|
| ತ್ಯಾಗಜ್ಯೋತಿ | | - ಡಾ| ವಿ. ಗೋಪಾಲಕೃಷ್ಣ |
| ಬುಧವಾರ, 18 ಏಪ್ರಿಲ್ 2007 |
|
ಲೇಖಕರ ಪರಿಚಯ - ಡಾ| ವಿ. ಗೋಪಾಲಕೃಷ್ಣ ಅವರು ನಿವೃತ್ತ ಕನ್ನಡ ಪ್ರಾಧ್ಯಾಪಕರು. ಬಹುಭಾಷಾ ವಿದ್ವಾಂಸರಾದ ಇವರು ಭಾಷಾ ಶಾಸ್ತ್ರ, ಸ್ಥಳನಾಮ ಶಾಸ್ತ್ರ, ನಿಘಂಟು ಹಾಗೂ ಸಂಪಾದಕರಾಗಿ, ಅನುವಾದಕರಾಗಿ ಬಹುಮುಖ ಸೇವೆ ಸಲ್ಲಿಸಿದ್ದಾರೆ. ಇವರ ಅನೇಕ ಸಂಶೋಧನಾತ್ಮಕ ಗ್ರಂಥಗಳು, ಲೋಖನಗಳು ಪ್ರಕಟವಾಗಿವೆ. ಪ್ರಸ್ತುತ ಚೆನ್ನೈ ನಗರದ ಅಡಯಾರಿನ ಒಂದು ಸಂಶೋಧನಾತ್ಮಕ ಸಂಸ್ಥೆಯ ನಿರ್ದೇಶಕರಾಗಿದ್ದು, ಸಂಶೋಧನೆಯಲ್ಲಿ ಮತ್ತು ಮಾರ್ಗದರ್ಶನ ನೀಡುವುದರಲ್ಲಿ ತೊಡಗಿದ್ದಾರೆ.
ಇಟಲಿ ದೇಶದ ಟ್ಯೂರಿನ್ ವಿಶ್ವವಿದ್ಯಾಲಯದಲ್ಲಿ ಮಾರಿಯೋ ಪೋಜಿಯೋ ಎಂಬ ರೇಡಿಯಾಲಜಿ ತಜ್ಞೆ ಕುಷ್ಠರೋಗಕ್ಕೆ ಔಷಧಿಯನ್ನು ಕಂಡು ಹಿಡಿಯಲು ಒಂದು ಸಂಶೋಧನೆಯಲ್ಲಿ ಮುಳುಗಿದ್ದರು. ಆಗ ಎಕ್ಸ್‌ರೇ ಕಿರಣಗಳನ್ನು ಮೈಮೇಲೆ ಹಾಯಿಸಿದರೆ ಪರಿಣಾಮವೇನಾಗುತ್ತದೆ ಎಂದು ತಿಳಿದುಕೊಳ್ಳಲು ತಮ್ಮ ಮೈಮೇಲೆಯೇ ಅವುಗಳನ್ನು ಹಾಯಿಸಿಕೊಂಡು ಪರೀಕ್ಷಿಸಿದರು ಆ ಮಹಾ ಮಹಿಳೆ.
ಎಕ್ಸ್‌ರೇ ಕಿರಣಗಳು ತೀವ್ರ ಪರಿಣಾಮ ಮಾಡಿದುದರಿಂದ ಆಕೆ ಮೊದಲು ತಮ್ಮ ಒಂದು ಎಡಗೈ ಬೆರಳನ್ನು ಕತ್ತರಿಸಿಕೊಳ್ಳಬೇಕಾಯಿತು. ಆಗ ಸ್ನೇಹಿತರೆಲ್ಲರೂ ರೇಡಿಯಂ ಬಳಿ ಹೋಗಬೇಡವೆಂದು ಆಕೆಗೆ ಹೇಳಿದರು. ಅದಕ್ಕೆ ಆ ಮಹಾನ್ ತಾಯಿ ಬಹಳ ಸರಳ ಸಾಧಾರಣವಾಗಿ ಹೇಳಿದರು 'ಏನೂ ಕೆಡಲಿಲ್ಲವಲ್ಲವೇ. ಒಂದು ಬೆರಳು ತಾನೆ ಹೋದದ್ದು. ಇನ್ನೂ ನಾಲ್ಕು ಬೆರಳುಗಳಿವೆ. ಅವು ಸಾಕಲ್ಲವೇ ಸಂಶೋಧನೆಗೆ' ಎಂದರು.
ಆದಾದ ನಂತರ ಎಕ್ಸ್‌ರೇ ಕಿರಣಗಳ ಪ್ರಭಾವದಿಂದ ಆ ಮಹಿಳೆಯ ಎಡಗೈ ಸಂಪೂರ್ಣವಾಗಿಯೂ ಬಲಗೈಯ ಮುಂಭಾಗವನ್ನೂ ಕತ್ತರಿಸಬೇಕಾಯಿತು. ಅವರ ಇಂತಹ ಪರಿಸ್ಥಿತಿಯನ್ನು ಕಂಡ ಅವರ ಸ್ನೇಹಿತರು, ಅವರು ಕೈಗೊಂಡಿದ್ದ ಸಂಶೋಧನೆಯನ್ನು ಕೈಬಿಡುವಂತೆ ಕೇಳಿಕೊಂಡರು.
ಆಗ ಆ ಮಹಿಳೆ ಹೇಳಿದರು, ಜೀವನದ ಪ್ರತಿಯೊಂದು ಕ್ಷಣವನ್ನು, ಭಾಗವನ್ನು ಪೂರ್ಣವಾಗಿ ಉಪಯೋಗ ಪಡಿಸಿಕೊಳ್ಳಬೇಕು. ಈ ಸಂಶೋಧನೆಯ ವಿನಾ ನನ್ನ ಜೀವನದಲ್ಲಿ ಬೇರೇನೂ ಲಕ್ಷ್ಯವಿಲ್ಲ ಹೀಗೆ ಆ ಮಹಿಳಾಮಣಿ ಮಾನವ ಜೀವನದ ಉದ್ದಾರಕ್ಕಾಗಿ ತಮ್ಮನ್ನೇ ಅರ್ಪಣೆ ಮಾಡಿ ತ್ಯಾಗಜ್ಯೋತಿಯಾಗಿ ಬೆಳಗಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|