|
| ದೇಹಕ್ಕೆ ಕಷ್ಟ: ಬೊಜ್ಜಿನ ಸಂಕಷ್ಟ |
| ಬುಧವಾರ, 26 ಸೆಪ್ಟೆಂಬರ್ 2007 ( 16:38 IST ) | |
ಆಧುನಿಕ ಜೀವನ ಶೈಲಿ ನಮ್ಮ ಆಹಾರ ಕ್ರಮದಲ್ಲಿ ಹಲವು ವ್ಯತ್ಯಾಸ ತಂದಿದೆ. ಸುಲಭವಾಗಿ ಸಿಗುವ ವಸ್ತುಗಳನ್ನು ತಿಂದು ಜಿಹ್ವಾ ಚಾಪಲ್ಯ ಅಡಗಿಸುವುದರಲ್ಲೇ ಅನೇಕರು ತೃಪ್ತಿಕಾಣುತ್ತಾರೆ. ಈ ಸಮಸ್ಯೆ ಹೆಚ್ಚಾದಂತೆ ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್, ಮಧುಮೇಹ, ಹೃದಯಾಘಾತ, ಮೂತ್ರ ಪಿಂಡದ ವಿಫಲತೆ ಮುಂತಾದ ವ್ಯಾಧಿಗಳು ಮನುಷ್ಯನ ಬೆನ್ನು ಹತ್ತಿದೆ. ಇದರೊಂದಿಗೆ ಹದಿಹರೆಯವರಲ್ಲೂ ಕಾಣಿಸಿಕೊಂಡಿರುವ ಮತ್ತೊಂದು ಬೃಹತ್ ಸಮಸ್ಯೆಯೆಂದರೆ ಬೊಜ್ಜು.
ಬೊಜ್ಜು ಗಳಿಸುವುದು ಸುಲಭ, ಆದರೆ ಕರಗಿಸುವುದು ಕಷ್ಟ ಎನ್ನುತ್ತಾರೆ ಅನುಭವಸ್ಥರು. ದೇಹ ಸ್ಥೋಲವಾಗುವುದು ಮಾತ್ರವಲ್ಲದೆ, ಕೆಲವೊಮ್ಮೆ ಇಡಿ ಶರೀರ ರಚನೆಯೇ ಅಹಿತಕರವಾಗಿ ಬೆಳೆಯುವ ಸಾಧ್ಯತೆಗಳಿರುತ್ತದೆ. ಸಾಮಾನ್ಯವಾಗಿ ಬೊಜ್ಜಿನ ಸಮಸ್ಯೆಯನ್ನು ಆರೋಗ್ಯದ ಸಮಸ್ಯೆ ಅಲ್ಲ ಎಂದು ನಿರ್ಲಕ್ಷಿಸುವುದರಿಂದ ಹೆಚ್ಚಿನ ಅಪಾಯಗಳು ಉಂಟಾಗುತ್ತವೆ ಎನ್ನುತ್ತಾರೆ ವಿಜ್ಞಾನಿಗಳು. ಶರೀರ ಅಳತೆಗೆ ಮೀರಿ ಬೆಳೆಯುತ್ತಿದ್ದಂತೆ, ಎಚ್ಚರಿಕೆ ವಹಿಸಬೇಕಾದದ್ದು ಅಗತ್ಯ.
ಬೊಜ್ಜು ಸಮಸ್ಯೆ ಅಲ್ಪಮಟ್ಟಿಗೆ ಅನುವಂಶೀಯತೆಯಿಂದಲೂ ಕಾಣಿಸಿಕೊಳ್ಳುತ್ತದೆ. ತಂದೆ ತಾಯಿ ಇಬ್ಬರಿಗೂ ಬೊಜ್ಜು ಇದ್ದರೆ ಅದು ಮಕ್ಕಳಿಗೆ ಬರುವುದು ಸಾಮಾನ್ಯ. ಗಂಡು ಹೆಣ್ಣು ಇಬ್ಬರಲ್ಲೂ ಬೊಜ್ಜಿನ ಸಮಸ್ಯೆ ಕಂಡುಬರುತ್ತದೆ. ಪುರುಷರಲ್ಲಿ 30 ರಿಂದ 35 ವರ್ಷ ವಯಸ್ಸಿನ ನಡುವೆ ಹೆಚ್ಚಾಗಿ ಬೊಜ್ಜು ಕಂಡು ಬಂದರೆ, ಮಹಿಳೆಯರಲ್ಲಿ ಮುಟ್ಟು ನಿಂತ ನಂತರ 45 ರಿಂದ 50 ವರ್ಷದೊಳಗಿನ ನಡುವೆ ಈ ಸಮಸ್ಯೆ ಕಂಡುಬರುತ್ತದೆ.
