ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಆರೋಗ್ಯ ಚಿಕಿತ್ಸೆ
ಕಾಫಿ ಕುಡಿದೀರಿ ಜೋಕೆ!
ವಾಷಿಂಗ್ಟನ್ (ಏಜೆನ್ಸಿ), ಶುಕ್ರವಾರ, 28 ಸೆಪ್ಟೆಂಬರ್ 2007   ( 17:30 IST )
Coffee
AP
ನಿಮಗೆ ಗಂಟೆಗೊಮ್ಮೆ ಕಾಫಿ ಕುಡಿಯುವ ಹವ್ಯಾಸವಿದೆಯಾ? ಮೇಲಾಗಿ ಮೈಕೈ ಸ್ಪಲ್ಪ ನೋವಾದರೂ ಪೇನ್ ಕಿಲ್ಲರ್ ಮಾತ್ರೆ ತೆಗೆದುಕೊಳ್ಳುತ್ತೀರಾ? ಹಾಗಾದರೆ ಅಪಾಯ ಕಾದಿದೆ. ಹೆಚ್ಚಿನ ಕಾಫಿ ಸೇವನೆ ಹಾಗೂ ನೋವು ನಿವಾರಕ ಮಾತ್ರೆ ಸೇವನೆಯಿಂದ ಪಿತ್ತಜನಕಾಂಗಕ್ಕೆ ಹಾನಿಯಾಗಲಿದೆ ಎನ್ನುತ್ತದೆ ಇತ್ತೀಚಿನ ಸಮೀಕ್ಷೆ.
ಅಮೆರಿಕದ ವಿಜ್ಞಾನಿಗಳು ಈ ಸಮೀಕ್ಷೆ ನಡೆಸಿದ್ದು, ಕಾಫಿಯಲ್ಲಿರುವ "ಕೆಫಿನ್" ಎಂಬ ಅಂಶ ಹಾಗೂ ನೋವು ನಿವಾರಕ ಮಾತ್ರೆಗಳಲ್ಲಿ ಬಳಸುವ ರಾಸಾಯನಿಕ ದೇಹದಲ್ಲಿ ರಕ್ತದೊಡನೆ ಬೆರೆತು ಯಕೃತ್ತಿಗೆ ಹಾನಿಯುಂಟು ಮಾಡುತ್ತದೆ ಎನ್ನುತ್ತಾರೆ ಸಂಶೋಧಕರು.

ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯದ ಡಾ. ಸಿಡ್ನಿ ನೆಲ್ಸನ್ ನಾಯಕತ್ವದಲ್ಲಿ ಈ ಸಂಶೋಧನೆ ನಡೆದಿದ್ದು, ಕಾಫಿ ಸೇವಕರು ಎಚ್ಚರಿಕೆ ವಹಿಸುವಂತೆ ಸಂಶೋಧಕರು ತಿಳಿಸಿದ್ದಾರೆ.

ನೋವು ನಿವಾರಕ ಮಾತ್ರೆಗಳನ್ನು ಸೇವಿಸುವುದು ಮಾತ್ರವಲ್ಲದೆ, ಕೆಫಿನ್ ಅಂಶವಿರುವ ಯಾವುದೇ ಉತ್ಪನ್ನವನ್ನು ಸೇವಿಸುವುದರಿಂದ ಈ ಹಾನಿ ಸಂಭವಿಸುವ ಸಾಧ್ಯತೆಗಳು ಹೆಚ್ಚಿದ್ದು, ಮಧ್ಯಪಾನಿಗಳಲ್ಲಿ ಈ ಸಮಸ್ಯೆ ಗಂಭೀರವಾಗಿದೆ.

ಕಾಫಿ ಕುಡಿಯುವುದರಿಂದ ಪಿತ್ತಜನಕಾಂಗದಲ್ಲಿ ವಿಷದ ಅಂಶ ಹೆಚ್ಚುವುದು ಮಾತ್ರವಲ್ಲದೆ, ಇದು ಸಾಮಾನ್ಯ ಸ್ಥಿತಿಯ ಮಟ್ಟವನ್ನು ಮೀರುವುದರಿಂದ ಈಗಾಗಲೇ ಪಿತ್ತಜನಕಾಂಗದ ತೊಂದರೆಯಿಂದ ಬಳಲುವವರು ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ನೆಲ್ಸನ್.

ನಿರಂತರ ನೋವು ನಿವಾರಕ ಮಾತ್ರೆ ಸೇವನೆಯಿಂದಲೂ ಪಿತ್ತಜನಕಾಂಗ ತೀವ್ರ ಹಾನಿಗೊಳಗಾಗಲಿದ್ದು, ಈ ಕುರಿತು "ಕೆಮಿಕಲ್ ರಿಸರ್ಚ್ ಟಾಕ್ಸಿಕೊಲಜಿ ಮಾಸಿಕದಲ್ಲಿ ಲೇಖನ ಪ್ರಕಟಗೊಂಡಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ದೇಹಕ್ಕೆ ಕಷ್ಟ: ಬೊಜ್ಜಿನ ಸಂಕಷ್ಟ
ಗಂಟಲು ನೋವು: ನಿರ್ಲಕ್ಷ್ಯ ಸಲ್ಲದು
ಹೃದಯ ಸ್ಥಂಬನಕ್ಕೆ ಸಿಪಿಆರ್ ಚಿಕಿತ್ಸೆ
ರೋಗವನ್ನು ದೇಹದಿಂದ ದೂರವಿಡಿ
ಗಳಗಂಡ: ಪರಿಹಾರ ಸುಲಭ
ಅಯ್ಯೋ! ನಾಲಿಗೆ ಸುಟ್ಟಿದೆಯಾ ಹೀಗೆ ಮಾಡಿ
ಮನರಂಜನೆ
ಚಿತ್ರ ಸುದ್ದಿ - ನೀವು 80ನೆಯ ವಯಸ್ಸಿನಲ್ಲಿದ್ದೀರಾ, ಹಾಗಾದರೆ ಜೀವನ ಮುಸ್ಸಂಜೆಯಲ್ಲಿದ್ದೀರಿ ಅಂತ್ ಅರ್ಥ. ತಾರುಣ್ಯದಲ್ಲಿನ...
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ದೇಹಕ್ಕೆ ಕಷ್ಟ: ಬೊಜ್ಜಿನ ಸಂಕಷ್ಟ
ಆಧುನಿಕ ಜೀವನ ಶೈಲಿ ನಮ್ಮ ಆಹಾರ ಕ್ರಮದಲ್ಲಿ ಹಲವು ವ್ಯತ್ಯಾಸ ತಂದಿದೆ. ಸುಲಭವಾಗಿ ಸಿಗುವ ವಸ್ತುಗಳನ್ನು...
ಗಂಟಲು ನೋವು: ನಿರ್ಲಕ್ಷ್ಯ ಸಲ್ಲದು
ಹೃದಯ ಸ್ಥಂಬನಕ್ಕೆ ಸಿಪಿಆರ್ ಚಿಕಿತ್ಸೆ
ಸಾಹಿತ್ಯ
ಕಥೆ - "ನಿನ್ನ ಬದುಕಿನ ಸಂಪೂರ್ಣ ಜವಾಬ್ದಾರಿಯನ್ನು ನೀನು ಹೊತ್ತುಕೊಂಡಾಗ ಮಾತ್ರ, ನಿನಗೆ ನಿನ್ನಲ್ಲಿರುವ ಅಂತಃಶಕ್ತಿಯ...
ಮುಂದೆ ಓದಿ|ಮತ್ತಷ್ಟು...
Marketplace