|
| ದುಬೈ ಬಾಬುನಲ್ಲಿ ಉಪೇಂದ್ರ ವಿಶಿಷ್ಠ ಗೆಟಪ್ |
| ಗುರುವಾರ, 14 ಮೇ 2009 ( 17:36 IST ) | |
ಸಿನಿಮಾ ಮುನ್ನೋಟ ಚಿತ್ರ: ದುಬೈ ಬಾಬು ನಿರ್ದೇಶನ: ನಾಗಣ್ಣ ನಿರ್ಮಾಣ: ಶೈಲೇಂದ್ರ ಬಾಬು ತಾರಾಗಣ: ಉಪೇಂದ್ರ, ನಿಖಿತಾ, ಸಲೋನಿ, ಕುಮಾರ್ ಗೋವಿಂದ್ ಸಾಧುಕೋಕಿಲ
'ಬುದ್ದಿವಂತ'ನಾಗಿ ಮೇಲೆ ಬಂದ ಉಪೇಂದ್ರ ಈಗ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗ ವಿಶಿಷ್ಟ ಗೆಟಪ್‌ನಲ್ಲಿ ದರ್ಶನ ಕೊಡಲು ಸಿದ್ಧರಾಗಿದ್ದಾರೆ. ಅವರ ಅಭಿನಯದ 'ದುಬೈ ಬಾಬು' ಚಿತ್ರ ಈ ವಾರ ತೆರೆ ಕಾಣುತ್ತಿದೆ.
ಚಿತ್ರವನ್ನು ಶೈಲೇಂದ್ರ ಬಾಬು ನಿರ್ಮಿಸಿದ್ದು, ನಾಗಣ್ಣ ನಿರ್ದೇಶಿಸಿದ್ದಾರೆ. ಈ ಹಿಂದೆ ಈ ಮೂವರು ಜೊತೆಯಾಗಿ 'ಗೌರಮ್ಮ', 'ಕುಟುಂಬ' ದಂತಹ ಉತ್ತಮ ಚಿತ್ರಗಳನ್ನು ಕೊಟ್ಟಿರುವುದರಿಂದ ಸಹಜವಾಗಿಯೇ ಈ ಚಿತ್ರದ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದು ತೆಲುಗಿನ 'ದುಬೈ ಸೀನು' ಚಿತ್ರದ ರೀಮೇಕಾಗಿದ್ದು, ಉಪೇಂದ್ರ ಇಲ್ಲಿ ನಾನಾ ಅವತಾರಗಳಲ್ಲಿ ಕಂಗೊಳಿಸಿದ್ದಾರೆ. ವಿಶಿಷ್ಟ ಗೆಟಪ್‌ಗಾಗಿ ಉಪ್ಪಿ ತಮ್ಮ ಗಡ್ಡ ಮೀಸೆಯನ್ನು ಸಂಪೂರ್ಣವಾಗಿ ಬೋಳಿಸಿದ್ದರು. ಈ ಚಿತ್ರದಲ್ಲಿ ಬಾರಿ ಸಮಯದ ನಂತರ ಕುಮಾರ್ ಗೋವಿಂದ್ ನಟಿಸಿದ್ದಾರೆ. ಇವರಿಗೆ ಉಪ್ಪಿಯ ಸ್ನೇಹಿತ ಪಾತ್ರವಂತೆ. ಚಿತ್ರಕ್ಕೆ ವಿ.ಶ್ರಿಧರ್ ಅವರು ಸಂಗೀತ ನೀಡಿದ್ದಾರೆ.
ಲಿವಂಶಿಳಿ ಚಿತ್ರದ ಮೂಲಕ ಬೆಳಕಿಗೆ ಬಂದ ವೈಯ್ಯಾರೆ ಬೆಡಗಿ ನಿಖಿತಾ ಇಲ್ಲಿ ದುಬೈ ಬಾಬುಗೆ ಜೊತೆಯಾಗಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ದುಬೈ ಬಾಬುವನ್ನು ಪ್ರೇಕ್ಷಕ ಪ್ರಭು ಯಾವ ರೀತಿ ಸ್ವೀಕರಿಸುತ್ತಾರೋ ಕಾದು ನೋಡಬೇಕು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಕುಂಡಲಿಯಲ್ಲೊಂದು ರಹಸ್ಯವಾದ, ನೀತಿಯುಕ್ತವಾದ ಬಲು ಅಪರೂಪದ ಗ್ರಹವಿನ್ಯಾಸ ಕಾಣಿಸಿಕೊಂಡಿದೆ. ನಿಮ್ಮನ್ಯಾರೋ ಬಳಿಸಿಕೊಳ್ಳುವುದು ಖಚಿತ. ಅದರಲ್ಲೂ ಸಂತೋಷ ಕಾಣುವವರಿರಬಹುದು. ಕುಟುಂಬ ವ್ಯವಹಾರಗಳಲ್ಲಿ ಗಡಸು ನಿರ್ಧಾರ ಕೈಗೊಳ್ಳುವುದರಿಂದ ಕುಟುಂಬ ವರ್ಗದ ಮೇಲೆ ಬಲವಾದ ಹಿಡಿತ ಹೊಂದುವಿರಿ. ಔತಣ ಕೂಟಗಳಿಗೆ ಆಮಂತ್ರಣ, ವಾಹನ ವಹಿವಾಟುಗಳಲ್ಲಿ ಹಿರಿಯರ ಪ್ರಶಂಸೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸಮೀಕ್ಷೆ - ಸಾಮಾನ್ಯವಾಗಿ ಪ್ರೀತಿಸಿದ ಹುಡುಗಿ ಕೈ ಕೊಟ್ಟರೆ ಹುಡುಗರು ಏನು ಮಾಡುತ್ತಾರೆ? ಒಂದೋ ಗಡ್ಡ ಬಿಟ್ಟು ದೇವದಾಸ್ ಥರ ಅಲೆಯುತ್ತಾರೆ. ಇಲ್ಲವಾದರೆ ನೋವನ್ನು ಸಹಿಸಿಕೊಂಡು ಮೌನಿಯಾಗಿರುತ್ತಾರೆ. ಆದರೆ |
| |
|
|
|
|
|
|