ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಾಹಿತ್ಯ ಆತ್ಮಚರಿತ್ರೆ
ಪ್ರಾಜ್ಞನ ಸತ್ವ
- ಡಾ| ವಿ. ಗೋಪಾಲಕೃಷ್ಣ
ಒಬ್ಬ ಯುವಕ ತ- ಡಾ| ವಿ. ಗೋಪಾಲಕೃಷ್ಣ ಅವರು ನಿವೃತ್ತ ಕನ್ನಡ ಪ್ರಾಧ್ಯಾಪಕರು. ಬಹುಭಾಷಾ ವಿದ್ವಾಂಸರಾದ ಇವರು ಭಾಷಾ ಶಾಸ್ತ್ರ, ಸ್ಥಳನಾಮ ಶಾಸ್ತ್ರ, ನಿಘಂಟು ಹಾಗೂ ಸಂಪಾದಕರಾಗಿ, ಅನುವಾದಕರಾಗಿ ಬಹುಮುಖ ಸೇವೆ ಸಲ್ಲಿಸಿದ್ದಾರೆ. ಇವರ ಅನೇಕ ಸಂಶೋಧನಾತ್ಮಕ ಗ್ರಂಥಗಳು, ಲೋಖನಗಳು ಪ್ರಕಟವಾಗಿವೆ. ಪ್ರಸ್ತುತ ಚೆನ್ನೈ ನಗರದ ಅಡಯಾರಿನ ಒಂದು ಸಂಶೋಧನಾತ್ಮಕ ಸಂಸ್ಥೆಯ ನಿರ್ದೇಶಕರಾಗಿದ್ದು, ಸಂಶೋಧನೆಯಲ್ಲಿ ಮತ್ತು ಮಾರ್ಗದರ್ಶನ ನೀಡುವುದರಲ್ಲಿ ತೊಡಗಿದ್ದಾರೆ.

ಾನು ಅನೇಕ ವಿದ್ಯೆಗಳನ್ನು ಕಲಿತು ಕೊಳ್ಳಬೇಕು , ಎಲ್ಲರೂ ತನ್ನನ್ನು ಹೊಗಳಬೇಕು ಎಂದು ಆಸೆಪಟ್ಟರು. ಆದ್ದರಿಂದ ಅವನು ಹಲವಾರು ಸ್ಥಳಗಳಿಗೆ ಹೋಗಿ ಅನೇಕ ಕಲೆಗಳನ್ನು ಕಲಿತನು. ತನಗಿಂತ ಬುದ್ಧಿಶಾಲಿಯಾದವನು ಈ ಲೋಕದಲ್ಲಿ ಯಾರೂ ಇಲ್ಲ ಎಂಬ ಅಹಂಕಾರದಲ್ಲಿದ್ದ ಇದನ್ನು ಗಮನಿಸಿದ ಭಗವಾನ್ ಬುದ್ಧ ಆ ಯುವಕ ಇದುವರೆಗೆ ಕಲಿಯದಿದ್ದ ಎಲ್ಲಕ್ಕಿಂತ ವಿಶೇಷವಾದ ಒಂದು ವಿದ್ಯೆಯನ್ನು ಅವನಿಗೆ ಕಲಿಸಲು ತೀರ್ಮಾನಿಸಿದರು.

