ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಾಹಿತ್ಯ ಆತ್ಮಚರಿತ್ರೆ
ಪದವಿಯ ಧರ್ಮ
- ಡಾ| ವಿ. ಗೋಪಾಲಕೃಷ್ಣ
ಲೇಖಕರ ಪರಿಚಯ - ಡಾ| ವಿ. ಗೋಪಾಲಕೃಷ್ಣ ಅವರು ನಿವೃತ್ತ ಕನ್ನಡ ಪ್ರಾಧ್ಯಾಪಕರು. ಬಹುಭಾಷಾ ವಿದ್ವಾಂಸರಾದ ಇವರು ಭಾಷಾ ಶಾಸ್ತ್ರ, ಸ್ಥಳನಾಮ ಶಾಸ್ತ್ರ, ನಿಘಂಟು ಹಾಗೂ ಸಂಪಾದಕರಾಗಿ, ಅನುವಾದಕರಾಗಿ ಬಹುಮುಖ ಸೇವೆ ಸಲ್ಲಿಸಿದ್ದಾರೆ. ಇವರ ಅನೇಕ ಸಂಶೋಧನಾತ್ಮಕ ಗ್ರಂಥಗಳು, ಲೋಖನಗಳು ಪ್ರಕಟವಾಗಿವೆ. ಪ್ರಸ್ತುತ ಚೆನ್ನೈ ನಗರದ ಅಡಯಾರಿನ ಒಂದು ಸಂಶೋಧನಾತ್ಮಕ ಸಂಸ್ಥೆಯ ನಿರ್ದೇಶಕರಾಗಿದ್ದು, ಸಂಶೋಧನೆಯಲ್ಲಿ ಮತ್ತು ಮಾರ್ಗದರ್ಶನ ನೀಡುವುದರಲ್ಲಿ ತೊಡಗಿದ್ದಾರೆ.

ಚಂದ್ರಗುಪ್ತ ಚಕ್ರವರ್ತಿಯ ಮಹಾಪ್ರಧಾನಿ ಚಾಣಕ್ಯನ ಮನೆ ಅದು. ಅಲ್ಲಿ ಬಡವರಿಗೆ ಹಂಚುವ ಸಲುವಾಗಿ ಚಕ್ರವರ್ತಿ ಕಳುಹಿಸಿದ್ದ ಕಂಬಳಿಗಳು ರಾಶಿರಾಶಿಯಾಗಿ ಬಿದ್ದಿದ್ದವು. ಇದನ್ನು ನೋಡಿದ ಕಳ್ಳರು ಸರಿರಾತ್ರಿಯಲ್ಲಿ ಅವುಗಳನ್ನು ಕದಿಯಲು ಆ ಮನೆಗೆ ಹೊಕ್ಕರು. ಅಲ್ಲಿ ಅವರು ನೋಡಿದ ದೃಶ್ಯ ಆಶ್ಟರ್ಯಕರವಾಗಿತ್ತು. ಹರಿದು ಹೋಗಿದ್ದ ಹಳೆಯ ಚಾಪೆಯೊಂದನ್ನು ಹಾಸಿಕೊಂಡು ಚಾಣಕ್ಯ ಮತ್ತು ಅವನ ತಾಯಿ ಮಲಗಿದ್ದರು.

ಅವರು ಹೊದ್ದಿದ್ದ ಕಂಬಳಿ ಚಿಂದಿಚಿಂದಿಯಾಗಿತ್ತು. ಅವರು ಚಳಿಯಿಂದ ನಡುಗುತ್ತಿದ್ದರು. ಕಳ್ಳರಿಗೆ ಆಶ್ಚರ್ಯವಾಯಿತು. ಚಾಣಕ್ಯನನ್ನು ನಿದ್ದೆಯಿಂದ ಎಬ್ಬಿಸಿ ಅವರು, ಸ್ವಾಮಿ, ನಮ್ಮನ್ನು ಕ್ಷಮಿಸಿ, ನಾವು ಕಂಬಳಿಗಳನ್ನು ಕದಿಯಲು ಬಂದ ಕಳ್ಳರು. ಆದರೆ ಒಂದು ಕಡೆ ಒಳ್ಳೆಯ ಕಂಬಳಿಗಳು ಬಳಸದೆ ಹಾಗೆಯೇ ರಾಶಿರಾಶಿಯಾಗಿ ಬಿದ್ದಿರುವಾಗ, ಇನ್ನೊಂದು ಕಡೆ ನೀವು ಅವುಗಳನ್ನು ಬಳಸದೆ ಚಳಿಯಿಂದ ನಡುಗುತ್ತಿರುವುದರ ರಹಸ್ಯ ಏನು ಎಂದು ಕೇಳಿದರು.

ಆಗ ಮುಗುಳ್ನಗುತ್ತಾ ಚಾಣಕ್ಯ. ಈ ಕಂಬಳಿಗಳೆಲ್ಲವೂ ಬಡವರಿಗಾಗಿ ಬಂದಿವೆ. ಅವೆಲ್ಲವೂ ಅವರಿಗೆ ಸೇರಬೇಕಾದದ್ದು. ಅವುಗಳನ್ನು ತೆಗೆದುಕೊಂಡು ನಾನು ಹೊದ್ದುಕೊಂಡರೆ ನನ್ನನ್ನು ಸಹ ಕಳ್ಳನೆನ್ನಬೇಕಾಗುತ್ತದೆ ಎಂದರು. ಇದನ್ನು ಕೇಳಿದ ಆ ಕಳ್ಳರು ಚಾಣಕ್ಯನೊಂದಿಗೆ ಕ್ಷಮೆಯಾಚಿಸಿ ಇನ್ನು ಮುಂದೆ ತಾವೆಂದೂ ಕಳ್ಳತನ ಮಾಡುವುದಿಲ್ಲವೆಂದು ನಿರ್ಧರಿಸಿದರು. ಈ ಘಟನೆ ಉನ್ನತಸ್ಥಾದಲ್ಲಿರುವವರ ಸ್ವಭಾವ ಹೇಗಿರಬೇಕೆಂಬುದಕ್ಕೆ ಒಂದು ಉತ್ತಮ ಉದಾಹರಣೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
'ರಾಜಕುಮಾರ'ನ ಸ್ವರ್ಗಯಾತ್ರೆಗೆ ಒಂದು ವರ್ಷ
ಗುರುಗಳ ಭಕ್ತಿ
ಊಟವೇ ಉಪದೇಶ
ಮಹಾನ್ ಧರ್ಮ
ದುಡಿದರೆ ಮಾತ್ರ ಊಟ
ತ್ಯಾಗಜ್ಯೋತಿ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace