ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ಚುಮುಚುಮು ಚಳಿಯ ಅನುಭವ ನೀಡುವ ಗಂಗಾಕಾವೇರಿ
ಬೆಂಗಳೂರು, ಸೋಮವಾರ, 1 ಡಿಸೆಂಬರ್ 2008   ( 12:58 IST )
ಚಿತ್ರ: ಗಂಗಾ ಕಾವೇರಿ
ನಿರ್ದೇಶಕ: ವಿಷ್ಣುಕಾಂತ್
ತಾರಾಗಣ: ಅಕ್ಷಯ್, ಮಾಹಿ, ಮಲ್ಲಿಕಾ ಕಪೂರ್, ಅನಂತ್ ನಾಗ್, ಚಿತ್ರಾ ಶೆಣೈ

ಆತ ಛಾಯಾಗ್ರಾಹಕ. ತಾನು ಒಮ್ಮೆ ಕಂದಕದಲ್ಲಿ ಬಿದ್ದಿದ್ದಾಗ ರಕ್ಷಿಸಿದ ಗಂಗಾಳನ್ನು ಮೆಚ್ಚಿ ಮದುವೆಯಾಗುತ್ತೇನೆ ಎಂದು ಆಣೆ ಮಾಡಿ ಬಂದಿರುತ್ತಾನೆ. ಇತ್ತ ಊರಿನಲ್ಲಿ ಕಾವೇರಿ ಎಂಬ ಹುಡುಗಿಯೊಂದಿಗೆ ಮದುವೆ ನಿಶ್ಚಯ ಕೂಡಾ ಆಗಿರುತ್ತದೆ. ಫೋಟೋಗ್ರಫಿ ಮಾಡಿಕೊಂಡು ಬರುತ್ತೇನೆ ಎಂದು ಹಿಮಾಲಯಕ್ಕೆ ಹೋದ ಅರ್ಜುನನ ಪತ್ತೆಯೇ ಇರುವುದಿಲ್ಲ. ಈಚೆ ಮದುವೆ ಬೇರೆ ನಿಶ್ಚಯವಾಗಿದೆ, ಕಾವೇರಿಗೂ ಚಿಂತೆ ಆರಂಭವಾಗುತ್ತದೆ.

ಇಷ್ಟು ಕಥೆ ಹೇಳಿದ ಮೇಲೆ ಇದೊಂದು ತ್ರಿಕೋನ ಪ್ರೇಮಕಥೆ ಎಂದು ಕಣ್ಣುಮುಚ್ಚಿ ಹೇಳಬಹುದು. ನಿರ್ದೇಶಕ ವಿಷ್ಣುಕಾಂತ್ ಸ್ವಲ್ಪ ಹೊಸತನ ಪ್ರದರ್ಶಿಸಲು ಪ್ರಯತ್ನಿಸಿದ್ದಾರೆ. ನಿಜ ಹೇಳಬೇಕೆಂದರೆ ಇದೊಂದು ಛಾಯಾಗ್ರಾಹಕರ ಹಾಗೂ ಸಂಗೀತ ನಿರ್ದೇಶಕರ ಚಿತ್ರ.

ಕಲಾವಿದರಿಗಿಂತ ಹೆಚ್ಚಾಗಿ ಛಾಯಾಗ್ರಾಹಕ ವೇಣು ತಮ್ಮ ಪ್ರತಿಭೆಯನ್ನು ಇಲ್ಲಿ ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಚಿತ್ರದ ಪ್ರತಿ ದೃಶ್ಯಗಳು ಮನಮೋಹಕ. ಚಿತ್ರ ನೋಡುತ್ತಿದ್ದಂತೆ ಚುಮು ಚುಮು ಚಳಿಯ ಅನುಭವ ನಿಮಗಾದರೆ ಅದು ಛಾಯಾಗ್ರಾಹಕ ವೇಣು ಅವರ ಕೈ ಚಳಕ. ನಿರ್ದೇಶಕರು ಹಿಮಾಲಯದಂತಹ ಪ್ರದೇಶದಲ್ಲೂ ಯಶಸ್ವಿ ಚಿತ್ರೀಕರಣ ನಡೆಸಿ ಪ್ರೇಕ್ಷಕರ ಕಣ್ಣಿಗೆ ಹಬ್ಬದೂಟ ಬಡಿಸಿದ್ದಾರೆ.

ಇಲ್ಲಿ ಮಧುರ ಸಂಗೀತ ಸಂಯೋಜಿಸಿದ ಕಲ್ಯಾಣ್ ಪಾತ್ರ ಕೂಡಾ ಮಹತ್ವದ್ದು. ಇಂಪಾದ ಹಾಡುಗಳನ್ನು ನೀಡಿದ್ದಾರೆ. ಅಂಬರದಂಬರದಾಚೆ... ಹಾಡು ವೇಣು ಕ್ಯಾಮರಾದಲ್ಲಿ ಸೆರೆ ಸಿಕ್ಕಿ ನವಿರಾಗಿ ಮೂಡಿಬಂದಿದೆ.

ನಾಯಕ ಅಕ್ಷಯ್ ತಮ್ಮ ಮೊದಲ ಪ್ರಯತ್ನದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ಅಭಿನಯಕ್ಕಿಂತ ಕುಣಿತಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ನಾಯಕಿಯರಾದ ಮಾಹಿ ಹಾಗೂ ಮಲ್ಲಿಕಾ ಕಪೂರ್ ದಂತದ ಗೊಂಬೆಗಳಂತೆ ಮುದ್ದಾಗಿ ಬಂದು ಹೋಗುತ್ತಾರೆ. ಉಳಿದಂತೆ ಅನಂತ್ ನಾಗ್, ರಮೇಶ್ ಭಟ್, ಚಿತ್ರಾ ಶೆಣೈ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಸಣ್ಣಪುಟ್ಟ ಕೊರತೆಗಳನ್ನು ಬಿಟ್ಟರೆ ಗಂಗಾ ಕಾವೇರಿ ಉತ್ತಮ ಚಿತ್ರ. ತ್ರಿಕೋನ ಪ್ರೇಮಕಥೆಯ ಅನೇಕ ಚಿತ್ರಗಳು ಬಂದಿದ್ದರೂ ಇದು ಅವೆಲ್ಲಕ್ಕಿಂತ ಭಿನ್ನವಾಗಿದೆ ಎಂದರೆ ಆ ನಿರ್ದೇಶಕರು ಬೇಸರ ಮಾಡಿಕೊಳ್ಳಬಾರದು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಗುಬ್ಬಚ್ಚಿ ಗೂಡಲ್ಲಿ
ಸಮಾಗಮದಲ್ಲಿ ನ್ಯೂಟನ್ ಥಿಯರಿ
ಮಹರ್ಷಿಯ ಕಥೆ-ವ್ಯಥೆ
ಮನ ಮುಟ್ಟುವ ಸ್ಲಂ ಬಾಲ
ಕುತೂಹಲ ಕೆರಳಿಸದ ಸೈಕೋ
ಡೈಲಾಗ್‌ನಲ್ಲೇ ಮುಳುಗಿ ಹೋಗುವ ಸಂಗಮ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...