ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಆರೋಗ್ಯ ಸಮಾಚಾರ
ಆಹಾರದಲ್ಲಿ ಬ್ಯಾಕ್ಟಿರಿಯಾ ಬಳಸಿ, ಆರೋಗ್ಯವಂತರಾಗಿರಿ!
ಮಂಗಳವಾರ, 11 ಡಿಸೆಂಬರ್ 2007   ( 20:40 IST )
ಶಿಶು ಆಹಾರದಲ್ಲಿ ತಿಗಣೆಗಳು? ಮಿಲ್ಕ್ ಶೇಕ್‌ನಲ್ಲಿ ಸೂಕ್ಷ್ಮಾಣು ಜೀವಿಗಳು? ಹೆದರಬೇಡಿ ಇದು ಭಯಹುಟ್ಟಿಸುವ ಆಹಾರವಲ್ಲ. ಇದು ಹೊಸ ಆಹಾರ ಪದ್ದತಿ. ಇದರಿಂದ ನಿಮ್ಮ ಆರೋಗ್ಯಹೆಚ್ಚಾಗುವುದು. ರೋಗ ಬರುವುದಿಲ್ಲ ಖಂಡಿತಾ!

ರುಚಿ ಬದಾಲಾಗುತ್ತಿದ್ದಂತೆ ಆಹಾರ ಪದ್ಧತಿಯನ್ನೂ ಬದಲಾಯಿಸುವ ಅವಶ್ಯಕತೆಯಿದೆ. ಅದಕ್ಕಾಗಿ ಆರೋಗ್ಯಕ್ಕೆ ಸಹಕಾರಿಯಾಗುವಂತಹ ಆಹಾರಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಂತೆ ಆಹಾರ ತಯಾರಿಕಾ ಕಂಪೆನಿಗಳು ಹೊಸ ಆವಿಷ್ಕಾರದ ಆಹಾರವನ್ನು ತಯಾರಿಸುತ್ತಿದ್ದಾರೆ. ಅದರ ಪರಿಣಾಮವಾಗಿ ಇದೀಗ ಮಾರುಕಟ್ಟೆಗೆ ಬಂದಿರುವುದು 'ಬ್ಯಾಕ್ಟಿರಿಯಾ ರಿಚ್ ಫುಡ್'. ಅದರಲ್ಲಿ ಮನುಷ್ಯನ ಜಿರ್ಣಾಂಗ ವ್ಯವಸ್ಥೆಗೆ ಸಮಾನಾಗಿ 'ಫ್ರೋಬ್ಯೊಟಿಕ್' ಅಥವಾ ಸ್ನೇಹಪರ ಬ್ಯಾಕ್ಟಿರಿಯಾಗಳನ್ನು ಆಹಾರದಲ್ಲಿ ಸೇರಿಸುತಿದ್ದಾರೆ.

ಇಂತಹ ಆಹಾರಗಳು ಮಾತ್ರೆ,ಯೋಗರ್ಟ್ಸ್,ಸ್ಮೂತೀಸ್, ಸ್ನಾಕ್ಸ್ ಬಾರ್,ಮತ್ತು ಸೆರೆಲ್ಸ್ ಮಾದರಿಯಲ್ಲಿ ಸೂಪರ್ ಮಾರ್ಕೆಟ್‌ಗಳಲ್ಲಿ ಮಾರಾಟವಾಗುತ್ತಿದ್ದು, ಜನರು ಇದಕ್ಕಾಗಿ ಮುಗಿ ಬೀಳುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ, ಅಂತಹ ಆಹಾರಗಳು ಮನುಷ್ಯನ ಆರೋಗ್ಯವನ್ನು ಹೆಚ್ಚಿಸುತ್ತದೆ, ಜಿರ್ಣಾಂಗದ ಕೆಲಸವನ್ನು ಸಮರ್ಪಕವಾಗಿರಿಸುತ್ತದೆ ಮತ್ತು ಆರೋಗ್ಯವನ್ನು ಗಟ್ಟಿಗೊಳಿಸುತ್ತದೆ ಎಂದು ಅದರ ಉತ್ಪಾದಕ ಕಂಪೆನಿಗಳು ಹೇಳುತ್ತದೆ.

ಮಾರುಕಟ್ಟೆಗಳು ಯಾವಾಗಲೂ ವಿಜ್ಞಾನಿಗಳಿಗಿಂತ ಮುಂದೆ. ಈ ಕಾರಣಕ್ಕೆ ಆಹಾರದಲ್ಲಿ ಬ್ಯಾಕ್ಟಿರಿಯಾವನ್ನು ವಿಜ್ಞಾನಿಗಳಿಗಿಂತ ಮೊದಲು ಕಂಪೆನಿಗಳು ಒಪ್ಪಿಕೊಂಡಿವೆ. ಇದಕ್ಕೆ ಸರಿಯಾಗಿ ವಿಜ್ಞಾನಿಗಳೂ ಕೂಡಾ ಪ್ರೊಬ್ಯೋಟಿಕ್ ಗಳು ಸಾಕಷ್ಟು ಸುರಕ್ಷಿತ ಜೊತೆಗೆ ಉಪಕಾರಿ ಎಂದು ಹೇಳಿದ್ದಾರೆ. ಆದರೆ ಈ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯವೂ ಇದೆ ಎಂದಿದ್ದಾರೆ. ಆದರೆ ಸಧ್ಯಕ್ಕೆ ಇದು ಬಿಸಿ ಬಿಸಿ ಸುದ್ದಿ. ಹೇಗೆ ಬ್ಯಾಕ್ಟಿರಿಯಾ ಮನುಷ್ಯನ ಆರೋಗ್ಯದಲ್ಲಿ ಪರಿಣಾಮ ಬೀರುತ್ತದೆ? ಇದರ ಬಗ್ಗೆ ಚಿಂತನೆ ನಡೆಸಲು ವಿಜ್ಞಾನಿಗಳ ಗುಂಪೊಂದು ತಯಾರಾಗಿ ನಿಂತಿದೆ.

