|
| ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ |
ಹೆರಿಗೆ ಕಾಲದ ಬಳಿಕ ತಾಯಂದಿರು ಟಿವಿಯ ಮುಂದೆ ಗಂಟಾನುಗಟ್ಟಲೆ ಕೂರುವ ಬದಲು ನಡೆಯುವ ಪರಿಪಾಠವನ್ನು ರೂಢಿಸಿಕೊಳ್ಳುವುದರಿಂದ ಹೆರಿಗೆಯ ನಂತರ ಹೆಚ್ಚುವ ತೂಕವನ್ನು ಬಹಳ ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು ಎಂದು ಇತ್ತೀಚಿನ ವರದಿಯೊಂದು ಹೇಳುತ್ತದೆ.
ಮಗುವಿಗೆ ಜನ್ಮ ನೀಡಿದ ನಂತರದ 900 ಮಹಿಳೆಯರನ್ನು ಒಂದು ವರ್ಷ ಕಾಲ ಅಧ್ಯಯನಕ್ಕೊಳಪಡಿಸಿದ ನಂತರ, ನಿರಂತರವಾಗಿ ವಾಕಿಂಗ್ ಮಾಡುವ ಅಭ್ಯಾಸವನ್ನಿಟ್ಟುಕೊಂಡಿರುವ ಹೆಚ್ಚಿನ ಮಹಿಳೆಯರು ಗರ್ಭಧಾರಣೆ ತೂಕವನ್ನು ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆ. ಹಾಗೂ ಟಿವಿಯನ್ನು ಹೆಚ್ಚು ವೀಕ್ಷಿಸದ ಹಾಗೂ ಹೆಚ್ಚು ಕೊಬ್ಬಿನಂಶವುಳ್ಳ ಆಹಾರ, ಕರಿದ ಆಹಾರ, ಮಸಾಲೆ ಪದಾರ್ಥ ಸೇವಿಸದ ಮಹಿಳೆಯರಲ್ಲೂ ಕೂಡ ಈ ಅಂಶ ಸ್ಪಷ್ಟ ಎಂಬುದಾಗಿ ಸಂಶೋಧನಕಾರರು ತಿಳಿಸಿದ್ದಾರೆ.
ಬೋಸ್ಟನ್‌ನಲ್ಲಿನ ಹಾವರ್ಡ್ ವೈದ್ಯಕೀಯ ಶಾಲೆಯ ಡಾ.ಎಮಿಲಿ ಓಕೆನ್ ಮತ್ತು ಸಹಪಾಠಿಗಳ ಈ ಸಂಶೋಧನೆಯು ಮಹಿಳೆಯರು ಮಗುವಿಗೆ ಜನ್ಮ ನೀಡಿದ ನಂತರ ತಾವು ಅನುಸರಿಸಿದ ಪಥ್ಯ, ವ್ಯಾಯಾಮ ಹವ್ಯಾಸಗಳು ಮತ್ತು ಟಿವಿ ವೀಕ್ಷಣೆ ಕುರಿತಾದ ಮಹಿಳೆಯರ ವರದಿಯನ್ನೂ ಸಹ ಒಳಗೊಂಡಿದೆ.
ಓಕೆನ್ ತಂಡ ಸಾಮಾನ್ಯವಾಗಿ ಕಂಡುದುದೇನೆಂದರೆ, ದಿನಕ್ಕೆ ಅರ್ಧ ಗಂಟೆ ನಡೆಯುವವರು, 2 ಗಂಟೆಗಿಂತಲೂ ಕಡಿಮೆ ಟಿವಿ ನೋಡುವವರು ಮತ್ತು ಕೊಬ್ಬು ಪದಾರ್ಥ ಸೇವಿಸದವರು ಜನ್ಮ ಧಾರಣೆಯ ಒಂದು ವರ್ಷದ ನಂತರ ಗರ್ಭಧಾರಣೆ ತೂಕವನ್ನು ಹೊಂದುವ ಸಾಧ್ಯತೆ ತೀರಾ ಕಡಿಮೆ.
ವಾಕಿಂಗ್ ಬದಲಾಗಿ ಟಿವಿ ನೋಡಬಯಸುವ ಮಹಿಳೆಯರಿಗೆ ಹೋಲಿಸಿದಾಗ, ಅವರು ಶೇ.77ರಷ್ಟು 12 ಪೌಂಡ್ ಕಡಿಮೆ ತೂಕವನ್ನು ಹೊಂದಿರುವುದಾಗಿ ಅಧ್ಯಯನ ತಿಳಿಸಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|