ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಆರೋಗ್ಯ ಥೆರಪಿಗಳು
ಶರೀರಕ್ಕೆ ಚೈತನ್ಯ ನೀಡುವ ಸ್ನಾನ..!
Kids bath
AP
ದಿನನಿತ್ಯ ಮಾಡುವ ಒಂದು ಸಹಜ ಪ್ರಕ್ರಿಯೆ ಸ್ನಾನ. ಅದರಲ್ಲೇನು ವಿಶೇಷ ಎನ್ನುತ್ತೀರಾ? ವಿಶೇಷ ಇದೆ. ಬಹಳಷ್ಟು ಜನರಿಗೆ ಸ್ನಾನದ ಮಹತ್ವ ಹಾಗೂ ಉದ್ದೇಶ ತಿಳಿದಿಲ್ಲ. ನಾಲ್ಕು ಚಂಬು ನೀರು ಸುರುವಿ, ಶಾಸ್ತ್ರ ಮುಗಿಸಿದರೆ ಸಾಕು ಅನ್ನುವವರೇ ಹೆಚ್ಚು.

ದೇಹವನ್ನು ಸ್ಪಚ್ಟವಾಗಿರಿಸುವುದು ಹಾಗೂ ರಕ್ತ ಪರಿಚಲನೆಯನ್ನು ಚುರುಕುಗೊಳಿಸುವುದು ಸ್ನಾನದ ಪ್ರಮುಖ ಉದ್ದೇಶಗಳು. ನೀರು ಒಂದು ಸ್ವಚ್ಚಕಾರಕ. ದೇಹದ ಚರ್ಮದಲ್ಲಿ ಅಡಗಿರುವ ಮಿಲಿಯನ್‌ಗಟ್ಟಲೆ ರಂಧ್ರಗಳ ಮೂಲಕ ಚರ್ಮ ಉಸಿರಾಡುತ್ತದೆ. ಈ ರಂಧ್ರಗಳಲ್ಲಿ ಅಡಗಿರುವ ಕೊಳೆಯನ್ನು ಸ್ನಾನ ನಿವಾರಿಸುತ್ತದೆ. ಸ್ನಾನ ಮಾಡಿ ಮೈ ಒರೆಸುವಾಗ ಒಂದು ನವಿರಾದ ಅನುಭವಕ್ಕೊಳಗಾದರೆ ಅದು ರಕ್ತ ಪರಿಚಲನೆ ಚರುಕುಗೊಂಡ ಸೂಚನೆ.

ಸ್ನಾನದಿಂದ ನಮ್ಮ ಚರ್ಮದ ರಂಧ್ರಗಳಲ್ಲಿ ಅಡಗಿರುವ ಕೊಳೆ ಹೊರಬಂದು ಶರೀರ ಶುಚಿಯಾಗುವುದಲ್ಲದೆ, ದೇಹಕ್ಕೆ ಚೈತನ್ಯ ನೀಡುತ್ತದೆ. ನಿಂಬೆ ರಸ ಬೆರೆಸಿದ ಉಗುರು ಬೆಚ್ಚಗಿನ ಸ್ನಾನ ಆರೋಗ್ಯಕ್ಕೆ ಒಳ್ಳೆಯದು. ಅತಿ ಬಿಸಿ ನೀರಿನ ಸ್ನಾನ ಅಪಾಯಕಾರಿ. ಆದರೆ ರಾತ್ರಿ ಮಲಗುವ ಮುನ್ನ ಬಿಸಿನೀರಿನ ಸ್ನಾನ ಮಾಡುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ. ಬಿಸಿ ನೀರು ಸ್ನಾನದಿಂದ ಹಲವು ಪ್ರಯೋಜನಗಳಿವೆಯಾದರೂ, ತಣ್ಣೀರು ಸ್ನಾನ ಮಾಡುವುದೊಳಿತು. ತಣ್ಣೀರು ಸ್ನಾನವನ್ನು ಉಟಕ್ಕೆ ಮೂರು ಗಂಟೆಗಳ ಮೊದಲು ಅಥವಾ ಊಟವಾದ ನಂತರ ಮೂರು ಗಂಟೆಗಳ ನಂತರ ಮಾಡಬೇಕು.

