ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಆರೋಗ್ಯ ಥೆರಪಿಗಳು
ಸೌಂದರ್ಯ ವರ್ಧನೆಗೆ ಗ್ವಾಸಾ ಥೆರಪಿ
ಸೋಮವಾರ, 24 ಸೆಪ್ಟೆಂಬರ್ 2007   ( 17:39 IST )
ಪರ್ಯಾಯ ಚಿಕಿತ್ಸಾ ಪದ್ದತಿಯಲ್ಲಿ ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸೆ ಗ್ವಾಸಾ ಚಿಕಿತ್ಸೆ. ಆದರೆ ಹಲವಾರು ಜನರಿಗೆ ಗ್ವಾಸಾ ಚಿಕಿತ್ಸೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಗ್ವಾಸಾ ಅನೇಕ ರೋಗಗಳನ್ನು ಗುಣಪಡಿಸುವುದಲ್ಲದೆ, ಸೌಂದರ್ಯ ವರ್ಧನೆಗೂ ಪ್ರಮುಖ ಪಾತ್ರ ವಹಿಸುತ್ತದೆ. ಗಾಸ್ವಾ ಚಿಕಿತ್ಸೆ "ಮೊಲೆಕ್ಯುಲರ್ ರಿಫಾರ್ಮ್ ಥೆರಪಿ" ತತ್ವದ ಮೇಲೆ ಕಾರ್ಯ ನಿರ್ವಹಿಸುತ್ತದೆ. ಇದನ್ನು ಜೀವ ಕೋಶಗಳ ಸೂಕ್ಷ್ಮ ಮಟ್ಟದ ಚಿಕಿತ್ಸೆ ಎಂದೂ ಕರೆಯಲಾಗುತ್ತದೆ.

ಗ್ವಾಸಾ ಚಿಕಿತ್ಸೆಗೆ ಸುವಾಸನೆ ಭರಿತ ಗ್ವಾಸಾ ಎಣ್ಣೆಯನ್ನು ಬಳಸಲಾಗುತ್ತದೆ. ಇದನ್ನು ಅನೇಕ ಸಸ್ಯಗಳ ತೈಲದಿಂದ ತಯಾರಿಸಲಾಗಿರುತ್ತದೆ. ಇದರ ಒಂದು ಹನಿಯನ್ನು ದೇಹದ ಮೇಲೆ ಹಾಕಿ ಮಸಾಜ್ ಮಾಡಿದರೆ, ಅದು ಚರ್ಮದ ಆಳಕ್ಕೆ ಇಳಿದು ಜೀವಕೋಶಗಳನ್ನು ಪುನಶ್ಚೇತನಗೊಳಿಸುತ್ತದೆ.

ಅನುವಂಶೀಯ ಕಿವುಡು, ನೇತ್ರ ದೋಷಗಳು, ಕಡಿಮೆ ರಕ್ತದೊತ್ತಡ, ಸಂಧಿವಾತ, ಹೃದಯ ಸಂಬಂಧಿತ ನೋವುಗಳು, ತಲೆನೋವು ಮುಂತಾದ ರೋಗಗಳಿಗೆ ಗ್ವಾಸಾ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ಬಳಸಬಹುದು. ಆದರೆ ಗ್ವಾಸ ಚಿಕಿತ್ಸೆ ನೀಡಲು ತರಬೇತಿಯ ಅಗತ್ಯವಿದೆ. ಪರ್ಯಾಯ ಚಿಕಿತ್ಸಾ ಕೇಂದ್ರಗಳಲ್ಲಿ ಈ ಕುರಿತು ತರಬೇತಿ ನೀಡಲಾಗುತ್ತದೆ.

ಗ್ವಾಸ ಚಿಕಿತ್ಸೆಯ ಮುಖ್ಯ ಲಾಭಗಳೆಂದರೆ, ಇದು ಜೈವಿಕ ಕ್ರೀಯೆಯನ್ನು ಉತ್ತಮವಾಗಿಸುತ್ತದೆ. ರಕ್ತ ಸಂಚಾರವನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಆದರೆ, ಈ ಮೇಲೆ ತಿಳಿಸಿದಂತೆ ಚಿಕಿತ್ಸೆಯ ಪೂರ್ವದಲ್ಲಿ ಸೂಕ್ತ ತರಬೇತಿ ಅಗತ್ಯ. ಇಲ್ಲದಿದ್ದರೆ ಅಪಾಯ ಎದುರಿಸಬೇಕಾಗುತ್ತದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಫೋನಿನ ಮೂಲಕ ಟೆಲಿ ಥೆರಪಿ
ಸ್ಫಟಿಕ ಚಿಕಿತ್ಸೆ: ತರಬೇತಿ ಅಗತ್ಯ
ಪ್ರಭಾಯಕಾಯ ಚಿಕಿತ್ಸೆ
ರೇಖೆಗಳ ಮೂಲಕ ರೇಖಿ ಚಿಕಿತ್ಸೆ
ಹಿಪ್ನೊಥೆರಪಿ: ಶ್! ಸುಪ್ತ ಮನಸ್ಸು ಮಾತನಾಡುತ್ತಿದೆ!
ಶರೀರಕ್ಕೆ ಚೈತನ್ಯ ನೀಡುವ ಸ್ನಾನ..!
ಮನರಂಜನೆ
ಚಿತ್ರ ಸುದ್ದಿ - ಆಕೆ ಚಿತ್ರದಲ್ಲಿ ಆತನ ತಾಯಿಯ ಪಾತ್ರ ನಿರ್ವಹಿಸಿದ್ದರು. ಆದರೆ, 'ಮದರ್ ಇಂಡಿಯ' ಚಿತ್ರದ ಚಿತ್ರೀಕರಣದಲ್ಲಿ ನರ್ಗೀಸ್...
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ನೇತ್ರದಾನ: ಅಂಧರ ಬದುಕಿಗೆ ದೃಷ್ಠಿ ದಾನ
ದೇಶದಲ್ಲಿ ದೃಷ್ಠಿಹೀನತೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ನೇತ್ರದಾನ ಮಾಡಲು...
ದಕ್ಷಿಣ ಕಾಶ್ಮೀರದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸರಕಾರ ಅನುಮೋದನೆ
ಕೊಚ್ಚಿಯಲ್ಲಿ ರಾಷ್ಟ್ರೀಯ ಮಧುಮೇಹ-ನೇತ್ರ ತಪಾಸಣೆ ಶಿಬಿರ
ವಾಣಿಜ್ಯ
ವಾಣಿಜ್ಯ ಲೇಖನಗಳು - ಭಾರತೀಯ ತೈಲ ನಿಗಮ(ಇಂಡಿಯನ್ ಆಯಿಲ್ ಕಾರ್ಪೊರೇಶನ್-ಐಒಸಿ)ವು ಹೊಸ 15 ದಶಲಕ್ಷ ಟನ್ ತೈಲ...
ಮುಂದೆ ಓದಿ|ಮತ್ತಷ್ಟು...
Marketplace