ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ಕನ್ನಡದ ಕಿರಣ್‌ಬೇಡಿ
ಸಿನಿಮಾ: ಕನ್ನಡದ ಕಿರಣ್‌ಬೇಡಿ
ನಿರ್ದೇಶನ: ಓಂ ಪ್ರಕಾಶ್ ರಾವ್
ತಾರಾಬಳಗ: ಮಾಲಾಶ್ರೀ, ಸರಿಗಮ ವಿಜಿ

ಒಂದು ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಮನೋಜ್ಞ ಅಭಿನಯ ನೀಡಿದ ಮಾಲಾಶ್ರೀ ಅವರ ಬಹು ನಿರೀಕ್ಷೆಯ ಕಿರಣ್ ಬೇಡಿ ಚಿತ್ರ ಈ ವಾರ ತೆರೆ ಕಾಣಲಿದೆ.

ಕೋಟಿ ನಿರ್ಮಾಪಕರೆಂದೇ ಖ್ಯಾತರಾದ ರಾಮು ಈ ಚಿತ್ರವನ್ನು ನಿರ್ಮಿಸುತ್ತಿದ್ದು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದಾರೆ. ಮಾಸ್ ಚಿತ್ರಗಳನ್ನು ನಿರ್ದೇಶಿಸುವುದರಲ್ಲಿ ಎತ್ತಿದ ಕೈ. ಈ ಚಿತ್ರದಲ್ಲಿ ಮತ್ತೊಮ್ಮೆ ಮಾಲಾಶ್ರೀಯ ಆರ್ಭಟವನ್ನು ಕಾಣಬಹುದು.

ದುರ್ಗಿ ಚಿತ್ರದಲ್ಲಿನ ಆಕ್ಷನ್‌ಗೂ ಈ ಚಿತ್ರದಲ್ಲಿನ ಆಕ್ಷನ್‌ಗೂ ತುಂಬಾ ವ್ಯತ್ಯಾಸವಿದೆಯಂತೆ. ಚಿತ್ರದ ಒಂದೊಂದು ಫೈಟ್‌ಗೂ 40 ರಿಂದ 60 ಲಕ್ಷ ಖರ್ಚು ಮಾಡಿದ್ದಾರೆ. ಫೈಟ್ ಸೀನ್ ಶೂಟಿಂಗ್ ಸಮಯದಲ್ಲಿ ಸರಿಗಮ ವಿಜಿ ಗಾಯಗೊಂಡಿದ್ದರು.

ಚಿತ್ರಕ್ಕೆ ಹಂಸಲೇಖಾ ಸಂಗೀತ ನೀಡಿದ್ದಾರೆ. ಇದರೊಂದಿಗೆ ಚಿತ್ರದಲ್ಲಿ ಮಧುರವಾದ ಸಂಗೀತಕ್ಕೂ ಬರವಿಲ್ಲ ಎನ್ನಲಾಗುತ್ತಿದೆ. ಚಿತ್ರಕ್ಕಾಗಿ ಮಾಲಾಶ್ರೀ 15 ರಿಂದ 16 ಕೆ.ಜಿ ತೂಕ ಇಳಿಸಿಕೊಂಡಿದ್ದಾರಂತೆ.

ಈ ಕಿರಣ್ ಬೇಡಿಗೂ ಆ ಕಿರಣ್ ಬೇಡಿಗೂ ತುಂಬಾ ವ್ಯತ್ಯಾಸವಿದೆ. ಚಿತ್ರ ಮಾಡುವುದಕ್ಕೂ ಮುನ್ನ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಅವರ ಜೀವನ ಕಥೆ ಆಧರಿಸಿ ಚಿತ್ರ ಮಾಡಬೇಕಾದ್ದರಿಂದ ಆ ಕಥೆಯನ್ನು ಕೈ ಬಿಟ್ಟು ಸಿನಿಮಾ ಟಚ್ ಇರುವ ಕಥೆ ಇಟ್ಟುಕೊಂಡು ಚಿತ್ರ ಮಾಡಿದ್ದೇವು. ಚಿತ್ರದ ಹೆಸರಿನಲ್ಲಿ ಕಿರಣ್ ಬೇಡಿ ಅವರಿಗೆ ಧಕ್ಕೆ ಬರಬಾರದೆಂದು ಈ ನಿರ್ಧಾರಕ್ಕೆ ಬಂದೆವು ಎನ್ನುತ್ತಾರೆ ಮಾಲಾಶ್ರೀ.

ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಆದ್ದರಿಂದ ಮಹಿಳೆಯರು ಕೂಡಾ ಈ ಚಿತ್ರ ನೋಡಬೇಕು ಎನ್ನುತ್ತಾರೆ ಮಾಲಾಶ್ರೀ. ಕಿರಣ್‌ಬೇಡಿಯ ಮೋಡಿ ಏನಾಗುತ್ತದೋ ಕಾದು ನೋಡಬೇಕು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮ‌ೂಲ ಚಿತ್ರಕ್ಕೆ ಅಂಜಿದ ಅಂಜದಿರು
ನಿಷೇಧಾಜ್ಞೆ
ಹಳೆಯ ರಾಜಕುಮಾರಿ
ನಿರೀಕ್ಷೆ ಹುಸಿಗೊಳಿಸಿದ ನಂಯಜಮಾನ್ರು
ವೆಂಕಟ್ ಇನ್ ಸಂಕಟದಲ್ಲಿ ಹಾಸ್ಯವೋ ಹಾಸ್ಯ
ನಿರೀಕ್ಷೆಯ ಮಟ್ಟ ತಲುಪದ ಜಂಗ್ಲಿ
ಗ್ರಹ ಗತಿ
ದೈನಿಕ - ಹಿರಿಯರೊಂದಿಗೆ ಚರ್ಚೆ ಫಲಪ್ರದವಾಗುವುದು. ವಾಹನ ಖರೀದಿಯೋಗ, ಸ್ತ್ರೀಯರಿಗೆ ಆತ್ಮಿಯರಿಂದ ಅಹ್ವಾನ, ನೂತನ ಗೆಳೆಯರ ಸ್ನೇಹ ಲಭ್ಯ. ಕ್ರೀಡೆ ಮತ್ತು ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಗೌಡರ ಕುಟುಂಬ ರಾಜಕಾರಣಕ್ಕೆ ಮತ್ತೊಬ್ಬ ಸೊಸೆ
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಮತ್ತೊಬ್ಬ....
ಪ್ರಚಾರಕ್ಕೆ ತೆರಳದಂತೆ ಸರ್ಕಾರಿ ನೌಕರರಿಗೆ ಎಚ್ಚರ
ಭಾರತ್ ನಿರ್ಮಾಣ್ ಅಲ್ಲ, ನಿರ್ನಾಮ: ರಾಘವೇಂದ್ರ
ಮನರಂಜನೆ
ಚಿತ್ರ ಸಮೀಕ್ಷೆ - ಕನ್ನಡ ಚಿತ್ರವೊಂದರಲ್ಲಿ ಅಮೀಷಾ ಪಟೇಲ್ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿಬರುತ್ತಿದೆ. ತೆಲುಗು ಚಿತ್ರ 'ಆಥನೊಕ್ಕಡೆ' ಯನ್ನು ನವೀನ್ ಎಂಬುವರು ಕನ್ನಡದಲ್ಲಿ ರೀಮೇಕ್ ಮಾಡಿ
ಮುಂದೆ ಓದಿ|ಮತ್ತಷ್ಟು...