂಸರಾದ ಇವರು ಭಾಷಾ ಶಾಸ್ತ್ರ, ಸ್ಥಳನಾಮ ಶಾಸ್ತ್ರ, ನಿಘಂಟು ಹಾಗೂ ಸಂಪಾದಕರಾಗಿ, ಅನುವಾದಕರಾಗಿ ಬಹುಮುಖ ಸೇವೆ ಸಲ್ಲಿಸಿದ್ದಾರೆ. ಇವರ ಅನೇಕ ಸಂಶೋಧನಾತ್ಮಕ ಗ್ರಂಥಗಳು, ಲೋಖನಗಳು ಪ್ರಕಟವಾಗಿವೆ. ಪ್ರಸ್ತುತ ಚೆನ್ನೈ ನಗರದ ಅಡಯಾರಿನ ಒಂದು ಸಂಶೋಧನಾತ್ಮಕ ಸಂಸ್ಥೆಯ ನಿರ್ದೇಶಕರಾಗಿದ್ದು, ಸಂಶೋಧನೆಯಲ್ಲಿ ಮತ್ತು ಮಾರ್ಗದರ್ಶನ ನೀಡುವುದರಲ್ಲಿ ತೊಡಗಿದ್ದಾರೆ.

ರಷ್ಯಾದೇಶದ ಲೇಖಕ ಟಾಲ್‌ಸ್ಟಾಯ್ ದೊಡ್ಡ ಶ್ರೀಮಂತರಾಗಿದ್ದರೂ ದಾನಶೀಲರಾಗಿದ್ದರು. ಸಹಾಯವನ್ನು ಬೇಡಿ ಬಂದವರಿಗೆ ಧಾರಾಳವಾಗಿ ವಸ್ತುಗಳನ್ನು ದಾನ ಮಾಡುತ್ತಿದ್ದರು. ಒಂದು ದಿನ ಟಾಲ್‌ಸ್ಟಾಯ್ ಅವರು ಯಾವುದೋ ಕಲಸದ ನಿಮಿತ್ತ ಒಂದು ಊರಿನ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದರು.

ಆಗ ಕಣ್ಣುಗಳು ಗುಳಿಬಿದ್ದು ಕೃಶನಾಗಿದ್ದ, ಚಿಂದಿ ಬಟ್ಟೆಗಳನ್ನು ಧರಿಸಿದ್ದ ಒಬ್ಬ ಭಿಕ್ಷುಕ ಅವರ ಬಳಿ ಬಂದು ಸ್ವಾಮಿ, ನಾಲ್ಕು ದಿನಗಳಿಂದ ಉಪವಾಸ, ಈ ಬಡವನಿಗೆ ಏನಾದರೂ ಭಿಕ್ಷೆಕೊಡಿ ಎಂದು ಕೈ ನೀಡಿದ. ಆ ಭಿಕ್ಷುಕನಿಗೆ ಏನಾದರೂ ಸಹಾಯ ಮಾಡಬೇಕೆಂದು ಬಯಸಿದ ಟಾಲ್‌ಸ್ಟಾಯ್ ತಮ್ಮ ಅಂಗಿಯ ಜೇಬಿನಲ್ಲಿ ಹಣಕ್ಕಾಗಿ ಹುಡುಕಾಡಿದರು.

ನಿಜವಾಗಿಯೂ ಆಗ ಅವರ ಬಳಿ ಒಂದು ಕಾಸೂ ಇರಲಿಲ್ಲ. ಏನು ಮಾಡುವುದೆಂದು ಯೋಚಿಸಿದ ಅವರು ಭಿಕ್ಷುಕನನ್ನು ನೋಡಿ, ತಮ್ಮಾ ನನ್ನ ಬಳಿ ಈಗ ಹಣವಿಲ್ಲ ನೀನು ನನ್ನ ಮನೆಗೆ ಬಂದರೆ ಅಥವಾ ಮತ್ತೊಮ್ಮೆ ನನ್ನನ್ನು ನೋಡಿದಾಗ ನಿನಗೆ ಸಾಕಷ್ಟು ಭಿಕ್ಷೆ ನೀಡುತ್ತೇನೆ ಎಂದರು.

ಇದನ್ನು ಕೇಳಿದ ಭಿಕ್ಷುಕ ದೀನ ಧ್ವನಿಯಲ್ಲಿ ಸ್ವಾಮಿ ನನಗೆ ಇದುವರೆಗೆ ಯಾರೂ ಕೊಡದಿರುವಷ್ಟು ಭಿಕ್ಷೆಯನ್ನು ನೀವು ಕೊಟ್ಟಿದ್ದೀರಿ. ನನ್ನನ್ನು ಒಬ್ಬ ಮನುಷ್ಯನನ್ನಾಗಿ ಬಗೆದು ತಮ್ಮಾ ಎಂದು ಕರೆದಿದ್ದೀರಲ್ಲವೆ. ಅಷ್ಟು ಸಾಕು ನನಗೆ ಕೃತಜ್ಞತೆಗಳು ಎಂದು ಹೇಳಿ ಹೊರಟು ಹೋದ ಆ ಭಿಕ್ಷುಕ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದುಡಿದರೆ ಮಾತ್ರ ಊಟ
ತ್ಯಾಗಜ್ಯೋತಿ
ಪ್ರಾಜ್ಞನ ಸತ್ವ
ಗುರುಭಕ್ತಿ
ಪದವಿಯ ಧರ್ಮ
ತ್ಯಾಗಜ್ಯೋತಿ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace