ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಆರೋಗ್ಯ ಸಮಾಚಾರ
ಮನಸ್ಸು, ದೇಹಕ್ಕೆ ವಿಶ್ರಾಂತಿ ನೀಡುವ ನಿದ್ರೆ
ಶುಕ್ರವಾರ, 14 ಡಿಸೆಂಬರ್ 2007   ( 21:57 IST )
ಮನುಷ್ಯನ ಜೀವನದಲ್ಲಿ ನಿದ್ರೆ ಎಂಬುದು ಒಂದು ಅವಿಭಾಜ್ಯ ಅಂಗ. ಅದಿಲ್ಲದಿದ್ದರೆ, ಮನುಷ್ಯನ ಆರೋಗ್ಯದಲ್ಲಿ ಏರು ಪೇರು ಆಗುವುದು. ವಯಸ್ಕ ಪುರುಷರಿಗೆ 7 ರಿಂದ 9 ಗಂಟೆಗಳ ಗರಿಷ್ಠ ಮಟ್ಟದ ನಿದ್ರೆ ಅವಶ್ಯಕ. ನಿದ್ರೆಯು ನಮ್ಮ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ದಿನನಿತ್ಯದ ಒತ್ತಡ ಮತ್ತು ಆಯಾಸದಿಂದ ಮುಕ್ತಗೊಳಿಸುತ್ತದೆ.

ಆದಾಗ್ಯೂ, ಅನೇಕ ಮಂದಿ ಸ್ವಲ್ಪ ಪ್ರಮಾಣದಲ್ಲಾದರೂ ನಿದ್ರಾಹೀನತೆಯಿಂದ ಬಳಲುತ್ತಾರೆ. ಬಿಡುವಿಲ್ಲದ ಕೆಲಸದ ವೇಳಾಪಟ್ಟಿ ಮತ್ತು ಪೂರ್ಣ ಸಾಮಾಜಿಕ ಜೀವನ ಕೂಡ ನಿದ್ರೆಯಿಂದ ವಂಚಿತರನ್ನಾಗಿ ಮಾಡುತ್ತದೆ. ನಿದ್ರೆಯಿಂದ ವಂಚಿತರಾಗಲು ಮೂರು ಮುಖ್ಯ ಕಾರಣಗಳಿವೆ.

ಅತಿಯಾದ ಸಾಮಾಜಿಕ ಚಟುವಟಿಕೆ, ಕೆಲಸದ ವೇಳಾಪಟ್ಟಿ ಮತ್ತು ನಿದ್ರಾಭಂಗ. ಒತ್ತಡ, ಉಷ್ಣಾಂಶ ಮತ್ತು ಸದ್ದು ಮುಂತಾದ ಪರಿಸರ ಕಾರಣಗಳು, ದೈಹಿಕ ಅಂಶಗಳು ಮತ್ತು ಕೆಲವು ಬಾರಿ ಔಷಧಿಗಳು ನಿದ್ರಾಭಂಗಕ್ಕೆ ಕಾರಣವಾಗಿರುತ್ತದೆ.

ನಿದ್ರೆಯ ಕೊರತೆಯಿಂದ ಅನೇಕ ಸಮಸ್ಯೆಗಳಿಗೆ ದಾರಿಯಾಗುತ್ತದೆ. ದಿನನಿತ್ಯದ ಜೀವನ ಒತ್ತಡದಿಂದ ಕೂಡಿರುತ್ತದೆ, ಸರಳ ಕೆಲಸಗಳು ಕೂಡ ಕಷ್ಟಕರವಾಗಿ ಗೋಚರಿಸುತ್ತದೆ, ಸ್ಮರಣಶಕ್ತಿಯನ್ನು ಕುಂಠಿತಗೊಳಿಸುತ್ತದೆ ಮತ್ತು ಕೆಲಸದ ಸ್ಥಳದಲ್ಲಿ ಮತ್ತು ಮನೆಯಲ್ಲಿ ಕೂಡ ಅನೇಕ ತಪ್ಪುಗಳಿಗೆ ಎಡೆಮಾಡುತ್ತದೆ.

ದೇಹ ಮತ್ತು ಮನಸ್ಸಿನ ಚೈತನ್ಯಕ್ಕೆ 10 ಅಥವಾ 15 ನಿಮಿಷಗಳ ಸಣ್ಣ ಜೋಂಪು ನಿದ್ರೆಯಿಂದ ನಿದ್ರಾಹೀನತೆಯನ್ನು ತಡೆಯಬಹುದು ಎಂದು ಕಾರ್ನೆಲ್ ವಿವಿ ಮನಃಶಾಸ್ತ್ರಜ್ಞ ಮತ್ತು ನಿದ್ರಾ ತಜ್ಞ ಪ್ರೊ.ಮಾಸ್ ಸಲಹೆ ಮಾಡುತ್ತಾರೆ.

ಕಾಫಿ, ಆಲ್ಕೊಹಾಲ್ ಮತ್ತಿತರ ಉತ್ತೇಜಕಗಳ ಸೇವನೆಯನ್ನು ಕಡಿಮೆ ಮಾಡುವುದು, ನಿಯಮಿತ ವೇಳಾಪಟ್ಟಿ ಇಟ್ಟುಕೊಳ್ಳುವುದು, ದಿನದ ಆರಂಭದಲ್ಲಿ ಕೆಲವು ಹಗುರ ವ್ಯಾಯಾಮಗಳನ್ನು ಮಾಡುವುದು ಮತ್ತು ಮಲಗುವ ಸಂದರ್ಭದಲ್ಲಿ ಒತ್ತಡವನ್ನು ತಗ್ಗಿಸುವುದರಿಂದ ನಾವು ನಿದ್ರೆಗೆ ಶೀಘ್ರದಲ್ಲೇ ಶರಣಾಗಬಹುದು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಆಹಾರದಲ್ಲಿ ಬ್ಯಾಕ್ಟಿರಿಯಾ ಬಳಸಿ, ಆರೋಗ್ಯವಂತರಾಗಿರಿ!
ಎನ್ಎಸ್ಎಚ್‌ಪಿ ಅಡಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಕಾರ್ಡ್
ಜೆಇ ವ್ಯಾಧಿ: 515ಕ್ಕೆ ಏರಿದ ಸಾವಿನ ಸಂಖ್ಯೆ
ಮಗುವಿನ ಕೆಮ್ಮಿಗೆ ರಾಮಬಾಣ ಜೇನುತುಪ್ಪ
ಅತಿಯಾದ ಕಾಫಿ ಸೇವನೆ ನಿದ್ರೆಗೆ ಮಾರಕ
ಜೀವಿತಾವಧಿ ವೃದ್ಧಿಸುವ ವಿಟಮಿನ್ ಡಿ
ಆರೋಗ್ಯ
ಚಿಕಿತ್ಸೆ - ನಿಮ್ಮ ಕೂದಲನ್ನು ವಾರಕ್ಕೆರಡು ಬಾರಿ ಮಾತ್ರ ತೊಳೆಯಿರಿ. ತೊಳೆಯಲು ಬಿಸಿನೀರನ್ನು ಬಳಸುವುದು ಬೇಡ. ಕೂದಲು ತೊಳೆಯಲು ಶ್ಯಾಂಪು ಬಳಸುತ್ತಿದ್ದರೆ, ಸೌಮ್ಯವಾದ ಶ್ಯಾಂಪೂಗಳನ್ನು ಬಳಸುವುದು ಉತ್ತಮ.
ಮುಂದೆ ಓದಿ|ಮತ್ತಷ್ಟು...
ಮನರಂಜನೆ
NRB
 
ಈ 'ಚಂಡ' ಪ್ರಚಂಡ; ಆಕ್ಷನ್ ಪ್ರಿಯರಿಗೆ ಹುಗ್ಗಿಯೂಟ
ನಟ "ದುನಿಯಾ" ವಿಜಯ್ ಮತ್ತು ನಿರ್ದೇಶಕ, ನಿರ್ಮಾಪಕ ಎಸ್ ನಾರಾಯಣ ನಡುವೆ ಇನ್ನೂ ವಿವಾದ ...
ಮನಕುಣಿಸದ 'ಆ ಜಾ ನಾಚ್ ಲೇ'
ರೈಟ್...ಆದ್ರೆ
ಗ್ರಹ ಗತಿ
ವಾಸ್ತು - ಮನೆಯಲ್ಲಿ ಭೋಜನ ಕೋಣೆ ಬಹು ಪ್ರಮುಖವಾದುದು, ಹಾಗಾಗಿ ಇದರ ಬಗ್ಗೆಯೂ ಗಮನ ಹರಿಸಬೇಕಾದುದು ಅತಿ ಮುಖ್ಯ. ಯಾಕೆಂದರೆ ನಾವು ಆಹಾರ ಸೇವಿಸುವ ಸ್ಥಳ ಅಥವಾ ಪರಿಸರ ಉತ್ತಮ ಮತ್ತು ಆರಾಮದಾಯಕವಾಗಿದ್ದರೆ ಮಾತ್ರ ಆಹಾರವು ಸರಿಯಾಗಿ ಪಚನಗೊಳ್ಳುವುದು. ಸೂಕ್ತ ಸ್ಥಳದಲ್ಲಿ ಆಹಾರ ಸೇವಿಸುವುದರಿಂದ ದೇಹಕ್ಕೆ ಆರೋಗ್ಯವೂ, ಮನಸ್ಸಿಗೆ ಹಿತವೂ ಲಭಿಸುತ್ತದೆ.
ಮುಂದೆ ಓದಿ|ಮತ್ತಷ್ಟು...
Marketplace