ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಆರೋಗ್ಯ ಥೆರಪಿಗಳು
ಹಿಪ್ನೊಥೆರಪಿ: ಶ್! ಸುಪ್ತ ಮನಸ್ಸು ಮಾತನಾಡುತ್ತಿದೆ!
ಶುಕ್ರವಾರ, 7 ಸೆಪ್ಟೆಂಬರ್ 2007   ( 16:47 IST )
Hypnotism
AP
"ಹಿಪ್ನಾಟಿಸಂ" ಅಥವಾ "ಸಮ್ಮೋಹಿನಿ ವಿದ್ಯೆ"ಯ ಕುರಿತು ಎಲ್ಲರಿಗೂ ಕುತೂಹಲೇ ಇದ್ದದ್ದೇ. 19ನೇ ಶತಮಾನದ ಮಧ್ಯಭಾಗದಲ್ಲಿ ಜೇಮ್ಸ್ ಬ್ರೇಡ್ ಎನ್ನುವ ವ್ಯಕ್ತಿ ಈ ವಿದ್ಯೆಯನ್ನು ವೈಜ್ಞಾನಿಕ ತಳಹದಿಯ ಮೇಲೆ ಪ್ರಯೋಗಿಸಿ ಯಶಸ್ವಿಯಾದ. ಮೊದ ಮೊದಲು ವೈದ್ಯಕೀಯ ಸಮಾಜ ಹಿಪ್ನಾಟಿಸಂ ಚಿಕಿತ್ಸೆಯನ್ನು ಒಪ್ಪಿಕೊಳ್ಳಲಿಲ್ಲ. 1891ರಲ್ಲಿ ಬ್ರಿಟಿಷ್ ಮೆಡಿಕಲ್ ಅಸೋಸಿಯೇಷನ್ ಹಿಪ್ನಾಟಿಸಂ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು 11 ತಜ್ಞ ವೈದ್ಯರ ನಿಯೋಗವನ್ನು ರಚಿಸಿತು. ಈ ವರದಿ ಆಧರಿಸಿ, ಯುಕೆ ಕೌನ್ಸಿಲ್ ಫಾರ್ ಸೈಕೋಥೆರಪಿ, ಹಿಪ್ನಾಟಿಸಂ ಚಿಕಿತ್ಸೆಯನ್ನು ವೈಜ್ಞಾನಿಕ ಎಂದು ಘೋಷಿಸಿತು.

ಬ್ರಿಟಿಷ್ ಮೆಡಿಕಲ್ ಅಸೋಸಿಯೇಷನ್ ನೀಡಿದ ವರದಿಯ ನಂತರ ಹಿಪ್ನಾಟಿಸಂ ಚಿಕಿತ್ಸೆ ಪ್ರಸಿದ್ಧವಾಗಿ, ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆಗೆ ಬಂತು. ಇದು ಚಿಕಿತ್ಸೆಯ ಹಿನ್ನೆಲೆಯಾದರೆ, ನಮ್ಮ ಸುಪ್ತ ಮನಸ್ಸು ಸಮ್ಮೋಹನಕ್ಕೊಳಗಾದಾಗ ಸಮ್ಮೋಹಿನಿ ಚಿಕಿತ್ಸಕನ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತದೆ. ಇದು ಹಿಪ್ನಾಟಿಸಂ ಚಿಕಿತ್ಸೆಯ ಗುಟ್ಟು. ಆಶ್ಚರ್ಯವೆಂದರೆ, ವಿಪರೀತ ಧೂಮಪಾನಿಯನ್ನು ಹಿಪ್ನಾಟಿಸಂ ಚಿಕಿತ್ಸೆಗೊಳಪಡಿಸಿ, ಆತ ಸಮ್ಮೋಹನಕ್ಕೊಳಗಾದಾಗ ಇನ್ನು ಮೇಲೆ ನೀನು ಸಿಗರೇಟು ಸೇದಲೇಬಾರದು, ಸೇದಿದರೆ ವಾಂತಿ ಮಾಡಿಕೊಳ್ಳುತ್ತೀಯಾ ಎಂದು ಆಜ್ಞಾಪಿಸಿದರೆ, ಮುಂದೆ ಎಂದಿಗೂ ಆತ ಸಿಗರೇಟು ಸೇದುವ ಗೋಜಿಗೆ ಹೋಗುವುದಿಲ್ಲ. ಸಿಗರೇಟು ಸೇದಿದರೆ ವಾಂತಿ ಮಾಡಿಕೊಳ್ಳುತ್ತೇನೆ, ಸೇದಲೇಬಾರದು ಎನ್ನುವುದು ಆತನ ಸುಪ್ತ ಮನಸ್ಸಿನಲ್ಲಿ ದಾಖಲಾಗಿ ಬಿಟ್ಟಿರುತ್ತದೆ.

