|
| ಹಳೆಯ ರಾಜಕುಮಾರಿ |
| ಶನಿವಾರ, 7 ಮಾರ್ಚ್ 2009 ( 16:20 IST ) | |
ಸಿನಿಮಾ ವಿಮರ್ಶೆ ಚಿತ್ರ: ರಾಜಕುಮಾರಿ ನಿರ್ದೇಶನ: ಎಸ್.ಗೋವಿಂದ ತಾರಾಗಣ: ರವಿಚಂದ್ರನ್, ಬಾಲಾಜಿ, ನಿಖಿತಾ, ಕನ್ನಿಕಾ ವಿಮರ್ಶೆ: ರವಿಪ್ರಕಾಶ್ ರೈ
ರಾಜಕುಮಾರಿ ಬಂದಿದ್ದಾಳೆ. ಆದರೆ ಇಂತಹ ನೂರಾರು ರಾಜಕುಮಾರಿಗಳನ್ನು ಪ್ರೇಕ್ಷಕ ವಾರ ವಾರ ನೋಡಿ ಬೇಸತ್ತಿದ್ದಾನೆ. ಆದರೆ ನಿರ್ದೇಶಕರಿಗೆ ಇದ್ಯಾವುದರ ಪರಿವೆಯೇ ಇಲ್ಲದಂತೆ ಕಾಣುತ್ತದೆ. ಹೌದು, ಈ ವಾರ ಬಿಡುಗಡೆಯಾದ ರಾಜಕುಮಾರಿ ಚಿತ್ರದಲ್ಲಿ ಯಾವುದೇ ಹೊಸತನವಿಲ್ಲ. ಇಂತಹ ಅನೇಕ ಚಿತ್ರಗಳು ಬಂದು ವಾರದೊಳಗಡೆ ಎತ್ತಂಗಡಿಯಾಗಿವೆ. ಮತ್ತೆ ಅಂತಹುದೇ ಚಿತ್ರವನ್ನು ನಿರ್ಮಿಸುವ ದರ್ದು ಏನಿತ್ತು ಎಂಬುದನ್ನು ನಿರ್ದೇಶಕರಲ್ಲೇ ಕೇಳಬೇಕು.
ರಾಜಕುಮಾರಿ ವಠಾರವೊಂದರಲ್ಲಿ ನಡೆಯುವ ಕಥೆ. ಇಬ್ಬರು ನಾಯಕಿರಿದ್ದ ಮೇಲೆ ಅದೊಂದು ತ್ರಿಕೋನ ಪ್ರೇಮ ಕಥೆಯ ಚಿತ್ರ ಎಂದು ಹೊಸತಾಗಿ ಹೇಳಬೇಕಾಗಿಲ್ಲ. ವಠಾರದಲ್ಲಿ ನಾಯಕ, ನಾಯಕಿ, ಕಾಮಿಡಿಯನ್ ಎಲ್ಲರು ಇರುತ್ತಾರೆ. ಮೊದಲು ನಾಯಕನಿಗೆ ನಾಯಕಿ ಕೆನ್ನಗೆ ಬಾರಿಸುತ್ತಾಳೆ. ನಂತರ ಯಾವುದೋ ಒಂದು ಸಂದರ್ಭದಲ್ಲಿ ನಾಯಕ ಫೈಟ್ ಮಾಡುವುದನ್ನು ಕಂಡು ಅವನನ್ನು ಲವ್ ಮಾಡಲು ನಿರ್ಧರಿಸುತ್ತಾಳೆ. ಇಂತಹ ಚಿತ್ರಗಳು ನಮ್ಮ ಕನ್ನಡದಲ್ಲಿ ಎಷ್ಟು ಬಂದಿಲ್ಲ ಹೇಳಿ.