ಈ ಆಹಾರಗಳು ಇದೀಗ ಯುರೋಫ್, ಏಷ್ಯಾಮತ್ತು ದಕ್ಷಿಣ ಅಮೆರಿಕಗಳಲ್ಲಿ ಬಹಳ ವೇಗವಾಗಿ ಜನಪ್ರೀಯವಾಗುತ್ತಿದೆ. ಇದರಿಂದಾಗಿ ಈ ವರ್ಷ 150 ಇಂತಹ ಆಹಾರಗಳನ್ನು ಉತ್ಪಾದಿಸುವ ಕಂಪೆನಿಗಳು ಕಾರ್ಯರಾಂಭ ಮಾಡಿದೆ. ಇದು ವರ್ಷದಿಂದ ವರ್ಷಕ್ಕೆ ಬೆಳೆಯುವ ಸಾಧ್ಯತೆಯಿದೆ. ಏನೆ ಆದರೂ ಎಲ್ಲಾ ಬ್ಯಾಕ್ಟಿರಿಯಾಗಳು ಪರೋಪಕಾರಿ ಎಂದು ಸಾಭೀತಾಗಿಲ್ಲ. ಯಾವುದೆಲ್ಲಾ ಉಪಕಾರಿ ಎಂದು ಸಂಶೋಧನೆಯ ನಂತರ ತಿಳಿಯಬೇಕಷ್ಟೆ!.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಎನ್ಎಸ್ಎಚ್‌ಪಿ ಅಡಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಕಾರ್ಡ್
ಜೆಇ ವ್ಯಾಧಿ: 515ಕ್ಕೆ ಏರಿದ ಸಾವಿನ ಸಂಖ್ಯೆ
ಮಗುವಿನ ಕೆಮ್ಮಿಗೆ ರಾಮಬಾಣ ಜೇನುತುಪ್ಪ
ಅತಿಯಾದ ಕಾಫಿ ಸೇವನೆ ನಿದ್ರೆಗೆ ಮಾರಕ
ಜೀವಿತಾವಧಿ ವೃದ್ಧಿಸುವ ವಿಟಮಿನ್ ಡಿ
ಡೈಲಿ ಪ್ಲಾನ್: ಮಾನಸಿಕ ಒತ್ತಡ ನಿವಾರಕ
ಆರೋಗ್ಯ
ಚಿಕಿತ್ಸೆ - ನಿಮ್ಮ ಕೂದಲನ್ನು ವಾರಕ್ಕೆರಡು ಬಾರಿ ಮಾತ್ರ ತೊಳೆಯಿರಿ. ತೊಳೆಯಲು ಬಿಸಿನೀರನ್ನು ಬಳಸುವುದು ಬೇಡ. ಕೂದಲು ತೊಳೆಯಲು ಶ್ಯಾಂಪು ಬಳಸುತ್ತಿದ್ದರೆ, ಸೌಮ್ಯವಾದ ಶ್ಯಾಂಪೂಗಳನ್ನು ಬಳಸುವುದು ಉತ್ತಮ.
ಮುಂದೆ ಓದಿ|ಮತ್ತಷ್ಟು...
ಮನರಂಜನೆ
NRB
 
ಈ 'ಚಂಡ' ಪ್ರಚಂಡ; ಆಕ್ಷನ್ ಪ್ರಿಯರಿಗೆ ಹುಗ್ಗಿಯೂಟ
ನಟ "ದುನಿಯಾ" ವಿಜಯ್ ಮತ್ತು ನಿರ್ದೇಶಕ, ನಿರ್ಮಾಪಕ ಎಸ್ ನಾರಾಯಣ ನಡುವೆ ಇನ್ನೂ ವಿವಾದ ...
ಮನಕುಣಿಸದ 'ಆ ಜಾ ನಾಚ್ ಲೇ'
ರೈಟ್...ಆದ್ರೆ
ಗ್ರಹ ಗತಿ
ವಾಸ್ತು - ಮನೆಯಲ್ಲಿ ಭೋಜನ ಕೋಣೆ ಬಹು ಪ್ರಮುಖವಾದುದು, ಹಾಗಾಗಿ ಇದರ ಬಗ್ಗೆಯೂ ಗಮನ ಹರಿಸಬೇಕಾದುದು ಅತಿ ಮುಖ್ಯ. ಯಾಕೆಂದರೆ ನಾವು ಆಹಾರ ಸೇವಿಸುವ ಸ್ಥಳ ಅಥವಾ ಪರಿಸರ ಉತ್ತಮ ಮತ್ತು ಆರಾಮದಾಯಕವಾಗಿದ್ದರೆ ಮಾತ್ರ ಆಹಾರವು ಸರಿಯಾಗಿ ಪಚನಗೊಳ್ಳುವುದು. ಸೂಕ್ತ ಸ್ಥಳದಲ್ಲಿ ಆಹಾರ ಸೇವಿಸುವುದರಿಂದ ದೇಹಕ್ಕೆ ಆರೋಗ್ಯವೂ, ಮನಸ್ಸಿಗೆ ಹಿತವೂ ಲಭಿಸುತ್ತದೆ.
ಮುಂದೆ ಓದಿ|ಮತ್ತಷ್ಟು...
Marketplace