ಇಂದು ಹೆಚ್ಚಿನ ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುವುದು ದೈಹಿಕ ಶ್ರಮದ ಕೊರತೆಯಿಂದ. ಈಗ ಹಿಂದಿನಂತೆ ಬೆವರು ಹರಿಸಿ ದುಡಿಯಬೇಕಾದ ಅನಿವಾರ್ಯತೆ ಇಲ್ಲದಿರುವುದರಿಂದ ಹಾಗೂ ಬಯಸಿದ್ದೆಲ್ಲವೂ ಕಾಲ ಬಳಿ ಸಿಗುವ ಚಲನರಹಿತ ಬದುಕು ನಿರ್ಮಾಣವಾಗಿರುವುದರಿಂದ ತಿಂದ ಆಹಾರ ಜೀರ್ಣಗೊಂಡು ಕಿಬ್ಬೊಟ್ಟೆಯ ತಳದಲ್ಲಿ ಬೊಜ್ಜಾಗಿ ಶೇಖರಣೆಗೊಳ್ಳುತ್ತದೆ. ಕೆಲವರಿಗೆ ಟಿವಿ ನೋಡುವ ಹುಚ್ಚು ಕೂಡ ಕ್ರಮೇಣವಾಗಿ ಬೊಜ್ಜಿನ ಸಮಸ್ಯೆಗೆ ಕಾರಣವಾಗುತ್ತದೆ ಎನ್ನುತ್ತಾರೆ ಸಂಶೋಧಕರು.
ಬೊಜ್ಜು ನಿಯಂತ್ರಣ ಸುಲಭ. ಆಹಾರ ಸೇವನೆಯಲ್ಲಿ ಸ್ಪಲ್ಪ ಕಡಿವಾಣ ಹಾಕಬೇಕು. ನಿಯಮಿತ ವ್ಯಾಯಾಮದ ಜೊತೆಗೆ ಸೊಪ್ಪು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಬೇಕರಿ ಪದಾರ್ಥಗಳು, ಕೊಲೆಸ್ಟ್ರಾಲ್ ಹೆಚ್ಚಿರುವ ಪದಾರ್ಥಗಳನ್ನು ಸೇವಿವುದನ್ನು ಹವ್ಯಾಸವಾಗಿ ಬೆಳೆಸಿಕೊಳ್ಳಬಾರದು. ಆಹಾರದಲ್ಲಿ ಮೊಳಕೆ ಕಾಳುಗಳ ಬಳಕೆ ಹಾಗೂ ಹಣ್ಣು ಹಂಪಲನ್ನು ಯೆಥೇಚ್ಛವಾಗಿ ಬಳಸುವುದರಿಂದ ಬೊಜ್ಜನ್ನು ಕ್ರಮೇಣ ಕರಗಿಸಬಹುದು.
ಇಂದು ಬೊಜ್ಜು ನಿವಾರಣೆಗೆ ಹಲವಾರು ಚಿಕಿತ್ಸೆಗಳು ನಗರದಲ್ಲಿ ಲಭ್ಯವಿದೆ. ಕೆಲವು ಲಕ್ಷಾಂತರ ರೂಪಾಯಿ ಬೆಲೆಬಾಳುವ ಅತ್ಯಾಧುನಿಕ ಚಿಕಿತ್ಸೆಗಳಾಗಿವೆ. ಬೊಜ್ಜು ಕರಗಿಸಲು ಹೋಗಿ ಹಣ ಕಳೆದುಕೊಂಡವರೂ ಇದ್ದಾರೆ. ಸಂಕಟ ಬಂದಾಗ ವೆಂಕಟರಮಣ ಎನ್ನುವುದಕ್ಕಿಂತ ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಸಾಕು. ಬೊಜ್ಜು ನಿಮ್ಮ ಹತ್ತಿರ ಸುಳಿಯುವ ಪ್ರಶ್ನೆಯೇ ಇಲ್ಲ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಆಕೆ ಚಿತ್ರದಲ್ಲಿ ಆತನ ತಾಯಿಯ ಪಾತ್ರ ನಿರ್ವಹಿಸಿದ್ದರು. ಆದರೆ, 'ಮದರ್ ಇಂಡಿಯ' ಚಿತ್ರದ ಚಿತ್ರೀಕರಣದಲ್ಲಿ ನರ್ಗೀಸ್... |
| |
|
|
|
|
 | | AP |
| | |
| |
|
|
|
|
|
| ವಾಣಿಜ್ಯ ಲೇಖನಗಳು - ಭಾರತೀಯ ತೈಲ ನಿಗಮ(ಇಂಡಿಯನ್ ಆಯಿಲ್ ಕಾರ್ಪೊರೇಶನ್-ಐಒಸಿ)ವು ಹೊಸ 15 ದಶಲಕ್ಷ ಟನ್ ತೈಲ... |
| |
|
|
|
|
|
|
|