ಚಿತ್ರದಲ್ಲಿ ನಾಯಕಿ ಕನ್ನಿಕಾ ವಿಧವೆ ಎಂದು ಸ್ವಯಂ ಘೋಷಿಸಿಕೊಂಡು ಯಾವುದೇ ಮೇಕಪ್ ಮಾಡಿಕೊಳ್ಳಬಾರದು ಎಂದು ನಿರ್ಧರಿಸುತ್ತಾಳೆ. ಆದರೆ ಕೆಲವು ದೃಶ್ಯಗಳಲ್ಲಿ ನಾಯಕಿಯ ತುಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ಲಿಪ್‌ಸ್ಟಿಕ್ ಹಚ್ಚಿರುವುದನ್ನು ಕಾಣಬಹುದು. ಅದೇ ರೀತಿ ಅಜ್ಜನ ಪಾತ್ರದಲ್ಲಿ ಕಾಣಿಸಿಕೊಂಡ ಶ್ರೀನಿವಾಸಮೂರ್ತಿ ಅವರಿಗೆ ಅಂಟಿಸಿದ ಮೀಸೆ ಕೃತಕವೆಂಬುದು ಸ್ವಷ್ಟವಾಗಿ ಗೊತ್ತಾಗುತ್ತದೆ. ಇಲ್ಲಿ ನಿರ್ದೇಶಕರು ಮೇಕಪ್ ಬಗ್ಗೆ ಗಮನ ಹರಿಸುವಲ್ಲಿಯೂ ವಿಫಲವಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ ರವಿಚಂದ್ರನ್ ಇಂತಹ ಕಥೆ ಇಲ್ಲದ ಚಿತ್ರದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲು ಯಾಕೆ ಒಪ್ಪಿದರು ಎಂಬುದು ಆಶ್ಚರ್ಯ. ಬಹುಶಃ ತಮ್ಮ ಬಾಲಾಜಿಗಾಗಿರಬೇಕು. ಬಾಲಾಜಿಯ ನಟನೆ ಎಲ್ಲೂ ಇಂಪ್ರೆಸ್ ಮಾಡುವುದಿಲ್ಲ. ನಾಯಕಿಯರಿಬ್ಬರು ನಿರ್ದೇಶಕರ ಕೈ ಗೊಂಬೆ. ಉಳಿದಂತೆ ರಂಗಾಯಣ ರಘು, ಬುಲೆಟ್ ಪ್ರಕಾಶ್ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಿರ್ಮಾಪಕ ಮಂಜುಗೆ 2009 ಲಕ್ಕಿಯಂತೆ. ವರ್ಷದ ಅವರ ಮೊದಲ ಚಿತ್ರವೇ ಹೀಗಿದೆ. ಮುಂದೇನಾಗುತ್ತದೋ ಶಿವನೇ ಬಲ್ಲ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕೃಷಿಕರಿಗೆ ನೂತನ ಆಲೋಚನೆಗಳು ಎದುರಾಗುತ್ತವೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ.ವ್ಯಾಪಾರಿಗಳಿಗೆ ಉತ್ತಮ ಧನಲಾಭ.ಸ್ತ್ರೀಯರಿಂದ ದೂರವಿರಿ. ಇಲ್ಲವಾದಲ್ಲಿ ಹಾನಿ ಸಂಭವ. ವಿದ್ಯಾರ್ಥಿಗಳು ಪ್ರೇಮ ಪ್ರಣಯದಿಂದ ದೂರವಿರುವುದು ಉಚಿತ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಹಾಡೊಂದರ ಸಾಲನ್ನೇ ಟೈಟಲ್ಲಾಗಿಸಿ ಬರುತ್ತಿರುವ ಚಿತ್ರ 'ಈ ಸಂಜೆ'. ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಡಬ್ಬಿಂಗ್ ಕಾರ್ಯವನ್ನು ಮುಗಿಸಿ ಈಗ ಹಿನ್ನೆಲೆ ಸಂಗೀತ ಕಾರ್ಯಕ್ಕೆ ಸಿದ್ಧತೆ |
| |
|
|
|
|
|
|