ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಮಾದೇಶ
ಬೆಂಗಳೂರು, ಶನಿವಾರ, 30 ಆಗಸ್ಟ್ 2008   ( 14:59 IST )
ಚಿತ್ರ: ಮಾದೇಶ
ನಿರ್ದೇಶನ: ರವಿ ಶ್ರೀವತ್ಸ
ತಾರಾಗಣ: ಶಿವರಾಜ್ ಕುಮಾರ್, ಸೋನು ಭಾಟಿಯಾ, ರಮೇಶ್ ಪಂಡಿತ್, ರವಿಕಾಳೆ

ಅಲ್ಲಿ ರಕ್ತದೋಕುಳಿ ನಡೆಯುತ್ತದೆ. ಲಾಂಗು-ಮಚ್ಚುಗಳು ತಮ್ಮ ಚಮಕ್ ಏನೆಂದು ತೋರಿಸುತ್ತವೆ. ಒಬ್ಬನನ್ನು ಮತ್ತೊಬ್ಬ ಕೊಲ್ಲುತ್ತಾನೆ. ಆತನನ್ನು ಇನ್ನೊಬ್ಬ ಕೊಲ್ಲುತ್ತಾನೆ. ಹೌದು ಮಾದೇಶ ಚಿತ್ರದುದ್ದಕ್ಕೂ ಇಂತಹ ಮಾಸ್ ದೃಶ್ಯಗಳು ಮಾಸ್ ಪ್ರಿಯರ ಮೈ ನವಿರೇಳಿಸುತ್ತದೆ. ನಿರ್ದೇಶಕರು ಚಿತ್ರವನ್ನು ಅದ್ದೂರಿಯಾಗಿ ತರಬೇಕೆಂದು ಪಟ್ಟ ಶ್ರಮದ ನೆರಳು ಚಿತ್ರದಲ್ಲಿ ಕಾಣುತ್ತದೆ.

ಚಿತ್ರದಲ್ಲಿ ತಂತ್ರಜ್ಞಾನವನ್ನು ನಿರ್ದೇಶಕರು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಪೆಟ್ರೋಲ್ ಬಂಕ್‌ನಲ್ಲಿ ಡಾನ್‌ಗಳು ಅಟೆಕ್ ಮಾಡುವ ದೃಶ್ಯವನ್ನು ನೋಡಿದಾಗ ಕ್ಯಾಮರಾಮ್ಯಾನ್ ಅವರ ಅದ್ಬುತ ಕೈ ಚಳಕದ ಅರಿವಾಗುತ್ತದೆ. ಚಿತ್ರ ನೋಡುತ್ತಿದ್ದಂತೆ ಇದ್ಯಾವುದೋ ತಮಿಳು ಅಥವಾ ತೆಲುಗು ಸಿನಿಮಾವೇ ಎಂಬ ಭಾಸವಾಗುತ್ತದೆ. ಅಷ್ಟು ಅಚ್ಚುಕಟ್ಟಾಗಿ ಮಾಡಿದ್ದಾರೆ. ಆದರೆ ಚಿತ್ರದುದ್ದಕ್ಕೂ ಆ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ರವಿ ಶ್ರೀವತ್ಸ ವಿಫಲರಾಗಿದ್ದಾರೆ.

ಎಲ್ಲ ಚಿತ್ರಗಳಂತೆ ಇಲ್ಲೂ ಕೂಡಾ ನಾಯಕ ತಾನು ಬೆಂಗಳೂರಿನ ಅಂಡರ್ವಲ್ಡ್ ಡಾನ್ ಆಗಬೇಕೆಂದು ಬಯಸುತ್ತಾನೆ. ಅದಕ್ಕಾಗಿ ಹಳ್ಳಿಯೊಂದರಲ್ಲಿ ಮಾವುತನ ಮಗನಾಗಿದ್ದ ಮಾದೇಶ (ಶಿವರಾಜ್ ಕುಮಾರ್) ಬೆಂಗಳೂರಿಗೆ ಬರುತ್ತಾನೆ. ಕೊಲೆ ಮಾಡಿ 14 ವರ್ಷ ಜೈಲುವಾಸ ಅನುಭವಿಸಿ ಹೊರಗೆ ಬಂದು ಇಡೀ ಭೂಗತ ಲೋಕವನ್ನು ಆಳುತ್ತಾನೆ. ಇದು ಜೋಗಿ ಚಿತ್ರದ ಶೈಲಿಯೇ ಎಂದು ಸಂಶಯ ಬರುವುದು ಸಹಜ. ಆದರೆ ಇಲ್ಲಿ ನಿರ್ದೇಶಕರು ಅದನ್ನು ಭಿನ್ನವಾಗಿ ತೋರಿಸಲು ಪ್ರಯತ್ನಿಸಿದ್ದಾರೆ. ಇಲ್ಲಿಯೂ ಕೂಡಾ ಮಾಸ್ ಸಿನಿಮಾದಲ್ಲಿರುವ ತಾಯಿ ಸೆಂಟಿಮೆಂಟ್, ಪ್ರೀತಿ, ಐಟಂ ಹಾಡುಗಳು ಇವೆ.