ಸ್ನಾನ ಮಾಡುವ ಮೊದಲು ಶರೀರದ ಎಲ್ಲಾ ಭಾಗಗಳನ್ನು ಅಂಗೈ ಅಥವಾ ಭಟ್ಟೆಯಿಂದ ಮೃದು ಒತ್ತಡ ಹಾಕಿ ಮೂಲಕ ಉಜ್ಜುವುದು ಒಳ್ಳೆಯುದು. ಲಘು ವ್ಯಾಯಾಮ ಮಾಡಿ ಬೆರಳಿದ ನಂತರ ಸಾವಧಾನವಾಗಿ ಸ್ನಾನ ಮಾಡುವುದು ಇನ್ನೂ ಉತ್ತಮ. ಸ್ನಾನ ಮಾಡುವಾಗ ಅವರಸದಿಂದ ಮಾಡದೆ ದೇಹದ ಪ್ರತಿಯೊಂದು ಭಾಗಗಳಿಗೂ ನಮ್ಮ ಅಂಗೈಯಿಂದ ತಿಕ್ಕಿ ಮಸಾಜ್ ಮಾಡುವುದರಿಂದ ಶರೀರದ ನವೆ, ತುರಿಕೆ, ಅಲರ್ಜಿ, ಮುಖದ ಮೇಲೆ ಮೊಡವೆ ಏಳುವುದು ಮುಂತಾದ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು. ಸ್ನಾನದಿಂದ ದೇಹ ಶುಚಿಯಾಗಿರುವುದಲ್ಲದೆ, ಮನಸ್ಸೂ ಆಹ್ಲಾದಕರವಾಗಿರುತ್ತದೆ.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕಫ ನಿವಾರಣೆಗೆ ಉಗಿ ಚಿಕಿತ್ಸೆ
ನಿಶ್ಚಿಂತೆಯ ಜೀವನಕ್ಕೆ ನಿಸರ್ಗ ಚಿಕಿತ್ಸೆ
ಅಂಗಾಲಿಗೆ ಬೇಕು ಝೋನ್ ಥೆರಪಿ
ಸಧೃಡ ಶರೀರಕ್ಕೆ ಸೂರ್ಯಸ್ನಾನ
ಉತ್ತಮ ಜೀವನ ಕ್ರಮಕ್ಕೆ ಪಿರಮಿಡ್ ಚಿಕಿತ್ಸೆ
ದೇಹ ಮನಸ್ಸುಗಳನ್ನು ಆರೋಗ್ಯವಾಗಿಟ್ಟುಕೊಳ್ಳಿ
ಸಾಹಿತ್ಯ
ಪ್ರೇಮಗಾಥೆ - ಹುಡುಗಿ ನಾನು ನಿನಗೆ ಏನು ಗಿಪ್ಟ್ ಕೊಡಲಿ? ನಿನಗೆ ಏನು ಕೊಟ್ಟರೂ ಕಡಿಮೆಯೇ. ಹಾಗಂತ ಏನೂ ಕೊಡದೇ ಇರುವುದಕ್ಕೂ ನನ್ನ ಮನಸ್ಸು ಒಪ್ಪುತ್ತಿಲ್ಲ. ಏನು ಕೊಡಲಿ ಎಂದು ನಿನ್ನನ್ನು ಕೇಳಿದರೆ ಅದನ್ನು ನೀನು ಬಾಯಿ ಬಿಟ್ಟು ಏನೂ ಹೇಳುತ್ತಿಲ್ಲ.
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಕಡಿಮೆ ತೂಕದಿಂದ ಸುಖ ಪ್ರಸವ!
ಗರ್ಭಧಾರಣೆಯ ಪೂರ್ವದಲ್ಲಿ ಹೆಚ್ಚು ತೂಕ ಹೊಂದಿರುವ ಹಾಗೂ ಸ್ಥೂಲಕಾಯದ ಮಹಿಳೆಯರು ಹೆರಿಗೆ ಸಂದರ್ಭದಲ್ಲಿ...
ಮೂಳೆ ಮುರಿತಕ್ಕೆ ಲಿಥಿಯಂ ಚಿಕಿತ್ಸೆ
ಕ್ಯಾನ್ಸರ್ ಚಿಕಿತ್ಸೆಗೆ ತಂಬಾಕು ಲಸಿಕೆ!
ಸಮಾಚಾರ
ದೇಶ - 1950ರ ಜನವರಿ 26ರಂದು ಭಾರತ ಬ್ರಿಟನ್‌ನೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡು ಗಣರಾಜ್ಯವಾಯಿತು. ಡಾ.ರಾಜೇಂದ್ರ ಪ್ರಸಾದ್, ಸ್ವತಂತ್ರ ಭಾರತದ ಮೊತ್ತ ಮೊದಲ ರಾಷ್ಟ್ರಪತಿಯಾದರು.
ಮುಂದೆ ಓದಿ|ಮತ್ತಷ್ಟು...
Marketplace