ಹಿಪ್ನೊಥೆರಫಿಯನ್ನು ಕೆಲವರು ಮೂಢನಂಬಿಕೆ- ಮೋಸ ಎಂದು ಕರೆಯುತ್ತಾರೆ. ನಮ್ಮ ಮನಸ್ಸಿಗೆ ಅದ್ಭುತವಾದ ನೆನಪಿನ ಶಕ್ತಿಯಿದೆ. ಸಾವಿರಾರು ವರ್ಷಗಳ ಹಿಂದೆ ಘಟಿಸಿದ ಘಟನೆಗಳನ್ನು ಕೂಡ ನಮ್ಮ ಸುಪ್ತ ಮನಸ್ಸು ದಾಖಲಿಸಿಟ್ಟುಕೊಂಡಿರುತ್ತದೆ. ನಮ್ಮ ಅಂತಃಪ್ರಜ್ಞೆಯಲ್ಲಿ ದಾಖಲಾದ ಇಂತಹ ವಿಷಯಗಳನ್ನು ಹಿಪ್ನಾಟಿಸಂನಿಂದ ಹೊರಗೆಳೆದು ರೋಗಿಯನ್ನು ಗುಣಪಡಿಸಬಹುದು. ಆದರೆ ರೋಗಿಗೆ ಹಿಪ್ನಾಟಿಸಂ ಚಿಕಿತ್ಸೆಯಲ್ಲಿ ನಂಬಿಕೆ ಮುಖ್ಯ. ಒಂದು ಚಿಕ್ಕ ನಿದ್ರೆಯಿಂದ ಎದ್ದಂತೆ ರೋಗಿ, ಹಿಪ್ನಾಟಿಸಂ ಚಿಕಿತ್ಸೆಯ ನಂತರ ಎದ್ದು ಕೂರುತ್ತಾನೆ. ನಿದ್ರೆಯಲ್ಲಿ ಮಾತನಾಡಿದ ಯಾವುದೇ ಅಂಶಗಳು ಆತನ ಸ್ಥಿರ ಮನಸ್ಸಿನಲ್ಲಿ ಇರುವುದಿಲ್ಲವಾದ್ದರಿಂದ, ನಾನು ಎಲ್ಲವನ್ನೂ ಬಾಯಿಬಿಟ್ಟಿದ್ದೇನೆ ಎನ್ನುವ ಕೀಳರಿಮೆ ಆಗಲಿ ಭಯವಾಗಲಿ ಆತನಲ್ಲಿರುವುದಿಲ್ಲ. ಆತ ಹೊಸ ಮನುಷ್ಯನಾಗಿರುತ್ತಾನೆ.

ಹಿಪ್ನೊಥೆರಫಿಯನ್ನು ಪ್ರಯೋಗಿಸುವುದೆಂದರೆ ಹುಡುಗಾಟಿಕೆಯ ಮಾತಲ್ಲ. ಸಾಕಷ್ಟು ಪೂರ್ವಸಿದ್ಧತೆ ಹಾಗೂ ಅನುಭವ ಅಗತ್ಯ. ಅಳಲೆಕಾಯಿ ಪಂಡಿತರಿಂದ ಸಮ್ಮೋಹಿನಿ ವಿದ್ಯೆ ಸಾಧ್ಯವಿಲ್ಲ. ನಿಮಗೆ ಈ ಚಿಕಿತ್ಸೆಯಲ್ಲಿ ನಂಬಿಕೆ ಮೂಡುತ್ತಿಲ್ಲವೇ?ಹಾಗಾದರೆ, ಲಘು ಸಮ್ಮೋಹಿನಿ ವಿದ್ಯೆಯನ್ನು ನೀವೆ ಪ್ರಯೋಗಿಸಿ ಪರೀಕ್ಷಿಸಬಹುದು.

