|
| ದುಡಿದರೆ ಮಾತ್ರ ಊಟ | |
ಲೇಖಕರ ಪರಿಚಯ - ಡಾ| ವಿ. ಗೋಪಾಲಕೃಷ್ಣ ಅವರು ನಿವೃತ್ತ ಕನ್ನಡ ಪ್ರಾಧ್ಯಾಪಕರು. ಬಹುಭಾಷಾ ವಿದ್ವಾಂಸರಾದ ಇವರು ಭಾಷಾ ಶಾಸ್ತ್ರ, ಸ್ಥಳನಾಮ ಶಾಸ್ತ್ರ, ನಿಘಂಟು ಹಾಗೂ ಸಂಪಾದಕರಾಗಿ, ಅನುವಾದಕರಾಗಿ ಬಹುಮುಖ ಸೇವೆ ಸಲ್ಲಿಸಿದ್ದಾರೆ. ಇವರ ಅನೇಕ ಸಂಶೋಧನಾತ್ಮಕ ಗ್ರಂಥಗಳು, ಲೋಖನಗಳು ಪ್ರಕಟವಾಗಿವೆ. ಪ್ರಸ್ತುತ ಚೆನ್ನೈ ನಗರದ ಅಡಯಾರಿನ ಒಂದು ಸಂಶೋಧನಾತ್ಮಕ ಸಂಸ್ಥೆಯ ನಿರ್ದೇಶಕರಾಗಿದ್ದು, ಸಂಶೋಧನೆಯಲ್ಲಿ ಮತ್ತು ಮಾರ್ಗದರ್ಶನ ನೀಡುವುದರಲ್ಲಿ ತೊಡಗಿದ್ದಾರೆ.
ಚೀನಾ ದೇಶದಲ್ಲಿ ಇಕ್ಕುವೋ ಎಂಬ ಝೆನ್ ಬೌದ್ಧ ಗುರು ಒಬ್ಬರಿದ್ದರು. ಅವರಿಗೆ ಅನೇಕ ಶಿಷ್ಯರಿದ್ದರು. ಅವರ ಮಠಕ್ಕೆ ಸೇರಿದಂತೆ ಒಂದು ದೊಡ್ಡ ತೋಟವಿತ್ತು. ಪ್ರತಿದಿನವು ಅವರು ಶಿಷ್ಯರೊಂದಿಗೆ ತೋಟಕ್ಕೆ ಹೋಗುತ್ತಿದ್ದರು. ಪಿಕಾಸಿನಿಂದ ನೆಲವನ್ನು ಸರಿಮಾಡುತ್ತಿದ್ದರು. ಪೊರಕೆಯಿಂದ ತೋಟವನ್ನೆಲ್ಲಾ ಗುಡಿಸುತ್ತಿದ್ದರು. ಅವರಿಗೆ ವಯಸ್ಸು 80. ಆದರೂ ಓಲಾಡುತ್ತಲೇ ತೋಟದಲ್ಲಿ ಕೆಲಸ ಮಾಡುತ್ತಿದ್ದರೇ ವಿನಾ ಸುಮ್ಮನಿರುತ್ತಿರಲಿಲ್ಲ.
ಶಿಷ್ಯರು ಅವರನ್ನು ಕುರಿತು ತೋಟದ ಕೆಲಸವನ್ನು ನಾವೇ ಜವಾಬ್ದಾರಿಯಿಂದ ಮಾಡುತ್ತೇವೆ. ನೀವು ವಿಶ್ರಾಂತಿ ಪಡೆದುಕೊಳ್ಳಿ ಎಂದರು. ಆದರೆ ಶಿಷ್ಯರ ಮಾತನ್ನು ಅವರು ಕೇಳಲಿಲ್ಲ. ಮೊದಲಿನಂತೆಯೇ ಪ್ರತಿದಿನವೂ ತೋಟಕ್ಕೆ ಬಂದು ದುಡಿಯುತ್ತಲೇ ಇದ್ದರು. ಈ ವಯಸ್ಸಿನಲ್ಲಿ ನಮ್ಮ ಗುರುಗಳು ಏಕೆ ತಾನೆ ಕಷ್ಟಪಡಬೇಕು ನಾವು ಏನು ಹೇಳಿದರೂ ಅವರು ಕೇಳುತ್ತಿಲ್ಲವಲ್ಲಾ. ಏನು ಮಾಡುವುದು ಎಂದು ಕೇಳಿದ ಶಿಷ್ಯನೊಬ್ಬ.
