|
| ಮಹಿಳೆಯರ ಆತ್ಮೀಯತೆ ಮಾನಸಿಕ ನೆಮ್ಮದಿ |
| ನವದೆಹಲಿ (ಏಜೆನ್ಸಿ), ಶುಕ್ರವಾರ, 28 ಡಿಸೆಂಬರ್ 2007 ( 22:50 IST ) | |
ಗೆಳತಿಯರ ಕೊರತೆ ಎದುರಿಸುವ ಮಹಿಳೆಯರು ಅಕಾಲಿಕ ಸಾವನ್ನು ಹೊಂದುವ ಅಪಾಯವಿರುತ್ತದೆ ಮತ್ತು ಸಾವಿನಿಂದ ಉಂಟಾಗುವ ಅಗಲಿಕೆ ಮತ್ತಿತರ ಆಘಾತಗಳಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅಧ್ಯಯನದ ವರದಿಯೊಂದು ತಿಳಿಸಿದೆ.
ಮಹಿಳೆಯರ ಆತ್ಮೀಯತೆ ಚಟುವಟಿಕೆಗಳು ಒತ್ತಡ ನಿರ್ವಹಣೆಯ ಕಾರ್ಯತಂತ್ರವಾಗಿ ಕೆಲಸಮಾಡುತ್ತದೆ ಮತ್ತು ಆರೋಗ್ಯದ ಮೇಲೂ ಒಳ್ಳೆಯ ಪರಿಣಾಮ ಬೀರುತ್ತದೆ ಎಂದು ಅಧ್ಯಯನದ ವರದಿ ತಿಳಿಸಿದೆ.
ಮಹಿಳೆ ಮಾನಸಿಕ ಒತ್ತಡದಲ್ಲಿದ್ದಾಗ ಆಕ್ಸಿಟೋಸಿನ್ ಹಾರ್ಮೋನ್ ಒತ್ತಡದ ಪರಿಣಾಮವಾಗಿ ಬಿಡುಗಡೆಯಾಗುತ್ತದೆ. ಇದು ಇತರೆ ಮಹಿಳೆಯರ ಸಾಂಗತ್ಯವನ್ನು ಬಯಸಲು ಅವರಿಗೆ ಪ್ರೋತ್ಸಾಹ ನೀಡುತ್ತದೆ. ಅವರು ಬೇರೆ ಮಹಿಳೆಯರ ಸ್ನೇಹ ಮಾಡಿದಂತೆಲ್ಲ ಇನ್ನೂ ಹೆಚ್ಚು ಆಕ್ಸಿಟೋಸಿನ್ ಬಿಡುಗಡೆಯಾಗಿ ಒತ್ತಡವನ್ನು ಪ್ರತಿರೋಧಿಸಿ ಹಿತಕರ ಅನುಭವ ನೀಡುತ್ತದೆ ಎಂದು ಅಧ್ಯಯನದ ವರದಿ ತಿಳಿಸಿದೆ.
ಮಹಿಳೆಯರು ಸಾಮಾನ್ಯವಾಗಿ ತಮ್ಮ ಸಂಬಂಧಗಳಲ್ಲಿ ಹೆಚ್ಚು ನಿಷ್ಠೆ ಮತ್ತು ಅಭಿಮಾನ ಹೊಂದಿರುವುದರಿಂದ ಪರಸ್ಪರ ನಂಟನ್ನು ಬೆಸೆಯುವ ಪ್ರವೃತ್ತಿ ಅವರಿಗೆ ಸಹಜವಾಗಿ ಬೆಳೆದಿರುತ್ತದೆ ಎಂದು ದೆಹಲಿ ವಿವಿಯ ಪ್ರಾಧ್ಯಾಪಕ ಮತ್ತು ಮನಶಾಸ್ತ್ರಜ್ಞ ಡಾ. ಅರುಣಾ ಬ್ರೂಟಾ ಹೇಳುತ್ತಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ. |
| |
|
|
|
|
|
|
|