|
| ಕಿರಣ್‌ಬೇಡಿಯ ಅಬ್ಬರವೋ ಅಬ್ಬರ |
ಚಿತ್ರ: ಕನ್ನಡದ ಕಿರಣ್ ಬೇಡಿ ನಿರ್ದೇಶನ: ಓಂ ಪ್ರಕಾಶ್ ರಾವ್ ತಾರಾಗಣ: ಮಾಲಾಶ್ರೀ, ರಂಗಾಯಣ ರಘು, ಆಶೀಶ್ ವಿದ್ಯಾರ್ಥಿ
ಬಹು ನಿರೀಕ್ಷೆಯ ಕಿರಣ್ ಬೇಡಿ ಚಿತ್ರ ಬಿಡುಗಡೆಯಾಗಿದೆ. ಮಾಲಾಶ್ರೀ ಅಭಿಮಾನಿಗಳಿಗೆ ಈ ಚಿತ್ರ ಹೇಳಿ ಮಾಡಿಸಿದಂತಿದೆ. ಮಾಲಾಶ್ರೀಯ ಒಂದೊಂದು ಫೈಟ್‌ಗಳನ್ನು ನೋಡುತ್ತಿದ್ದರೆ ಮೈ ಜುಮ್ಮೆನಿಸುತ್ತದೆ. ಆ ಮಟ್ಟಿಗೆ ಅವರು ಇಲ್ಲಿ ಸಾಹಸ ಮಾಡಿದ್ದಾರೆ. ಆದರೆ ಚಿತ್ರಕಥೆಗೆ ಬಗ್ಗೆ ಗಮನ ಹರಿಸಿದರೆ ಕಳೆದ ವಾರವಷ್ಟೇ ಬಿಡುಗಡೆಯಾದ ವೀರಮದಕರಿಯ ಕಥೆಗೂ ಇಲ್ಲಿನ ಕಥೆಗೂ ಸಾಮ್ಯತೆ ಇದೆ.
ನಿರ್ದೇಶಕ ಓಂ ಪ್ರಕಾಶ್‌ರಾವ್ ತೆಲುಗಿನ ವಿಕ್ರಮಾರ್ಕುಡು ಚಿತ್ರದ ಪ್ರೇರಣೆಗೊಳಗಾಗಿದೆ. ಇಲ್ಲೂ ಅಷ್ಟೇ ಮಾಲಾಶ್ರೀ ದ್ವಿಪಾತ್ರದಲ್ಲಿ ಮಿಂಚಿದ್ದಾರೆ. ಒಂದರಲ್ಲಿ ಕಿರಣ್ ಬೇಡಿಯಾದರೆ ಮತ್ತೊಂದರಲ್ಲಿ ಬಳ್ಳಾರಿ ಭಾಗ್ಯಲಕ್ಷ್ಮೀಯಾಗಿ ದುಷ್ಟರನ್ನು ಚೆಂಡಾಡುತ್ತಾರೆ.
ಮಾಲಾಶ್ರೀ ಈ ವಯಸ್ಸಿನಲ್ಲೂ ಮತ್ಯಾವ ನಾಯಕಿಯೂ ಮಾಡದಂತಹ ಸಾಹಸ ಮಾಡಿದ್ದಾರೆ. ತಮ್ಮ ನಟನೆಯಲ್ಲಿ ಫ್ರೆಶ್ನೆಸ್ ಉಳಿಸಿಕೊಂಡಿದ್ದಾರೆ. ಮಾಲಾಶ್ರೀ ಮೇಲೆ ಅವರ ಅಭಿಮಾನಿಗಳು ಇಟ್ಟ ಪ್ರೀತಿಗೆ ಮೋಸವಾಗದಂತೆ ನಟಿಸಿದ್ದಾರೆ. ಚಿತ್ರದಲ್ಲಿ ಐದಾರು ಫೈಟ್‌ಗಳಿವೆ. ಆದರೆ ಪ್ರತಿ ಫೈಟ್‌ಗಳು 15 ನಿಮಿಷಕ್ಕೂ ಹೆಚ್ಚಿವೆ.
ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಚಕಚಕನೇ ಓಡುವ ಎಡಿಟಿಂಗ್. ಚಿತ್ರ ಎಲ್ಲೂ ಬೋರ್ ಹೊಡೆಸುವುದಿಲ್ಲ. ಚಿತ್ರದಲ್ಲಿ ಬರುವ ಹಂಸಲೇಖಾ ಅವರ ಸಂಗೀತ ಮುದ ನೀಡುತ್ತದೆ. ಉಳಿದಂತೆ ಮಾಲಾಶ್ರೀ ತಂದೆಯ ಪಾತ್ರದಲ್ಲಿ ನಟಿಸಿದ ಶ್ರೀನಿವಾಸ್ಮೂರ್ತಿ ತಮ್ಮ ಭಾವನಾತ್ಮಕ ಅಭಿನಯದಿಂದ ಗಮನ ಸೆಳೆಯುತ್ತಾರೆ. ಉಳಿದಂತೆ ಕಾಮಿಡಿ ವಿಲನ್ ಆಗಿ ರಂಗಾಯಣ ರಘು ಗಮನ ಸೆಳೆಯುತ್ತಾರೆ. ಉಳಿದಂತೆ ವಿಲನ್ ಪಾತ್ರದಲ್ಲಿ ಆಶೀಶ್ ವಿದ್ಯಾರ್ಥಿ ಅಬ್ಬರಿಸುತ್ತಾರೆ.ಈ ವಯಸ್ಸಿನಲ್ಲೂ ಮಾಲಾಶ್ರೀಯ ಫೈಟಿಂಗ್ ನೋಡಲಾದರೂ ಒಮ್ಮೆ ಚಿತ್ರ ನೋಡಲೇಬೇಕು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಶತ್ರು ಪತನ, ಔದ್ಯೋಗಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ, ನೆಂಟರ ಸಹಕಾರದಿಂದ ಸ್ವತ್ತು ವಿವಾದಗಳಿಗೆ ಚಾಲನೆ, ಬಂಧು ಮತ್ಸರ ಪರಾಕಾಷ್ಠೆ ತಲುಪುವುದರಿಂದ ಸ್ವತ್ತು ವಿವಾದಗಳಲ್ಲಿ ಕಂಗಾಲಾಗುವಿರಿ. ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ಔತಣ ಕೂಟಗಳಿಗೆ ಆಮಂತ್ರಣ, ವಾಹನ ವಹಿವಾಟುಗಳಲ್ಲಿ ಹಿರಿಯರ ಪ್ರಶಂಸೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸಮೀಕ್ಷೆ - ಕನ್ನಡ ಚಿತ್ರವೊಂದರಲ್ಲಿ ಅಮೀಷಾ ಪಟೇಲ್ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿಬರುತ್ತಿದೆ. ತೆಲುಗು ಚಿತ್ರ 'ಆಥನೊಕ್ಕಡೆ' ಯನ್ನು ನವೀನ್ ಎಂಬುವರು ಕನ್ನಡದಲ್ಲಿ ರೀಮೇಕ್ ಮಾಡಿ |
| |
|
|
|
|
|
|