ಉದಾಹರಣೆಗೆ, ನಿಮಗೆ ತಲೆನೋವು, ಮೈಕೈನೋವು, ಪ್ರಯಾಣದ ಆಯಾಸ ಇತ್ಯಾದಿಗಳು ಕಾಡುತ್ತಿವೆ ಎಂದಿಟ್ಟುಕೊಳ್ಳಿ. ಈಗ ಪರೀಕ್ಷೆ ಪ್ರಾರಂಭಿಸಿ. ಒಂದು ಕಡೆ ಶಾಂತರಾಗಿ ಕುಳಿತು ಕಣ್ಣು ಮುಚ್ಚಿಕೊಳ್ಳಿ. ನಿಮಗೆ ನೀವೆ ಹೇಳಿಕೊಳ್ಳಿ. ಓ ತಲೆ ನೋವೇ, ನಿನ್ನನ್ನು ನನ್ನ ದೇಹದಿಂದ ಹೇಗೆ ಹೊರಗೆ ಹಾಕುತ್ತೀನಿ ನೋಡು. ನನ್ನ ತಲೆಯ ಎರಡೂ ಕಡೆಯಲ್ಲಿರುವ ನೋವನ್ನು ನಾನಿದೋ ಮಧ್ಯ ಭಾಗಕ್ಕೆ ಸರಿಸಿಕೊಂಡು ಬರುತ್ತಿದ್ದೇನೆ. ನೋವು ನಿಧಾನವಾಗಿ ಮಧ್ಯ ಭಾಗದಲ್ಲಿ ಒಟ್ಟುಗೂಡುವಂತೆ ಕಲ್ಪಿಸಿಕೊಳ್ಳಿ. ನಿಮ್ಮ ಹಣೆಯ ಮೇಲ್ಬಾಗದಲ್ಲಿರುವ ನೋವನ್ನು ಮೇಲ್ಭಾಗಕ್ಕೆ ತಳ್ಳಿ. ಓಹೋ! ಇಷ್ಟೊಂದು ನೋವು ನನ್ನ ತಲೆಯಲ್ಲಿ ಸಂಗ್ರಹವಾಗಿತ್ತಾ? ಇದೋ ನಾನೀಗ ಎಲ್ಲ ನೋವನ್ನು ಒಟ್ಟುಗೂಡಿಸಿ ತಲೆಯ ಮೇಲ್ಭಾಗದಿಂದ ಹೊರಗಡೆ ಕಳುಹಿಸುತ್ತಿದ್ದೀನಿ. ಅಮ್ಮಾ! ಎಲ್ಲಾ ನೋವು ಹೊರಹೋಯಿತು. ತಲೆ ಹಗುರವಾದಂತೆ ಅನಿಸುತ್ತಿದೆಯಲ್ಲವೇ. ನನ್ನ ತಲೆ ನೋವು ಬೇರು ಸಹಿತ ಕಿತ್ತೊಗೆದೆ ಎಂದು ಭಾವಿಸಿ ಕಣ್ಣು ತೆಗೆಯಿರಿ. ನಿಜವಾಗಿಯೂ ತಲೆ ನೋವು ಮಾಯವಾಗಿರುತ್ತದೆ.

ಈ ಪರೀಕ್ಷೆಯನ್ನು ಮಾಡುವ ಮುನ್ನ ನಿಮಗೆ ಇದರಲ್ಲಿ ನಂಬಿಕೆ ಅಗತ್ಯ ಹಾಗೂ ಎಲ್ಲ ಪ್ರಸಂಗವೂ ನಿಜವಾಗಿಯೂ ನಡೆಯುತ್ತಿದೆ ಎಂದು ಕಲ್ಪಿಸಿಕೊಂಡು ಆ ಕ್ರಿಯೆಯಲ್ಲಿ ಮಗ್ನರಾಗಬೇಕು, ಒಂದು ರೀತಿ ಹಗಲುಗನಸು ಕಂಡಂತೆ ಭಾಸವಾಗಬೇಕು. ಇದೊಂದು ಉದಾರಣೆಯಷ್ಟೇ.

