ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ನಿರೀಕ್ಷೆ ಹುಸಿಗೊಳಿಸಿದ ನಂಯಜಮಾನ್ರು
ಶನಿವಾರ, 28 ಫೆಬ್ರವರಿ 2009   ( 11:10 IST )
ಚಿತ್ರ: ನಂಯಜಮಾನ್ರು
ನಿರ್ದೇಶನ: ಟಿ.ಎಸ್.ನಾಗಾಭರಣ
ತಾರಾಗಣ: ಡಾ. ವಿಷ್ಣುವರ್ಧನ್, ನವ್ಯಾನಾಯರ್, ವಿಜಯರಾಘವೇಂದ್ರ
ವಿಮರ್ಶೆ: ರವಿಪ್ರಕಾಶ್ ರೈ

ಕೆಲ ನಿರ್ದೇಶಕರ ಚಿತ್ರಗಳೆಂದರೆ ಅಲ್ಲಿ ಸಮಾಜಕ್ಕೆ ಏನಾದರೂ ಒಂದು ಸಂದೇಶವಿರುತ್ತದೆ. ಜವಾಬ್ದಾರಿಯುತವಾಗಿ ಚಿತ್ರ ನಿರ್ದೇಶಿಸುತ್ತಾರೆ. ನಿರ್ದೇಶಕ ಟಿ.ಎಸ್.ನಾಗಭರಣ್ ಅವರ ಬಗ್ಗೆಯೂ ಪ್ರೇಕ್ಷಕರಿಗೆ ಇದೇ ಭಾವನೆ ಇದೆ. ಆದರೆ ಈ ವಾರ ಬಿಡುಗಡೆಯಾದ ನಂಯಜಮಾನ್ರು ಚಿತ್ರವನ್ನು ನೋಡಿದಾಗ ನಾಗಾಭರಣ ಯಾಕೋ ತಮ್ಮ ಜವಾಬ್ದಾರಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಒಂದು ಗಟ್ಟಿತನವಿಲ್ಲದ ಕಥೆಯಲ್ಲಿ ಚಿತ್ರವಿಡೀ ಸಾಗುತ್ತದೆ. ಎಲ್ಲೂ ಮನಸಿಗೆ ನಾಟುವ ಸಂಭಾಷಣೆಗಳಾಗಲಿ, ದೃಶ್ಯಗಳಾಗಲಿ ಕಾಣಸಿಗುವುದಿಲ್ಲ. ಚಿತ್ರದ ಕೆಲವು ದೃಶ್ಯಗಳನ್ನು ನೋಡುತ್ತಿದ್ದಂತೆ ಆಪ್ತಮಿತ್ರ ಚಿತ್ರದ ಕಥೆ ನೆನಪಾಗುತ್ತದೆ. ಅಲ್ಲಿ ಸೌಂದರ್ಯ ನಾಗವಲ್ಲಿಯಾದರೆ ಇಲ್ಲಿ ವಿಷ್ಣುವರ್ಧನ್ ಸಾಕು ಮಗಳು ನವ್ಯಾ ನಾಯರ್ ಊರ್ಮಿಳಾ ಆಗಿ ಬದಲಾಗುತ್ತಾಳೆ. ಮಾನಸಿಕ ಅಸ್ವಸ್ಥತೆಯ ಕುರಿತೇ ಇಲ್ಲೂ ಕಥೆ ಹೆಣೆಯಲಾಗಿದೆ.

ಕೆಲವೊಮ್ಮೆ ಚಿತ್ರದ ಕಥೆ ಚೆನ್ನಾಗಿಲ್ಲವೆಂದರೂ ಅಲ್ಲಿನ ಎಡಿಟಿಂಗ್ ಹಾಗೂ ರೀರೆಕಾರ್ಡಿಂಗ್‌ಗಳಿಂದ ವರ್ಕ್ಔಟ್ ಆಗುತ್ತದೆ. ಆದರೆ ಇಲ್ಲಿ ಅವೆರಡೂ ಕೈ ಕೊಟ್ಟಿದೆ. ಚಿತ್ರ ನಿಧಾನ ಗತಿಯಿಂದ ಸಾಗುತ್ತದೆ. ಚಿತ್ರದಲ್ಲಿ ವಿಷ್ಣುವರ್ಧನ್ ಕುಟುಂಬ ಪ್ರವಾಸ ಹೋಗಿರುವಾಗ ಬಸ್ ಪ್ರಪಾತಕ್ಕೆ ಬೀಳುತ್ತದೆ. ಆ ದೃಶ್ಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಸ್ಸಿನೊಳಗೆ ಗೊಂಬೆಗಳನ್ನು ಕೂರಿಸಿರುವುದನ್ನು ಪ್ರೇಕ್ಷಕರು ಕಾಣಬಹುದು.

