|
| ನನ್ ಡವ್ ಏರಿಯಾ |
| ಗುರುವಾರ, 4 ಡಿಸೆಂಬರ್ 2008 ( 18:17 IST ) | |
ರೌಡಿಗಳಿಗೆ, ರಾಜಕಾರಣಿಗಳಿಗೆ ಒಂದೊಂದು ಅಡ್ಡೆ, ಏರಿಯಾಗಳಿರುವುದು ಸಾಮಾನ್ಯ. ಆದರೆ ಪ್ರೇಮಿಗಳಿಗೂ ಒಂದು ಏರಿಯಾ ಇದೆ ಎಂಬುದನ್ನು ತೋರಿಸಲು ಹೊರಟಿರುವವರು ನಿರ್ದೇಶಕ ಸೂರ್ಯಕಮಲ್. ಅವರ ಹೊಸ ಚಿತ್ರಕ್ಕೆ 'ಚಾಮರಾಜಪೇಟೆ ನನ್ ಡವ್ ಏರಿಯಾ' ಎಂದು ಹೆಸರಿಟ್ಟಿದ್ದಾರೆ. ಇದರಲ್ಲಿ 'ನನ್ ಡವ್ ಏರಿಯಾ' ಎಂಬುದು ಸಬ್‌ಟೈಟಲ್.
ನಾಯಕ ಬೇರೆ ಊರಿನಿಂದ ಬೆಂಗಳೂರಿಗೆ ಬರುತ್ತಾನೆ. ಇಲ್ಲಿನ ಏರಿಯಾವೊಂದರಲ್ಲಿ ನಾಯಕಿ ಕಾಣುತ್ತಾಳೆ. ಆ ಏರಿಯಾ ಚಾಮರಾಜಪೇಟೆಯಾಗಿರುತ್ತದೆ. ಮುಂದೆ ಇವರಿಬ್ಬರ ನಡುವೆ ನಡೆಯುವ ಘಟನೆಗಳೆ ಚಿತ್ರ ಎಂದು ತಮ್ಮ ಚಿತ್ರದ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು ಸೂರ್ಯ ಕಮಲ್. ಚಿತ್ರದಲ್ಲಿ ಲವ್, ಮದರ್ ಸೆಂಟಿಮೆಂಟ್, ಪಡ್ಡೆ ಹುಡುಗರಿಗೆ ಖುಷಿ ಕೊಡುವಂತಹ ಕೆಲವು ಅಂಶಗಳು ಕೂಡಾ ಇವೆ ಎನ್ನುತ್ತಾರೆ.
ಚಿತ್ರದಲ್ಲಿ ನಂದ ಲವ್ಸ್ ನಂದಿತಾದ ಜಿಂಕೆಮರಿ ನಂದಿತಾ (ಶ್ವೇತಾ) ನಾಯಕಿಯಾಗಿ ನಟಿಸುತ್ತಿದ್ದು, ಜಗದೀಶ್ ಎಂಬ ಹೊಸ ಹುಡುಗ ಚಿತ್ರದ ನಾಯಕ. ನನ್ನದು ಚಿತ್ರದಲ್ಲಿ ಗಂಭೀರ ಪಾತ್ರ. ಕಾಲೇಜು ಹುಡುಗಿಯ ಪಾತ್ರ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿದರು ನಾಯಕಿ ನಂದಿತಾ.
ಚಿತ್ರಕ್ಕೆ ಅನೂಫ್ ಸೀಳೀನ್ ಸಂಗೀತ ನೀಡಿದ್ದು, ಕವಿರಾಜ್, ಸುದರ್ಶನ್, ಜಯಂತ್ ಕಾಯ್ಕಿಣಿ ಗೀತರಚನೆ ಮಾಡಿದ್ದಾರೆ. ಮಾರ್ಚ್ ವೇಳೆಗೆ ಚಿತ್ರ ಬಿಡುಗಡೆಯಾಗಲಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|