ತೋಟದಲ್ಲಿರುವ ಪಿಕಾಸಿ, ಹಾರೆ ಮುಂತಾದವುಗಳನ್ನು ನಾವು ಬೇರೆಲ್ಲಾದರೂ ಬಚ್ಚಿಟ್ಟುಬಿಡೋಣ. ಅವಿಲ್ಲದಿದ್ದರೆ ನಮ್ಮ ಗುರುಗಳು ಏನು ಕೆಲಸವನ್ನೂ ಮಾಡುವಂತಿಲ್ಲ, ವಿಶ್ರಾಂತಿ ತೆಗೆದುಕೊಳ್ಳುತ್ತಾರೆ ಎಂದನು ಮತ್ತೊಬ್ಬ ಶಿಷ್ಯ. ತೋಟದಲ್ಲಿದ್ದ ಎಲ್ಲಾ ಉಪಕರಣಗಳನ್ನು ಮೊದಲೇ ತೀರ್ಮಾನಿಸಿದಂತೆ ಬೇರೊಂದು ಜಾಗದಲ್ಲಿ ಅಡಗಿಸಿದರು. ಗುರುಗಳು ಎಂದಿನಂತೆ ಕೆಲಸ ಮಾಡಲು ತೋಟಕ್ಕೆ ಬಂದರು. ಪಿಕಾಸಿ, ಗಡಾರಿ ಮುಂತಾದವು ಅಲ್ಲಿ ಕಾಣಲಿಲ್ಲ.
ಆದ್ದರಿಂದ ಅಲ್ಲಿ ಅವರಿಂದ ತೋಟದ ಯಾವ ಕೆಲಸವನ್ನೂ ಮಾಡಲಾಗಲಿಲ್ಲ. ಗರುಕುಲಕ್ಕೆ ಹಿತಿರುಗಿದ ಗುರುಗಳು ಆ ದಿನ ಏನನ್ನೂ ತಿನ್ನಲಿಲ್ಲ. ಮಾರನೆಯ ದಿನವೂ ಏನನ್ನೂ ತಿನ್ನಲಿಲ್ಲ. ಇದನ್ನು ತಿಳಿದ ಶಿಷ್ಯರಿಗೆ ತುಂಬಾ ನೋವುಂಟಾಯಿತು. ತಾವು ಮಾಡಿದ ತಪ್ಪಿನಿಂದ ಗುರುಗಳು ಕೋಪಗೊಂಡಿದ್ದಾರೆ. ಮತ್ತೆ ಆ ಎಲ್ಲಾ ಉಪಕರಣಗಳನ್ನು ತೋಟದಲ್ಲಿ ಇಟ್ಟುಬಿಡೋಣ ಎಂದನು ಒಬ್ಬ ಶಿಷ್ಯ. ಅಂತೆಯೇ ಆ ಉಪಕರಣಗಳನ್ನು ಮತ್ತೆ ತೋಟದಲ್ಲಿಯೇ ಇಟ್ಟರು. ಆ ದಿನ ತೋಟಕ್ಕೆ ಬಂದ ಗುರುಗಳು ರೂಢಿಯಂತೆ ತಮ್ಮ ಕೆಲಸಗಳನ್ನು ಮಾಡಿದರು.
ರಾತ್ರಿಯಾಯಿತು. ಶಿಷ್ಯರೊಂದಿಗೆ ಕಲೆತು ಸಂತೋಷದಿಂದ ಊಟ ಮಾಡಿದರು. ಆಗ ಒಬ್ಬಶಿಷ್ಯ ನೀವು ಕಷ್ಟಪಡಬಾರದು ಎಂಬ ಒಳ್ಳೆಯ ಉದ್ದೇಶದಿಂದ ತೋಟದ ಉಪಕರಷಗಳನ್ನು ಬಚ್ಚಿಟ್ಟಿದ್ದೆವು. ಅದಕ್ಕಾಗಿ ನಿಮ್ಮ ದೇಹವನ್ನು ದಂಡಿಸಿ ಉಪವಾಸ ಮಾಡಬಹುದೆ ಎಂದು ಕೇಳಿದ. ಅದಕ್ಕೆ ಗುರು ಇಕ್ಕುವೋ ಹೇಳಿದರು, ದುಡಿಯುವವರಿಗೆ ಮಾತ್ರವೇ ಉಣವಿನ ಹಕ್ಕಿದೆ ನನಗೆ ತೋಟದಲ್ಲಿ ಕೆಲಸವಿಲ್ಲದಂತಾಯಿತು. ಆದ್ದರಿಂದ ನಾನು ಏನನ್ನೂ ತಿನ್ನಲಿಲ್ಲ. ಎಂದು ಹೇಳಿದಾಗ ಶಿಷ್ಯರೆಲ್ಲರೂ ಮೂಕರಾಗಿ ನಿಂತಿದ್ದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|