|
| ಎನ್ಎಸ್ಎಚ್‌ಪಿ ಅಡಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಕಾರ್ಡ್ |
| ಚೆನ್ನೈ (ಏಜೆನ್ಸಿ), ಶನಿವಾರ, 8 ಡಿಸೆಂಬರ್ 2007 ( 19:22 IST ) | |
ರಾಷ್ಟ್ರೀಯ ಶಾಲೆ ಆರೋಗ್ಯ ಕಾರ್ಯಕ್ರಮ (ಎನ್ಎಸ್ಎಚ್‌ಪಿ) ಭಾಗವಾಗಿ ಕೇಂದ್ರ ಸರಕಾರ ವಿದ್ಯಾರ್ಥಿಗಳಿಗಾಗಿ ಸ್ಮಾರ್ಟ್ ಕಾರ್ಡನ್ನು ಬಿಡುಗಡೆ ಮಾಡಲಿದ್ದು, ಇದರಡಿ ವಿದ್ಯಾರ್ಥಿಗಳು ಸಕ್ಕರೆ ಕಾಯಿಲೆ ಒಳಗೊಂಡಂತೆ ಎಲ್ಲಾ ಸಾಮಾನ್ಯ ಕಾಯಿಲೆಗಳಿಗಾಗಿ ತಪಾಸಣೆಗೊಳಪಡಲಿರುವರು ಎಂದು ಕೇಂದ್ರ ಆರೋಗ್ಯ ಸಚಿವ ಅಂಬುಮಣಿ ರಾಮ್‌ದೋಸ್ಸ್ ಘೋಷಿಸಿದ್ದಾರೆ.
ಎನ್ಎಸ್ಎಚ್‌ಪಿಯನ್ನು ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ದಿ ಸಚಿವಾಲಯದ ಸಮನ್ವಯದೊಂದಿಗೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಸ್ಮಾರ್ಟ್ ಕಾರ್ಡ್ ವಿದ್ಯಾರ್ಥಿಗಳ ಸಂಪೂರ್ಣ ವೈದ್ಯಕೀಯ ದಾಖಲೆಯನ್ನು ಹೊಂದಿರುವುದು.
ಎನ್ಎಸ್ಎಚ್‌ಪಿ ಹೆಚ್ಚುತ್ತಿರುವ ಬಾಲ್ಯ ಕುರುಡುತನವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದ್ದು, ಇದು ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಗುಜರಾತ್ ರಾಜ್ಯಗಳಿಂದ ನಡೆಸಲ್ಪಡುವ ಪ್ರತ್ಯೇಕ ತಪಾಸಣಾ ಕಾರ್ಯಕ್ರಮಕ್ಕೂ ಸಹಾಯ ನೀಡಲಿದೆ ಮತ್ತು ಸಾರ್ವಜನಿಕ-ಖಾಸಗೀ ಪಾಲುದಾರಿಕೆಗೆ ಉತ್ತೇಜನ ನೀಡಲಿದೆ ಎಂದು ತಿಳಿಸಿದ್ದಾರೆ.
ಸರಕಾರ ದೇಶದಲ್ಲಿನ ಕರುಡುತನ ದರವನ್ನು ಪ್ರಸಕ್ತ 1.1ಶೇ. ದಿಂದ 2020ರ ವೇಳೆಗೆ 0.3ಶೇ.ಗೆ ಇಳಿಸುವ ಗುರಿ ಹೊಂದಿದೆ. ಕಳೆದ ವರ್ಷ ತಪಾಸಣೆಗೊಳಪಟ್ಟ 3.5 ಕೋಟಿ ಮಕ್ಕಳಲ್ಲಿ, 9.5 ಲಕ್ಷ ಮಕ್ಕಳು ನೇತ್ರ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂತು ಎಂದು ಅವರು ತಿಳಿಸಿದರು.
ಸರಕಾರ 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಸಾರ್ವಜನಿಕ ಆರೋಗ್ಯಕ್ಕಾಗಿ 1.36 ಲಕ್ಷ ಕೋಟಿ ರೂಪಾಯಿ ಮೀಸಲಿಡಲು ಯೋಜಿಸಿದೆ. ಇದು ಕಳೆದ ಪಂಚವಾರ್ಷಿಕದಲ್ಲಿ 45,000 ಕೋಟಿ ರೂಪಾಯಿಯಾಗಿತ್ತು ಎಂದು ರಾಮ್‌ದೋಸ್ಸ್ ಹೇಳಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿಕಿತ್ಸೆ - ನಿಮ್ಮ ಕೂದಲನ್ನು ವಾರಕ್ಕೆರಡು ಬಾರಿ ಮಾತ್ರ ತೊಳೆಯಿರಿ. ತೊಳೆಯಲು ಬಿಸಿನೀರನ್ನು ಬಳಸುವುದು ಬೇಡ. ಕೂದಲು ತೊಳೆಯಲು ಶ್ಯಾಂಪು ಬಳಸುತ್ತಿದ್ದರೆ, ಸೌಮ್ಯವಾದ ಶ್ಯಾಂಪೂಗಳನ್ನು ಬಳಸುವುದು ಉತ್ತಮ. |
| |
|
|
|
|
 | | NRB |
| | |
| |
|
|
|
|
|
| ವಾಸ್ತು - ಮನೆಯಲ್ಲಿ ಭೋಜನ ಕೋಣೆ ಬಹು ಪ್ರಮುಖವಾದುದು, ಹಾಗಾಗಿ ಇದರ ಬಗ್ಗೆಯೂ ಗಮನ ಹರಿಸಬೇಕಾದುದು ಅತಿ ಮುಖ್ಯ. ಯಾಕೆಂದರೆ ನಾವು ಆಹಾರ ಸೇವಿಸುವ ಸ್ಥಳ ಅಥವಾ ಪರಿಸರ ಉತ್ತಮ ಮತ್ತು ಆರಾಮದಾಯಕವಾಗಿದ್ದರೆ ಮಾತ್ರ ಆಹಾರವು ಸರಿಯಾಗಿ ಪಚನಗೊಳ್ಳುವುದು. ಸೂಕ್ತ ಸ್ಥಳದಲ್ಲಿ ಆಹಾರ ಸೇವಿಸುವುದರಿಂದ ದೇಹಕ್ಕೆ ಆರೋಗ್ಯವೂ, ಮನಸ್ಸಿಗೆ ಹಿತವೂ ಲಭಿಸುತ್ತದೆ. |
| |
|
|
|
|
|
|
|