|
| ಬೊಜ್ಜು ಕರಗಿಸಲು ವ್ಯಾಯಾಮವೊಂದೇ ದಾರಿ |
| ಲಂಡನ್ (ಏಜೆನ್ಸಿ), ಬುಧವಾರ, 17 ಅಕ್ಟೋಬರ್ 2007 ( 20:54 IST ) | |
ನಿಮಗೆ ಬೊಜ್ಜಿನ ಸಮಸ್ಯೆ ಇದೆಯಾ? ಕಿಬ್ಬೊಟ್ಟೆಯ ತಳದಲ್ಲಿ ನಿಧಾನವಾಗಿ ಟಯರ್ ಬೆಳೆಯಲು ಪ್ರಾರಂಭಿಸಿದೆಯಾ? ಹಾಗಾದರೆ ಇನ್ನು ತಡಮಾಡಬೇಡಿ. ಬೆವರಿಳಿಸಲು ಪ್ರಾರಂಭಿಸಿ. ಬೊಜ್ಜು ನಮ್ಮ ಜೀವನದ 10 ವರ್ಷಗಳ ಜೀವಿತಾವಧಿಯನ್ನು ತಿಂದು ಹಾಕುತ್ತದೆ ಎನ್ನುತ್ತದೆ ಸಂಶೋಧನೆ.
ಬೊಜ್ಜಿರುವ ಮನುಷ್ಯನ ಒಟ್ಟು ಜೀವತಾವಧಿ ಹತ್ತು ವರ್ಷಗಳು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಆತನಿಗೆ ಯಾವುದೇ ಕಾಯಿಲೆಗಳು ಕಾಣಿಸಿಕೊಳ್ಳಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಮಧುಮೇಹ, ರಕ್ತದೊತ್ತಡ, ಹೃದಯ ಬೇನೆ ಸೇರಿದಂತೆ ಚಿಕ್ಕ ವಯಸ್ಸಿನವರಲ್ಲಿ ಕೂಡ ಬೊಜ್ಜು ಹಲವಾರು ಕಾಯಿಲೆಗಳನ್ನು ಹುಟ್ಟು ಹಾಕುತ್ತದೆ ಎನ್ನುತ್ತಾರೆ ಸಂಶೋಧಕರು.
ಬೊಜ್ಜು ನಿಯಂತ್ರಣಕ್ಕಿರುವ ಸರಳ ಮಾರ್ಗವೆಂದರೆ ಆಹಾರ ಮತ್ತು ಜೀವನ ಕ್ರಮದಲ್ಲಿ ವ್ಯತ್ಯಾಸ ತರುವುದು. ಹೆಚ್ಚಿನ ಕೊಬ್ಬಿನ ಅಂಶವಿರುವ ಹಾಗೂ ಮಸಾಲೆ ಪಧಾರ್ಥಗಳನ್ನು ಸೇವಿಸುವುದನ್ನು ನಿಲ್ಲಿಸಬೇಕು. ಆಹಾರದಲ್ಲಿ ಮೊಳಕೆ ಕಾಳು ಹಾಗೂ ಹಸಿ ತರಕಾರಿಗಳ ಸೇವನೆ ಹೆಚ್ಚಬೇಕು. ಆಧುನಿಕ ಜೀವನ ಶೈಲಿಗೆ ನೀವು ಹೊಂದಿಕೊಂಡಿದ್ದರೆ ದಿನನಿತ್ಯ 2 ರಿಂದ 3 ಕಿ.ಮಿ ನಡಿಗೆ ಹಾಗೂ ವ್ಯಾಯಾಮ ಕಡ್ಡಾಯ.
ಡಯಟಿಂಗ್ ಮೊರೆ ಹೋಗುವುದಕ್ಕಿಂತ, ನಿಯಮಿತ ವ್ಯಾಯಾಮದಿಂದ ಬೊಜ್ಜನ್ನು ಕ್ರಮೇಣ ಕಡಿಮೆ ಮಾಡಬಹುದು. ದೇಹದಲ್ಲಿ ಶೇಖರಗೊಂಡಿರುವ ಕೊಬ್ಬು ಕರಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಒಮ್ಮಲೆ ನಾಲ್ಕು ದಿನ ಉಪವಾಸವಿದ್ದು, ಬೊಜ್ಜು ಕರಗುತ್ತದೆ ಎಂದು ಭಾವಿಸಿದರೆ ಅದು ಮೂರ್ಖತನ.
ಬೊಜ್ಜು ನಿವಾರಣೆಯನ್ನು ವ್ಯವಹಾರ ತಂತ್ರವಾಗಿಟ್ಟುಕೊಂಡು ಹಣ ಸುಲಿಗೆ ಮಾಡುವ ಹಲವಾರು ವೈದ್ಯಕೀಯ ಕೇಂದ್ರಗಳು ಇಂದು ನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾಲ್ಕೇ ವಾರದಲ್ಲಿ ಬೊಜ್ಜನ್ನು ಕರಗಿಸಿಕೊಡುತ್ತೇವೆ ಎಂದು ಹೇಳುವ ಅಳಲೆಕಾಯಿ ಪಂಡಿತರಿಗೂ ಕಡಿಮೆ ಇಲ್ಲ. ಆದರೆ ಇವೆಲ್ಲ ತಾತ್ಕಾಲಿಕ ಮಾನಸಿಕ ನೆಮ್ಮದಿ ಕೊಡಬಹುದೇ ಹೊರತು ಬೊಜ್ಜು ಕರಗುವುದಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕಲ್ಲವೇ? ಆದ್ದರಿಂದ ಸೋಮಾರಿತನವನ್ನು ಬದಿಗಿರಿಸಿ, ನಾಳೆಯಿಂದ ವ್ಯಾಯಾಮ ಪ್ರಾರಂಭಿಸಿ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಸಾವರಿಯಾ ಚಿತ್ರದಲ್ಲಿ ಅಭೂತಪೂರ್ವ ಅಭಿನಯ ನೀಡಿರುವ ಸೋನಮ್ ಕಪೂರ್ ಹಾಗೂ ರಣಭೀರ್ ಕಫೂರ್ ಅವರನ್ನು... |
| |
|
|
|
|
 | | AP |
| | |
| |
|
|
|
|
|
| ವಾಣಿಜ್ಯ ಲೇಖನಗಳು - ಒಂದೊಮ್ಮೆ ಕೇವಲ ಆಧ್ಯಾತ್ಮಿಕ ತವರೂರಾಗಿದ್ದು, ವಿಜ್ಞಾನಿಗಳ ಸಂಗಮವಾಗಿದ್ದ ಭಾರತ, ಇಂದು ಸರ್ವರಂಗಗಳಲ್ಲಿಯೂ... |
| |
|
|
|
|
|
|
|