ಒಬ್ಬ ಮುದಿ ಸನ್ಯಾಸಿಯನ್ನು ಜತೆ ಮಾಡಿಕೊಂಡು ಕೈಯಲ್ಲಿ ಭಿಕ್ಷಾಪಾತ್ರೆಯನ್ನು ಹಿಡಿದು ಆ ಯುವಕನ ಬಳಿಗೆ ಹೋದನು. ನೀವು ಯಾರು ಎಂದು ಕೇಳಿದ ಆ ಯುವಕ.
ಅದಕ್ಕೆ ಬುದ್ಧ ತನ್ನ ದೇಹವನ್ನು ಹತೋಟಿಯಲ್ಲಿರಿಸಿಕೊಳ್ಳಲು ತಿಳಿದವನು ಎಂದನು. ಆ ಯುವಕ ಅತ್ಯಂತ ಆಶ್ಚರ್ಯಗೊಂಡು, ಏನು ಹೇಳುತ್ತೀರಿ ಎಂದು ಕೇಳಿದ. ಅದಕ್ಕೆ, ಬೇಡನು ಬಾಣವನ್ನು ಗುರಿಯಿಟ್ಟು ಹೊಡೆಯಬಲ್ಲ, ನಾವಿಕನು ನಾವೆಯನ್ನು ನಡೆಸಬಲ್ಲ ಕಟ್ಟಡೆ ತಂತ್ರಜ್ಞ ಕಟ್ಟಡವನ್ನು ಕಟ್ಟಬಲ್ಲ. ಇದೆಲ್ಲ ಏನೂ ಹೆಚ್ಚುಗಾರಿಕೆಯಲ್ಲ. ಅವರವರು ತಮ್ಮ ಕೆಲಸಗಳನ್ನು ಮಾಡುತ್ತಾರೆ. ಆದರೆ ಪ್ರಾಜ್ಞನು ಮಾತ್ರ ತನ್ನನ್ನು ತಾನು ಆಳಬಲ್ಲನು ಎಂದರು ಭಗವಾನ್ ಬುದ್ಧ.

ಯಾವ ರೀತಿ ಎಂದು ಕೇಳಿದ ಆ ಯುವಕ.ಅದಕ್ಕೆ ಬುದ್ಧ ಭಗವಾನ್, ಪ್ರಾಜ್ಞನಾದವನು ತನ್ನನ್ನು ಹೊಗಳುವಾಗ ಚಲಿಸುವುದಿಲ್ಲ ಅದೇ ರೀತಿ ಅವನನ್ನು ತೆಗಳುವಾಗಲು ಹಾಗೆಯೇ ಇರುತ್ತಾನೆ. ಧರ್ಮದಿಂದ ನಡೆದುಕೊಳ್ಳುವುದು ಮಾತ್ರ ಅವನಿಗೆ ಇಷ್ಟವಾಗುವುದ. ಆದ್ದರಿಂದ ಅವನು ನೆಮ್ಮದಿಯಿಂದ ತನ್ನನ್ನು ಹತೋಟಿಯಲ್ಲಿರಿಸಿ ಕೊಳ್ಳುತ್ತಾನೆ ಎಂದನು.
ಇದನ್ನು ಕೇಳಿದ ಆ ಯುವಕ ಇವಿಷ್ಟು ವಿದ್ಯೆಗಳನ್ನು ಕಲಿತರೂ ತಾನು ಒಬ್ಬ ಪ್ರಾಜ್ಞನಾಗಿ ಬಾಳಲು ಕಲಿಯದೆ ಹೀಗೆ ಅಹಂಕಾರದಿಂದ ತಿರುಗಾಡುತ್ತಿದ್ದೇನಲ್ಲವೆ ಎಂಬುದನ್ನು ಮನವರಿಕೆ ಮಾಡಿಕೊಂಡು ಭಗವಾನ್ ಬುದ್ಧನ ಪಾದಗಳಿಗೆರಗಿದ.

-ಡಾ. ವಿ.ಗೋಪಾಲಕೃಷ್ಣ
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
'ರಾಜಕುಮಾರ'ನ ಸ್ವರ್ಗಯಾತ್ರೆಗೆ ಒಂದು ವರ್ಷ
ಗುರುಗಳ ಭಕ್ತಿ
ಊಟವೇ ಉಪದೇಶ
ಮಹಾನ್ ಧರ್ಮ
ದುಡಿದರೆ ಮಾತ್ರ ಊಟ
ತ್ಯಾಗಜ್ಯೋತಿ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace