ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಆರೋಗ್ಯ ಥೆರಪಿಗಳು
ರೇಖೆಗಳ ಮೂಲಕ ರೇಖಿ ಚಿಕಿತ್ಸೆ
ಸೋಮವಾರ, 10 ಸೆಪ್ಟೆಂಬರ್ 2007   ( 19:02 IST )
ಇತ್ತೀಚೆಗೆ ಸಾಕಷ್ಟು ಜನಪ್ರೀಯವಾಗಿರುವ ಚಿಕಿತ್ಸೆ ರೇಖಿ. ರೇಖಿ ಚಿಕಿತ್ಸೆಯನ್ನು ಕಲಿಯಲು ಹಲವರು ಮುಂದೆ ಬರುತ್ತಿದ್ದು, ಕಲಿಯುವುದು ಕೂಡ ಸುಲಭವಾಗಿದೆ. ಯಾವುದೇ ಚಿಕಿತ್ಸೆ ಕ್ರಮದಲ್ಲಿ ನಂಬಿಕೆ ಬಹು ಮುಖ್ಯವಾಗಿದ್ದು, ರೇಖಿ ಚಿಕಿತ್ಸೆಯಲ್ಲೂ ಕೂಡ ಚಿಕಿತ್ಸೆಗೊಳಗಾಗುವ ವ್ಯಕ್ತಿಯಲ್ಲಿ ಈ ರೋಗಪ್ರತಿರೋಧಕ ಮಾರ್ಗದ ಕುರಿತು ನಂಬಿಕೆ ಇರಬೇಕಾಗುತ್ತದೆ.

ರೇಖಿ ಚಿಕಿತ್ಸೆ ಕೊಡಲು ಹಾಗೂ ಚಿಕಿತ್ಸೆ ವಿಧಾನವನ್ನು ಕಲಿಯಲು ಸಾಕಷ್ಟು ತಾಳ್ಮೆ ಬೇಕು. ಚಿಕಿತ್ಸಕರು ಕೂಡ ಮೂರು ನಾಲ್ಕು ರೋಗಿಗಳಿಗೆ ನಿರಂತರವಾಗಿ ಚಿಕಿತ್ಸೆ ನೀಡಿದರೆ ದಣಿದುಬಿಡುವ ಸಂಭವಗಳಿವೆ. ರೇಖಿ ಸಮಗ್ರ ಚಿಕಿತ್ಸೆಯಾಗಿದ್ದು, ಚಿಕಿತ್ಸಕನ ಹಸ್ತದ ಮುಖಾಂತರ ಹರಿಯುವ ಶಕ್ತಿಯಿಂದ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಸೃಷ್ಟಿಯಾಗುತ್ತದೆ. ರೇಕಿ ತರಬೇತಿಗೆ ಗುರುಗಳಿಂದ ದೀಕ್ಷೆ ತೆಗೆದುಕೊಳ್ಳಬೇಕಾಗುತ್ತದೆ.

ರೇಖಿ ಎಂದರೆ "ವಿಶ್ವ ಶಕ್ತಿ" ಎಂಬ ಅರ್ಥ ಜಪಾನಿ ಭಾಷೆಯಲ್ಲಿದೆ. ಜಪಾನಿನ ಮಿಕಾವೊ ಉಸೊಯಿ ಎನ್ನುವ ವೈದ್ಯರೊಬ್ಬರು ಮೊದಲ ಬಾರಿಗೆ ರೇಖಿ ಚಿಕಿತ್ಸೆಯನ್ನು ಜಗತ್ತಿಗೆ ಪರಿಚಯಿಸಿದರು. ಪ್ರಾರಂಭದಲ್ಲಿ ರೇಖಿ ಚಿಕಿತ್ಸೆ ಅಷ್ಟೊಂದು ಜನಪ್ರಿಯತೆ ಗಳಿಸಲಿಲ್ಲ. ಹಲವರು ಇದನ್ನು ಮೂಢನಂಬಿಕೆ ಎಂದು ಕರೆದರು. ರೇಖಿ ಚಿಕಿತ್ಸಕನೂ ಕೂಡ ತನ್ನ ಅನುಭವ ಹಾಗೂ ತರಬೇತಿಯ ಹಿನ್ನೆಲೆಯಲ್ಲಿ ಡಿಗ್ರಿಗಳನ್ನು ಪಡೆದುಕೊಂಡಿರುತ್ತಾನೆ. ರೇಖಿ ಮಾಸ್ಟರ್ ಆಗಬೇಕೆನ್ನುವವರು ಮೂರನೇ ಡಿಗ್ರಿಯ ಚಿಕಿತ್ಸೆಯನ್ನು ಕರಗತ ಮಾಡಿಕೊಂಡಿರಬೇಕು.

ರೇಖಿ ಚಿಕಿತ್ಸೆ ಪ್ರಮುಖವಾಗಿ ಐದು ಅಂಶಗಳ ಮೇಲೆ ಅವಲಂಬಿತಗೊಂಡಿದೆ. ಚಿಕಿತ್ಸೆ ಪಡೆಯುವ ವ್ಯಕ್ತಿಗೆ ಮೊದಲು ಇದನ್ನು ಬೋಧಿಸಲಾಗುತ್ತದೆ. ಅದು ಹೀಗಿದೆ. 1. ಈ ದಿನ ನಾನು ತಾಳ್ಮೆಗೆಡುವುದಿಲ್ಲ. 2. ಈ ದಿನ ನಾನು ಚಿಂತಿಸುವುದಿಲ್ಲ. 3. ಇಂದು ನಾನು ನನ್ನ ಪಾಲಿನ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತೇನೆ. 4. ಈ ದಿನ ನಾನು ಎಲ್ಲರ ಮೇಲೆ ಕರುಣೆ ಹೊಂದಿರುತ್ತೇನೆ ಹಾಗೂ 5. ಇಂತಹ ಉತ್ತಮ ದಿನಕ್ಕಾಗಿ ನಾನು ದೇವರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಇದನ್ನು ರೇಖಿ ಚಿಕಿತ್ಸೆಯ "ಪಂಚಸೂತ್ರಗಳು" ಎಂದು ಕರೆಯಲಾಗುತ್ತದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹಿಪ್ನೊಥೆರಪಿ: ಶ್! ಸುಪ್ತ ಮನಸ್ಸು ಮಾತನಾಡುತ್ತಿದೆ!
ಶರೀರಕ್ಕೆ ಚೈತನ್ಯ ನೀಡುವ ಸ್ನಾನ..!
ಕಫ ನಿವಾರಣೆಗೆ ಉಗಿ ಚಿಕಿತ್ಸೆ
ನಿಶ್ಚಿಂತೆಯ ಜೀವನಕ್ಕೆ ನಿಸರ್ಗ ಚಿಕಿತ್ಸೆ
ಅಂಗಾಲಿಗೆ ಬೇಕು ಝೋನ್ ಥೆರಪಿ
ಸಧೃಡ ಶರೀರಕ್ಕೆ ಸೂರ್ಯಸ್ನಾನ
ಮನರಂಜನೆ
ಚಿತ್ರ ಸುದ್ದಿ - ಆಕೆ ಚಿತ್ರದಲ್ಲಿ ಆತನ ತಾಯಿಯ ಪಾತ್ರ ನಿರ್ವಹಿಸಿದ್ದರು. ಆದರೆ, 'ಮದರ್ ಇಂಡಿಯ' ಚಿತ್ರದ ಚಿತ್ರೀಕರಣದಲ್ಲಿ ನರ್ಗೀಸ್...
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ನೇತ್ರದಾನ: ಅಂಧರ ಬದುಕಿಗೆ ದೃಷ್ಠಿ ದಾನ
ದೇಶದಲ್ಲಿ ದೃಷ್ಠಿಹೀನತೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ನೇತ್ರದಾನ ಮಾಡಲು...
ದಕ್ಷಿಣ ಕಾಶ್ಮೀರದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸರಕಾರ ಅನುಮೋದನೆ
ಕೊಚ್ಚಿಯಲ್ಲಿ ರಾಷ್ಟ್ರೀಯ ಮಧುಮೇಹ-ನೇತ್ರ ತಪಾಸಣೆ ಶಿಬಿರ
ವಾಣಿಜ್ಯ
ವಾಣಿಜ್ಯ ಲೇಖನಗಳು - ಭಾರತೀಯ ತೈಲ ನಿಗಮ(ಇಂಡಿಯನ್ ಆಯಿಲ್ ಕಾರ್ಪೊರೇಶನ್-ಐಒಸಿ)ವು ಹೊಸ 15 ದಶಲಕ್ಷ ಟನ್ ತೈಲ...
ಮುಂದೆ ಓದಿ|ಮತ್ತಷ್ಟು...
Marketplace