ಇದಕ್ಕೆ ಕಾರಣ ಕಳಪೆ ಎಡಿಟಿಂಗ್. ಚಿತ್ರದಲ್ಲಿ ಹಾಡುಗಳು ಕೂಡಾ ಹೆಚ್ಚು ಹಿತಕರವೆನಿಸುವುದಿಲ್ಲ.28 ವರ್ಷಗಳ ಬಳಿಕ ಜತೆಯಾದ ನಾಗಾಭರಣ ಹಾಗೂ ವಿಷ್ಣುವರ್ಧನ್ ಅವರ ಬಗ್ಗೆ ಅಭಿಮಾನಿಗಳು ಭಾರೀ ನಿರೀಕ್ಷೆಯಿಂದಿದ್ದರು. ಆದರೆ ನಿರೀಕ್ಷೆ ಹುಸಿಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಚಿತ್ರ ಮ‌ೂಡಿಬಂದಿಲ್ಲ. ಚಿತ್ರದಲ್ಲಿ ವಿಷ್ಣುವರ್ಧನ್ ಎಂದಿನ ಅಭಿನಯ ನೀಡಿದ್ದಾರೆ. ನವ್ಯಾ ನಾಯರ್ ಅಭಿನಯ ಇಷ್ಟವಾಗುತ್ತದೆ. ಉಳಿದಂತೆ ವಿಜಯಾರಾಘವೇಂದ್ರ, ಅನಂತನಾಗ್ ಚೆನ್ನಾಗಿ ಅಭಿನಯಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವೆಂಕಟ್ ಇನ್ ಸಂಕಟದಲ್ಲಿ ಹಾಸ್ಯವೋ ಹಾಸ್ಯ
ನಿರೀಕ್ಷೆಯ ಮಟ್ಟ ತಲುಪದ ಜಂಗ್ಲಿ
ಹೊಸತನ ಕೂಡಿದ ಅಂಬಾರಿ
ನಂದನ ಅದೇ ರಾಗ ಅದೇ ಹಾಡು
ಸಣ್ಣ ಎಳೆಯನ್ನು ಎರಡೂವರೆ ಗಂಟೆ ಎಳೆದ ಸರ್ಕಸ್
ಕ್ರೈಂ ವರದಿಗಾರ್ತಿಯ ಮೆಚ್ಚಬೇಕಾದ ಸಾಹಸ
ಗ್ರಹ ಗತಿ
ದೈನಿಕ - ಪ್ರಮುಖರ ಪರಿಚಯವಾಗಬಹುದು. ಬಂಧುಗಳೊಂದಿಗೆ ಉತ್ತಮ ವಾತ್ಸಲ್ಯ ಹೆಚ್ಚಾಗುತ್ತದೆ. ಆಸ್ತಿ ವಿವಾದಗಳು ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ಬರಲಿವೆ. ಪ್ರಯಾಣದಲ್ಲಿ ಅಪರಿಚಿತರೊಂದಿಗೆ ಮಿತ್ರತ್ವ ಸಲ್ಲದು. ಸ್ತ್ರೀಯರು ಶುಭವಾರ್ತೆಯನ್ನು ತರುತ್ತಾರೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
NRB
 
ಹಾಸನದಿಂದಲೇ ಸ್ಪರ್ಧೆ: ದೇವೇಗೌಡ
ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಸ್ಪಷ್ಟ ತೀರ್ಮಾನಕ್ಕೆ ...
ಮಂಗಳೂರು: ಎಮ್ನೇಶಿಯ ಪಬ್ ಲೈಸೆನ್ಸ್ ರದ್ದು
ಲಂಚ ಪುರಾಣ-ತನಿಖೆಗೆ ಸದನ ಸಮಿತಿ: ಶೆಟ್ಟರ್
ಮನರಂಜನೆ
ಚಿತ್ರ ಸುದ್ದಿ - ಅದು ಹೌಸ್‌ಫುಲ್ ಚಿತ್ರದ ಪತ್ರಿಕಾಗೋಷ್ಠಿ. ನಿರ್ದೇಶಕ ಹೇಮಂತ್ ಹೆಗ್ಡೆ ತಮ್ಮ ಚಿತ್ರದ ಬಗೆ ಹೇಳಿಕೊಂಡರು. ಈಗಾಗಲೇ ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ. ಚಿತ್ರ ತಂಡ ಉಡುಪಿ ಬಳಿ 62 ಅಡಿ
ಮುಂದೆ ಓದಿ|ಮತ್ತಷ್ಟು...