|
| ಹುಡುಗಿ ಕೈ ಕೊಟ್ರೆ ಕೋರ್ಟಿಗೆ ಹೋಗುವುದೇ? |
| 4 ಏಪ್ರಿಲ್ 2009 ( 16:10 IST ) | |
ಸಿನಿಮಾ ವಿಮರ್ಶೆ ಚಿತ್ರ: ಜಾಜಿಮಲ್ಲಿಗೆ ನಿರ್ದೇಶನ: ಅನಂತರಾಜು ತಾರಾಬಳಗ: ಅಜಯ್, ಗೌರಿ ಮುಂಜಾಲ್, ಕೋಮಲ್, ಬುಲೆಟ್ ಪ್ರಕಾಶ್, ನಾಗಶೇಖರ್
ರವಿಪ್ರಕಾಶ್ ರೈ
ಸಾಮಾನ್ಯವಾಗಿ ಪ್ರೀತಿಸಿದ ಹುಡುಗಿ ಕೈ ಕೊಟ್ಟರೆ ಹುಡುಗರು ಏನು ಮಾಡುತ್ತಾರೆ? ಒಂದೋ ಗಡ್ಡ ಬಿಟ್ಟು ದೇವದಾಸ್ ಥರ ಅಲೆಯುತ್ತಾರೆ. ಇಲ್ಲವಾದರೆ ನೋವನ್ನು ಸಹಿಸಿಕೊಂಡು ಮೌನಿಯಾಗಿರುತ್ತಾರೆ. ಆದರೆ ಜಾಜಿಮಲ್ಲಿಗೆಯಲ್ಲಿ ನಾಯಕ ಮಾತ್ರ ಸುಮ್ಮನಿರುವುದಿಲ್ಲ. ಪ್ರೀತಿಸಿ ಕೈ ಕೊಟ್ಟ ಹುಡುಗಿಗೆ ತಕ್ಕ ಪಾಠ ಕಲಿಸಬೇಕೆಂದು ಕೋರ್ಟ್‌ಗೆ ಹೋಗುತ್ತಾನೆ. ಅಲ್ಲಿ ವಾದಿಸುತ್ತಾನೆ. ಕೊಲೆ ಮಾಡಿದವರಿಗೆ ಮರಣದಂಡನೆ ಶಿಕ್ಷೆ ಕೊಡುತ್ತೀರಿ. ಆದರೆ ಪ್ರೀತಿಸಿ ಕೈ ಕೊಟ್ಟವಳಿಗೆ ಯಾವ ಶಿಕ್ಷೆ ವಿಧಿಸುತ್ತೀರಿ ಎಂದು ನ್ಯಾಯಾಲಯವನ್ನು ಪ್ರಶ್ನಿಸುತ್ತಾನೆ.
ಈ ವಾರ ಬಿಡುಗಡೆಯಾದ 'ಜಾಜಿಮಲ್ಲಿಗೆ' ಚಿತ್ರ ಇಂತಹ ಒಂದು ವಿಶಿಷ್ಟ ಕಥೆಯನ್ನು ಒಳಗೊಂಡಿದೆ. ಈ ಹಿಂದೆ ಅನೇಕ ಪ್ರೇಮಕಥೆಗಳು ಬಂದಿದ್ದರೂ ಪ್ರೀತಿಸಿದ ಹುಡುಗಿಯ ವಿರುದ್ಧ ನಾಯಕ ದಾವೆ ಹೂಡುವ ಚಿತ್ರ ಬಂದಿರಲಿಲ್ಲ. ತಮಿಳಿನ 'ದೇವತೈ ಕಂಡೇನ್' ಚಿತ್ರದ ರೀಮೇಕಾದರೂ ನಿರ್ದೇಶಕ ಅನಂತರಾಜು ಚಿತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ. ಶ್ರೀಮಂತ ಕುಟುಂಬದ ಹುಡುಗಿ ಹಾಗೂ ಟೀ ಮಾರುವ ಹುಡುಗನ ನಡುವೆ ಪ್ರೇಮಾಂಕುರವಾದರೆ ಆಗುವ ಕೆಲವು ಅವಾಂತರಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಟೀ ಮಾರುವ ಪಾತ್ರಕ್ಕೆ ಅಜಯ್ ಒಗ್ಗಿಕೊಂಡಿದ್ದಾರೆ. ಹಿಂದಿನ ತಾಜ್ಮಹಲ್ ಚಿತ್ರಕ್ಕಿಂತ ಈ ಚಿತ್ರದಲ್ಲಿ ಅವರ ಅಭಿನಯ, ಬಾಡಿಲಾಂಗ್ವೇಜ್ ಎಲ್ಲವೂ ಸುಧಾರಿಸಿದೆ. ಹಾಡು, ಫೈಟ್ ಎಲ್ಲ ವಿಭಾಗದಲ್ಲೂ ಸ್ಕೋರ್ ಮಾಡಿದ್ದಾರೆ.
ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ಹಾಸ್ಯ. ನಿರ್ದೇಶಕ ಅನಂತರಾಜು ಹಾಸ್ಯ ಪಾತ್ರಗಳನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ನಾಗಶೇಖರ್, ಬುಲೆಟ್ ಪ್ರಕಾಶ್ ಹಾಗೂ ಕೋಮಲ್ ಅವರ ಹಾಸ್ಯ ವರ್ಕ್ಔಟ್ ಆಗಿದೆ. ಅದರಲ್ಲೂ ಕೋಮಲ್ ಅವರ ಒಂದೊಂದು ಡೈಲಾಗ್ ಕೂಡಾ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಗೌರಿ ಮುಂಜಾಲ್‌ನ ನಟನೆಗೆ ಇಲ್ಲಿ ಪ್ರಾಮುಖ್ಯತೆ ಇದೆ. ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಾಧುಕೋಕಿಲಾ ಅವರ ಸಂಗೀತದ ಬಗ್ಗೆ ಹೆಚ್ಚು ಮಾತನಾಡುವ ಹಾಗಿಲ್ಲ. ಕೆಲವು ನ್ಯೂನತೆಗಳನ್ನು ಬಿಟ್ಟು ನೋಡಿದರೆ ಜಾಜಿಮಲ್ಲಿಗೆ ಕಂಪು ಸೂಸುತ್ತದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಅತಿ ಹಗುರವಾದ ಕಾರ್ಯಗಳಲ್ಲೂ ನೀವು ಎಚ್ಚರ ವಹಿಸುವುದರಿಂದ ನಿಮ್ಮ ಉತ್ಸಾಹ ಕುಂದುವುದಿಲ್ಲ. ಬುಧವಾರ ಮತ್ತು ಗುರುವಾರದಂದು ನಿಮಗೆ ಸಹಾಯ ಹಾಗೂ ನೆರವಿನ ಹಸ್ತ ಧಾರಾಳವಾಗಿ ಬರುವುದು. ಕೆಲಸದಲ್ಲಿ ಎಂದಿಗಿಂತಲೂ, ಹೆಚ್ಚು ತಂತ್ರಗಾರಿಕೆಯಿಂದ ವರ್ತಿಸಬೇಕಾಗುತ್ತದೆ. ಸೋದರ ಮಾವನೊಡನೆ ಶುಭ ಕಾರ್ಯಗಳ ಬಗ್ಗೆ ಕೂಲಂಕುಷ ಚರ್ಚೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಮಾಲಾಶ್ರೀ ಖುಷಿಯಲ್ಲಿದ್ದಾರೆ. ಹಾಗಂತ ಅವರ ಚಿತ್ರವನ್ನು ಜನ ಥಿಯೇಟರ್‌ಗೆ ಮುಗಿ ಬಿದ್ದು ನೋಡುತ್ತಿದ್ದಾರೆಂದಲ್ಲ. ಬದಲಿಗೆ ರಾಮು ಸಂಸ್ಥೆಯ ಚಿತ್ರವೊಂದಕ್ಕೆ ಸಿಗಬೇಕಾದ ಓಪನಿಂಗ್ ಸಿಕ್ಕಿದೆ. ಈ ವಿಷಯವನ್ನು |
| |
|
|
|
|
|
|