ಹಿಪ್ನಾಟಿಸಂ ವೈಜ್ಞಾನಿಕವಾಗಿ ಸಾಬೀತಾಗಿದೆ. ನಿದ್ರಾಹೀನತೆ, ಧೂಮಪಾನ, ಕೀಳರಿಮೆ ಖಿನ್ನತೆ, ಮೇನಿಯಾ, ಮುಂತಾದ ಮನೋಬೇನೆಗೆ ಹಿಪ್ನೊಥೆರಫಿ ಚಿಕಿತ್ಸೆಯನ್ನು ಪಡೆಯಬಹುದು. ನಿಮಗೆ ಒಂದು ಕಡೆ ಕೂತು ಓದುವ ಏಕಾಗ್ರತೆ ಇಲ್ಲವೆ? ಹಿಪ್ನಾಟಿಸಂನಿಂದ 10-12 ಗಂಟೆಗಳ ಕಾಲ ಕದಲದೆ ಒಂದೆಡೆ ಕುಳಿತು ಗಂಟಾನುಗಟ್ಟಲೆ ಓದಬಹುದು ಹಾಗೂ ಈ ಚಿಕಿತ್ಸೆಯನ್ನು ನಮ್ಮ ಮೇಲೆ ನಾವೇ ಪ್ರಯೋಗಿಸಬಹುದು. ಆದರೆ, ಪ್ರಯೋಗ ಪೂರ್ವದಲ್ಲಿ ಚಿಕಿತ್ಸೆಯ ಬಗ್ಗೆ ಸರಿಯಾಗಿ ತಿಳಿದುಕೊಂಡಿರುವುದು ಅಗತ್ಯ. ಇಲ್ಲದಿದ್ದರೆ ಅಪಾಯ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಶರೀರಕ್ಕೆ ಚೈತನ್ಯ ನೀಡುವ ಸ್ನಾನ..!
ಕಫ ನಿವಾರಣೆಗೆ ಉಗಿ ಚಿಕಿತ್ಸೆ
ನಿಶ್ಚಿಂತೆಯ ಜೀವನಕ್ಕೆ ನಿಸರ್ಗ ಚಿಕಿತ್ಸೆ
ಅಂಗಾಲಿಗೆ ಬೇಕು ಝೋನ್ ಥೆರಪಿ
ಸಧೃಡ ಶರೀರಕ್ಕೆ ಸೂರ್ಯಸ್ನಾನ
ಉತ್ತಮ ಜೀವನ ಕ್ರಮಕ್ಕೆ ಪಿರಮಿಡ್ ಚಿಕಿತ್ಸೆ
ಮನರಂಜನೆ
ಚಿತ್ರ ಸಮೀಕ್ಷೆ - ಆರ್.ಎಸ್.ಗೌಡ ನಿರ್ಮಾಣದ, ಎಸ್.ಮಹೇಂದರ್ ನಿರ್ದೇಶನದ, ಶಿವರಾಜ್ ಕುಮಾರ್ ನಿರ್ದೇಶನದ "ಗಂಡನ ಮನೆ" ರಾಜ್ಯಾದ್ಯಂತ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
ಹುಷಾರು! ಮಗುವಿಗೆ ಎಲ್ಲ ತಿಳಿಯುತ್ತೆ
ಅಯ್ಯೋ ಮಗುವಿಗೇನು ತಿಳಿಯುತ್ತೆ? ಎನ್ನುವುದನ್ನು ನಾವು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೇಳಿದ್ದೇವೆ. ಚಿಕ್ಕ ಮಕ್ಕಳಿಗೆ ಏನೂ ತಿಳಿಯುವುದಿಲ್ಲ ಎನ್ನುವುದು ದೊಡ್ಡವರ ವಿಚಾರ
ಮೊಬೈಲ್ ಬಳಕೆಯಿಂದ ಕ್ಯಾನ್ಸರ್
ಪಾರ್ಶ್ವವಾಯು: ಎಚ್ಚರಿಕೆ ಅಗತ್ಯ
ವಾಣಿಜ್ಯ
ವಾಣಿಜ್ಯ ಲೇಖನಗಳು - ಭಾರತ ದೇಶದ ಮಣ್ಣಿನ ಮಹಿಮೆಯೆ ಅಂತಹುದು, ಚಿನ್ನದ ನಾಡು ಹೊನ್ನಿನ ಬೀಡು ಎಂದೆಲ್ಲ ಪ್ರಸಿದ್ದವಾಗಿರುವ ಭಾರತ...
ಮುಂದೆ ಓದಿ|ಮತ್ತಷ್ಟು...
Marketplace