|
| ಹಸ್ತ ಥೆರಪಿ |
| ಸೋಮವಾರ, 8 ಅಕ್ಟೋಬರ್ 2007 ( 21:06 IST ) | |
ಶಕ್ತಿ ಚಿಕಿತ್ಸಾ ಪದ್ಧತಿಗಳಲ್ಲಿ ಅತ್ಯಂತ ಸುಲಭವಾದ ಹಾಗೂ ಸರಳವಾದ ಚಿಕಿತ್ಸೆ ಹಸ್ತ ಥೆರಪಿ. ಹೆಸರೇ ಸೂಚಿಸುವಂತೆ ಇದು ಹಸ್ತ ರೇಖೆಗಳ ಮುಖೇನ ನೀಡುವ ಚಿಕಿತ್ಸೆ. ಇದನ್ನು ಅತ್ಯಂತ ಪರಿಣಾಮಕಾರಿ ಹಾಗೂ ಪವಾಡಕಾರಿ ಚಿಕಿತ್ಸೆ ಎಂದೂ ಬಣ್ಣಿಸಲಾಗುತ್ತದೆ. ಪ್ರಾಣಿಕ್ ಚಿಕಿತ್ಸೆಯಂತೆ ಇದನ್ನು ಕ್ರಮಬದ್ಧವಾಗಿ ಗುರುಗಳಿಂದ ಕಲಿಯಬೇಕಿಲ್ಲ ಎನ್ನುವುದು ವಿಶೇಷ.
ಆದರೆ ಹಸ್ತ ಥೆರಪಿ, ಚಿಕಿತ್ಸೆ ನೀಡುವ ವ್ಯಕ್ತಿಯ ನಂಬಿಕೆ, ಮತ್ತು ಅನುಭವವನ್ನು ಅವಲಂಬಿಸಿ ಪ್ರತಿಫಲ ನೀಡುತ್ತದೆ. ಎಲ್ಲರೂ, ಹಸ್ತ ಚಿಕಿತ್ಸೆಯನ್ನು ನೀಡುತ್ತೇನೆಂದು ಹೊರಟರೆ ಅದು ವಿಫಲವಾಗುತ್ತದೆ. ಇದು ಪರ್ಯಾಯ ಚಿಕಿತ್ಸೆಯಾಗಿರುವುದರಿಂದ ಕೆಲವೊಮ್ಮೆ ಎಲ್ಲ ರೋಗಗಳಿಗೂ ಪರಿಹಾರ ಕಂಡುಹಿಡಿಯಲು ಸಾಧ್ಯವಾಗದಿರಬಹುದು. ಅದರಂತೆ ಸ್ವತಃ ವೈದ್ಯರಾಗಲು ಪ್ರಯತ್ನಿಸುವುದೂ ಅಪಾಯಕಾರಿ.
ಹಸ್ತ ಥೆರಪಿಯ ಕೋಷ್ಠಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅದನ್ನು ಅನುಸರಿಸಿ ಚಿಕಿತ್ಸೆ ನೀಡುವುದನ್ನು ಕಲಿತುಕೊಳ್ಳಬಹುದು. ಸಣ್ಣಪುಟ್ಟ ರೋಗಗಳಿಗೆ ಈ ಚಿಕಿತ್ಸೆಯನ್ನು ಪ್ರಯೋಗಿಸಿ ಪರಿಣಾಮ ತಿಳಿದುಕೊಳ್ಳಬಹುದು. ಹಸ್ತ ಚಿಕಿತ್ಸೆಯಲ್ಲಿ ಶಕ್ತಿ ಕೇಂದ್ರಗಳಿಗೆ ಪ್ರಮುಖ ಸ್ಥಾನ ನೀಡಲಾಗಿದ್ದು, ಪ್ರಾಣಿಕ್ ಚಿಕಿತ್ಸಾ ತಂತ್ರದಂತೆ ಇವುಗಳ ತಂತ್ರವನ್ನು ಚಿಕಿತ್ಸಕ ತಿಳಿದುಕೊಂಡಿರಬೇಕು. ಇಲ್ಲದಿದ್ದಲ್ಲಿ ಅಪಾಯ ಉಂಟಾಗುವ ಸಾಧ್ಯತೆ ಇದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ನೀವು 80ನೆಯ ವಯಸ್ಸಿನಲ್ಲಿದ್ದೀರಾ, ಹಾಗಾದರೆ ಜೀವನ ಮುಸ್ಸಂಜೆಯಲ್ಲಿದ್ದೀರಿ ಅಂತ್ ಅರ್ಥ. ತಾರುಣ್ಯದಲ್ಲಿನ... |
| |
|
|
|
|
 | | AP |
| | |
| |
|
|
|
|
|
| ಕಥೆ - "ನಿನ್ನ ಬದುಕಿನ ಸಂಪೂರ್ಣ ಜವಾಬ್ದಾರಿಯನ್ನು ನೀನು ಹೊತ್ತುಕೊಂಡಾಗ ಮಾತ್ರ, ನಿನಗೆ ನಿನ್ನಲ್ಲಿರುವ ಅಂತಃಶಕ್ತಿಯ... |
| |
|
|
|
|
|
|
|