|
| ದರ್ಶನ್ ಈಗ ಯೋಧ |
| ಮಂಗಳವಾರ, 31 ಮಾರ್ಚ್ 2009 ( 11:08 IST ) | |
ಕನ್ನಡದಲ್ಲಿ ದಿನೇ ದಿನೇ ಟ್ರೆಂಡ್‌ಗಳು ಬದಲಾಗುತ್ತಿವೆ. ಮೊದಲು ಶೀರ್ಷಿಕೆ ಇಟ್ಟು ಸಿನಿಮಾ ಘೋಷಣೆ ಮಾಡಿ ಆಮೇಲೆ ಚಿತ್ರೀಕರಣ ಆರಂಭಿಸುವುದು ಹಳೆಯ ಸಂಪ್ರದಾಯ. ಈಗೀಗ ಅದು ಬದಲಾಗುತ್ತಿದೆ. ಮೊದಲು ಸಿನಿಮಾ ಘೋಷಣೆ ಅನಂತರ ಚಿತ್ರೀಕರಣಕ್ಕೆ ಚಾಲನೆ. ಒಳ್ಳೆಯ ಶೀರ್ಷಿಕೆ ಸಿಗುವವರೆಗೆ 'ಪ್ರೊಡಕ್ಷನ್ ನಂ-1' ಎಂದು ಹೆಸರಿಡುತ್ತಾರೆ.
ಇದೇ ರೀತಿ ಚಿತ್ರೀಕರಣವಾದ ರಾಕ್ಲೈನ್ ವೆಂಕಟೇಶ್ ನಿರ್ಮಾಣದ ದರ್ಶನ್ ಅಭಿನಯಿಸುತ್ತಿರುವ ಪ್ರೊಡಕ್ಷನ್ ನಂ.22 ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿಯುವ ಹೊತ್ತಿಗೆ 'ಯೋಧ' ಎಂದು ನಾಮಕರಣ ಮಾಡಲಾಗಿದೆ. ಇನ್ನು ಹಾಡುಗಳ ಚಿತ್ರೀಕರಣ ಬಾಕಿ ಇದ್ದು, ಚಿತ್ರತಂಡ ವಿದೇಶ ಪ್ರಯಾಣ ಬೆಳೆಸಲಿದೆ.
ತಮಿಳಿನಲ್ಲಿ ಶ್ರೀಕಾಂತ್, ಸ್ನೇಹಾ ಅಭಿನಯಿಸಿದ್ದ ಬೋಸ್ ಚಿತ್ರದ ರೀಮೇಕ್ ಆಗಿರುವ ಯೋಧದಲ್ಲಿ ದರ್ಶನ್‌ಗೆ ನಾಯಕಿಯಾಗಿ ನಿಖಿತಾ ಅಭಿನಯಿಸುತ್ತಿದ್ದಾರೆ. ಚಿತ್ರವನ್ನು ಓಂಪ್ರಕಾಶ್ ರಾವ್ ನಿರ್ದೇಶಿಸುತ್ತಿದ್ದಾರೆ. ರಾಕ್ಲೈನ್ ನಿರ್ಮಾಣದ ಜಂಗ್ಲಿ ಚಿತ್ರ ತಕ್ಕಮಟ್ಟಿಗೆ ಯಶಸ್ಸು ಕಂಡಿತ್ತು. ಈಗ ರಾಕ್ಲೈನ್ ಮತ್ತೆರಡು ಚಿತ್ರಗಳನ್ನು ಮಾಡುತ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಮನಸಾರೆ ಹಾಗೂ ಸಾಧುಕೋಕಿಲ ನಿರ್ದೇಶನದಲ್ಲಿ ದೇವ್ರು.ದರ್ಶನ್ ಅಭಿನಯದ ಬಾಸ್ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಆ ನಂತರ ಯೋಧ ಬರಲಿದ್ದಾನೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮುದ್ರಣ ಮತ್ತು ವ್ಯಾಪಾರಿಗಳಿಗೆ ಹೆಚ್ಚಿನ ಒತ್ತಡ. ಕಾರ್ಯಭಾರ ಹೆಚ್ಚಾಗುತ್ತದೆ. ಉದ್ಯೋಗಿಗಳು ಬಡ್ತಿ , ಇನ್ನಿತರ ಪ್ರಯೋಜನಗಳನ್ನು ಪಡೆಯುತ್ತಾರೆ. ಸ್ನೇಹಿತರಿಂದ ಸಹಾಯ, ವ್ಯಾಪಾರಿಗಳಿಗೆ ಮಿಶ್ರ ಫಲಿತಾಂಶ. ತಮಾಷೆಯಲ್ಲಿ ಪಾಲ್ಗೊಳ್ಳುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸಮೀಕ್ಷೆ - ಕನ್ನಡ ಚಿತ್ರವೊಂದರಲ್ಲಿ ಅಮೀಷಾ ಪಟೇಲ್ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿಬರುತ್ತಿದೆ. ತೆಲುಗು ಚಿತ್ರ 'ಆಥನೊಕ್ಕಡೆ' ಯನ್ನು ನವೀನ್ ಎಂಬುವರು ಕನ್ನಡದಲ್ಲಿ ರೀಮೇಕ್ ಮಾಡಿ |
| |
|
|
|
|
|
|