|
| ಬುದ್ಧಿಮತ್ತೆ ವೃದ್ಧಿಗೆ ಕೆಲವು ಮಾರ್ಗೋಪಾಯ |
| ಬುಧವಾರ, 26 ಡಿಸೆಂಬರ್ 2007 ( 20:57 IST ) | |
ಮೆದುಳಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ತಕ್ಷಣದ ಕ್ರಮವೇನು ಎನ್ನುವ ಬಗ್ಗೆ ತಿಳಿಯಲು ಪ್ರತಿಯೊಬ್ಬರೂ ಕುತೂಹಲಿಗಳಾಗಿರುತ್ತಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ಬುದ್ಧಿವಂತರಾಗಬೇಕೆಂದು ಬಯಸುವುದು ಸಹಜ. ನೀವು ಫಲಿತಾಂಶ ಬಯಸುವಿರಾದರೆ ಮತ್ತು ಬುದ್ದಿಮತ್ತೆಯ ವ್ಯಾಖ್ಯಾನದ ಬಗ್ಗೆ ವಾದವಿವಾದ ಇಷ್ಟವಿಲ್ಲವೆಂದಾದರೆ ಕೆಳಗಿನ ಪ್ರಯತ್ನಗಳನ್ನು ಮಾಡಿ:
1. ಮೆದುಳಿನ ಕಾರ್ಯನಿರ್ವಹಣೆಯ ತಕ್ಷಣದ ಸುಧಾರಣೆಗೆ ದೀರ್ಘ ಉಸಿರಾಟ ಪರಿಣಾಮಕಾರಿ ಕ್ರಮಗಳಲ್ಲೊಂದು. ದೀರ್ಘ ಉಸಿರಾಟದಿಂದ ನಮಗೆ ರಿಲ್ಯಾಕ್ಸ್ ಉಂಟಾಗುತ್ತದೆ ಮತ್ತು ರಕ್ತದಲ್ಲಿ ಹೆಚ್ಚಿನ ಆಮ್ಲಜನಕ ಸಂಗ್ರಹವಾಗಿ ಮೆದುಳಿಗೂ ರವಾನೆಯಾಗುತ್ತದೆ.
2. ನಿಮ್ಮ ಐಕ್ಯೂ ಅಥವಾ ಬುದ್ಧಿಮತ್ತೆ ಹೆಚ್ಚಳಕ್ಕೆ ನೇರವಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು. ಒಳ್ಳೆಯ ಭಂಗಿಯು ನಮ್ಮ ಮನಸ್ಸಿನ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ.
3. ಸ್ವಲ್ಪ ಮಟ್ಟಿನ ವ್ಯಾಯಾಮ ಮಾಡಿ. ದೈಹಿಕ ಚಟುವಟಿಕೆಯು ನೀವು ಉತ್ತಮವಾಗಿ ಯೋಚಿಸಲು ಮೆದುಳಿಗೆ ರಕ್ತ ಪೂರೈಸುತ್ತದೆ. ನಡಿಗೆ ಒಳ್ಳೆಯ ಪರಿಣಾಮ ಬೀರುತ್ತದೆ ಜತೆಗೆ ಕೆಲವು ದೈಹಿಕ ವ್ಯಾಯಾಮಗಳೂ ಒಳ್ಳೆಯದು.
4. ಸ್ವಲ್ಪ ಮಟ್ಟಿಗೆ ಕಾಫಿ ಸೇವನೆ ಅಭ್ಯಾಸ ಮಾಡಿಕೊಳ್ಳಿ. ಕೆಫೀನ್ ಮೆದುಳಿಗೆ ಚೇತರಿಕೆ ನೀಡುತ್ತದೆ. ಆದರೆ ಇದು ತಾತ್ಕಾಲಿಕ ಪರಿಣಾಮ. ಸಿಹಿಯನ್ನು ಹೆಚ್ಚಾಗಿ ತಿನ್ನುವುದನ್ನು ಬಿಟ್ಟುಬಿಡಿ. ಏಕೆಂದರೆ ಇನ್ಸುಲಿನ್ ನಿಮ್ಮ ರಕ್ತನಾಳದಲ್ಲಿ ಶೇಖರವಾಗುವುದರಿಂದ ಯೋಚನಾ ಶಕ್ತಿ ಕುಂಠಿತಗೊಳ್ಳುತ್ತದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಕವನ - ಕಾದು ಕುಳಿತಿರುವೆ ಕವಿತೆಗಾಗಿ
ಮುಂಜಾನೆಯ ಇಬ್ಬನಿಯಲಿ
ಮೈನೆನೆವ ಹಸಿರು ಹುಲ್ಲುಗಳ ನೋಡಿ...
ಕವಿತೆ ಬರೆಯ ಬೇಕೆಂದೆನಿಸಿತು |
| |
|
|
|
|
|
|
|