ಚಿತ್ರದುದ್ದಕ್ಕೂ ಕತ್ತರಿಸಿ ಬಿಸಾಕುವ ದೃಶ್ಯಗಳಿಗೆ ಬರವಿಲ್ಲ. ಆದರೆ ಹಾಡುಗಳಿಗೆ ಮಾತ್ರ ಧಮ್ ಇಲ್ಲ. ಹಾಡುಗಳು ಇರಬೇಕಲ್ಲ ಎಂಬ ಕಾರಣಕ್ಕೆ ತುರುಕಿಸಿದ್ದಾರೆ. ಆದರೆ ವಿದೇಶದಲ್ಲಿ ಚಿತ್ರೀಕರಣ ಮಾಡಿದ ರವಿ ಶ್ರೀ ವತ್ಸ ಬರೀ ಹಾಡನ್ನು ಮಾತ್ರ ಶೂಟಿಂಗ್ ಮಾಡಿಲ್ಲ. ಅಲ್ಲಿಯ ಕಾರು, ಪ್ಲ್ಯಾಟ್, ಬಂಗಲೆ ಎಲ್ಲ ಬಳಸಿಕೊಂಡಿರುವುದನ್ನು ಮೆಚ್ಚಬೇಕು.

ಶಿವಣ್ಣನ ಅಭಿನಯದ ಬಗ್ಗೆ ಎರಡು ಮಾತಿಲ್ಲ. ನಾಯಕಿ ಸೋನು ಭಾಟಿಯಾ ಇನ್ನೂ ಪಳಗಬೇಕು. ರವಿಕಾಳೆಯ ಅಭಿನಯವನ್ನು ನಿರ್ದೇಶಕರು ಪೂರ್ಣಪ್ರಮಾಣದಲ್ಲಿ ಬಳಿಸಿಕೊಂಡಿದ್ದಾರೆ. ವಿಲನ್ ಪಾತ್ರದಲ್ಲಿ ಮಿಂಚಿದ ರಮೇಶ್ ಪಂಡಿತ್ ತಮ್ಮ ಅಭಿನಯ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ಚಿತ್ರ ಕ್ಲಾಸ್ ಪ್ರೇಕ್ಷಕರಿಗೆ ಅಷ್ಟೊಂದು ಇಷ್ಟವಾಗದಿದ್ದರೂ, ಮಾಸ್ ಪ್ರೇಕ್ಷಕರನ್ನು ಹುಚ್ಚೆಬ್ಬಿಸುವುದಂತೂ ನಿಜ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಲವಲವಿಕೆಯ ಕೋಡಗನ ಕೋಳಿ ನುಂಗಿತ್ತಾ
ಅರ್ಜುನಂದು ಸಾಹಸ ಏಕೋ ಓವರ್ ಆಯಿತು?!
ಅಯೋಮಯ ಬೊಂಬಾಟ್
ಚಿತ್ರ: ನಂದಾದೀಪ
ಪ್ರೀತಿಯ ಸುತ್ತ ಸುತ್ತುವ ತಾಜ್ಮಹಲ್
ಜಿಂದಗಿ'.. ಇದು ಜೀವನ ಪಲ್ಲಟ
ಗ್ರಹ ಗತಿ
ದೈನಿಕ - ಪ್ರೀತಿಸಿದವರ ಮೇಲೆ ಪ್ರೋತ್ಸಾಹ ಮತ್ತು ಗಮನ ನೀಡಬೇಕಾದ ಅವಶ್ಯಕತೆ ಇದೆ.ಸರಿಯಾದ ವ್ಯಕ್ತಿಗಳು ನಿಮ್ಮ ಹಾದಿಗೆ ಬರುವುದರಿಂದ ಅಪೂರ್ಣ ಯೋಜನೆಯೊಂದರಲ್ಲಿ ಪ್ರಗತಿ ಸಾಧಿಸುತ್ತೀರಿ. ನೀವು ಹಿಂದೆ ಕಾರ್ಯಕ್ಷಮತೆಯಿಂದ ನಿರ್ವಹಿಸಿದ್ದ ಕೆಲಸಗಳು ಒಳ್ಳೆಯ ಫಲ ನೀಡಲಿವೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಬಸ್ ಪ್ರಯಾಣ ದರ ಅನಿವಾರ್ಯ: ಅಶೋಕ್
ಡೀಸೆಲ್ ಬೆಲೆ ಏರಿಕೆ, ಹಣದುಬ್ಬರ, ನೌಕರರ ವೇತನ ಪರಿಷ್ಕರಣೆಗಳಿಂದ....
ಬಾರ್ ಕೌನ್ಸಿಲ್‌ಗೆ ಹಿರೇಮಠ ರಾಜೀನಾಮೆ
ಶಂಕಿತ ಉಗ್ರರ ಜಾಮೀನು ಅರ್ಜಿ ತಿರಸ್ಕ್ಕತ
ಮನರಂಜನೆ
ಚಿತ್ರ ಸುದ್ದಿ - ಶಾಸಕರು ಸಚಿವರುಗಳು ಅಮೆರಿಕಾಕ್ಕೆ ಅಕ್ಕಾ ಸಮ್ಮೇಳನಕ್ಕಾಗಿ ಹಾರಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಕನ್ನಡ ಚಿತ್ರರಂಗದಿಂದ ಒಂದಷ್ಟು ಮಂದಿ ಗುರುವಾರ ರಾತ್ರಿ ಅಮೆರಿಕಾಕ್ಕೆ ಹೋಗಿದ್ದಾರೆ. ಅಕ್ಕಾ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಲು ಗುರುಕಿರಣ್ ಹತ್ತು
ಮುಂದೆ ಓದಿ|ಮತ್ತಷ್ಟು...