|
| ವೆಂಕಟ್ ಇನ್ ಸಂಕಟದಲ್ಲಿ ಹಾಸ್ಯವೋ ಹಾಸ್ಯ |
| ಶನಿವಾರ, 21 ಫೆಬ್ರವರಿ 2009 ( 18:27 IST ) | |
ವಿಮರ್ಶೆ: ರವಿಪ್ರಕಾಶ್ ರೈ ಹಾಸ್ಯ ಚಿತ್ರ ಮಾಡುವುದರಲ್ಲಿ ತಾವು ಸಿದ್ಧಹಸ್ತರೆಂಬುದನ್ನು ನಟ ನಿರ್ದೇಶಕ ರಮೇಶ್ ಅರವಿಂದ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರ ನಿರ್ದೇಶನದ 'ವೆಂಕಟ ಇನ್ ಸಂಕಟ' ಚಿತ್ರ ಈ ವಾರ ಬಿಡುಗಡೆಯಾಗಿದೆ. ಚಿತ್ರ ನೋಡಿ ಹೊರಬಂದವರು ಚಿತ್ರವನ್ನು ಬಾಯ್ತುಂಬ ಹೊಗಳುತ್ತಿದ್ದಾರೆ. ಸಾಮಾನ್ಯವಾಗಿ ಹಾಸ್ಯ ಚಿತ್ರಗಳು ಬರುತ್ತಲೇ ಇರುತ್ತವೆ. ಆದರೆ ಅವುಗಳನ್ನು ನೋಡನೋಡುತ್ತಿದ್ದಂತೆ ಸಣ್ಣದಾಗಿ ಟಾರ್ಚರ್ ನೀಡಿದ ಅನುಭವವಾಗುತ್ತದೆ. ಆದರೆ ರಮೇಶ್ ತಮ್ಮ ನಿರ್ದೇಶನದಲ್ಲಿ ಎಲ್ಲೂ ಎಡವಿಲ್ಲ. ಎಲ್ಲ ವಿಭಾಗದಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ.
ಇಲ್ಲಿ ರಮೇಶ್ ಪೊಲೀಸ್. ಶೌರ್ಯವಂತ. ಆದರೆ ಬುದ್ದಿ ಕಡಿಮೆ. ಯಡವಟ್ಟುಗಳನ್ನು ಮಾಡಿಕೊಂಡು ಪೊಲೀಸ್ ಇಲಾಖೆಯಿಂದ ಹಿಂಬಡ್ತಿ ಪಡೆಯುತ್ತಾರೆ. ಇದೇ ವೇಳೆ ವೈಯ್ಯಾರೆ ಶರ್ಮಿಳಾ ಮಾಂಡ್ರೆಯ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ. ನಂತರ ಪೊಲೀಸ್ ಇಲಾಖೆಯ ಆದೇಶದ ಮೇರೆಗೆ ವಿದ್ಯಾರ್ಥಿ ಸೋಗಿನಲ್ಲಿ ಕಾಲೇಜಿಗೆ ಹೋಗಿ ಭಯೋತ್ಪಾದಕರನ್ನು ಕಂಡುಹಿಡಿಯುತ್ತಾರೆ. ಚಿತ್ರದಲ್ಲಿ ರಮೇಶ್ ಅಭಿನಯ ಅದ್ಭುತವಾಗಿ ಮೂಡಿಬಂದಿದೆ. ಈ ಹಿಂದೆ ತ್ಯಾಗರಾಜನಾಗಿ ಕಂಗೊಳಿಸುತ್ತಿದ್ದ ರಮೇಶ್ ಈ ಬಾರಿ ಪ್ರೇಕ್ಷಕರು ಹುಬ್ಬೇರಿಸುವ ರೀತಿಯಲ್ಲಿ ಫೈಟ್ ಮಾಡಿದ್ದಾರೆ. ಚಿತ್ರ ಎಲ್ಲೂ ಬೋರ್ ಹೊಡೆಸುವುದಿಲ್ಲ. ಇಲ್ಲಿ ಎಲ್ಲವನ್ನು ಮಿತವಾಗಿ ಬಳಸಿದ್ದಾರೆ. ಅನಾವಶ್ಯಕವಾಗಿ ಹಾಡುಗಳು, ದೃಶ್ಯಗಳು ಬರುವುದಿಲ್ಲ. ಚಿತ್ರದಲ್ಲಿ ಎಲ್ಲೂ ಬೋರ್ ಹೊಡೆಸುವ ಡೈಲಾಗ್‌ಗಳಿಲ್ಲ. ಎರಡು ಹಾಡುಗಳಲ್ಲಿ ಮಳೆಯ ಹಾಡು ಇಷ್ಟವಾಗುತ್ತದೆ.
ಚಿತ್ರದ ಇತರ ಕಲಾವಿದರಾದ ದತ್ತಣ್ಣ, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ದೇವದಾಸ್ ಕಾಪಿಕಾಡ್ ಅಭಿನಯ ಚೆನ್ನಾಗಿ ಮೂಡಿಬಂದಿದೆ. ಅದರಲ್ಲೂ ಅಜ್ಜಿ ಪಾತ್ರದಲ್ಲಿ ನಟಿಸಿದ ಹಿರಿಯ ನಟ ಉಮೇಶ್ ಅಭಿನಯವಂತು ಸೂಪರ್. ರಿಕ್ಕಿ ಕೇಜ್ ಅವರ ಸಂಗೀತ ಮಧುರವಾಗಿದೆ.
ನೊಂದ ಮನಸ್ಸು ಒಂದಿಷ್ಟು ರಿಲ್ಯಾಕ್ಸ್ ಬಯಸಿದರೆ ವೆಂಕಟ ಇನ್ ಸಂಕಟಕ್ಕೆ ಹೋಗಿ. ಕೊಟ್ಟ ದುಡ್ಡಿಗೆ ಖಂಡಿತ ಮೋಸವಾಗುವುದಿಲ್ಲ. ಅಂತು ಈ ವರ್ಷದ ಮೊದಲಿಗೆ ಒಂದು ಉತ್ತಮ ಹಾಸ್ಯ ಚಿತ್ರವನ್ನು ಕೊಟ್ಟ ರಮೇಶ್‌ಗೆ ಥ್ಯಾಂಕ್ಸ್.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡ ಚಿತ್ರರಂಗದ ಕಾಮಿಡಿ ಕಿಂಗ್, ಖಳನಟ ದಿ. ದಿನೇಶ್ ಪುತ್ರ ಗಿರಿ ದಿನೇಶ್ ಸದ್ಯಕ್ಕೆ ಬಿಜಿಯಾಗಿದ್ದಾರೆ. ಇತ್ತೀಚೆಗೆ ತೆರೆಕಂಡ 'ನವಗ್ರಹ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಇಲ್ಲಿ ಅವರು ತಮ್ಮ |
| |
|
|
|
|
|
|