ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ಲವಲವಿಕೆಯ ಕೋಡಗನ ಕೋಳಿ ನುಂಗಿತ್ತಾ
ಬೆಂಗಳೂರು, ಸೋಮವಾರ, 25 ಆಗಸ್ಟ್ 2008   ( 13:47 IST )
ಚಿತ್ರ: ಕೋಡಗನ ಕೋಳಿ ನುಂಗಿತ್ತಾ
ತಾರಾಗಣ: ಜಗ್ಗೇಶ್, ಪೂಜಾಗಾಂಧಿ, ರಂಗಾಯಣ ರಘು
ನಿರ್ದೇಶನ: ಪಿ.ವಾಸು

ಜಗ್ಗೇಶ್ ಮತ್ತೊಮ್ಮೆ ಮಿಂಚಿದ್ದಾರೆ. ಅವರ ಅಭಿನಯದ 'ಕೋಡಗನ ಕೋಳಿ ನುಂಗಿತ್ತಾ' ಚಿತ್ರ ಕುಟುಂಬ ಸಮೇತ ನೋಡುವ ಒಂದು ಹಾಸ್ಯ ಪ್ರಧಾನವಾದ ಚಿತ್ರ. ಇಲ್ಲಿ ಜಗ್ಗೇಶ್ ಜೊತೆ ನಗುವಿನ ಹೊನಲು ಹರಿಸಲು ಶರಣ್ ಕೂಡಾ ಜತೆಯಾಗಿದ್ದಾರೆ. ಉತ್ತಮ ನಿರೂಪಣೆಯೊಂದಿಗೆ ನಿರ್ದೇಶಕರು ಚಿತ್ರಕಥೆಯ ಮೇಲೆ ಹಿಡಿತ ಸಾಧಿಸಿದ್ದಾರೆ. ಚಿತ್ರದ ಮೊದಲಾರ್ಧ ಲವಲವಿಕೆಯಿಂದ ಕೂಡಿದರೆ ಎರಡನೇ ಭಾಗದಲ್ಲಿ ಕೆಲವು ಅನಗತ್ಯ ದೃಶ್ಯ, ಸಂಭಾಷಣೆಗಳು ಬೋರ್ ಹೊಡೆಸುತ್ತವೆ. ಕೆಲವು ದೃಶ್ಯಗಳಿಗೆ ಕತ್ತರಿ ಹಾಕುತ್ತಿದ್ದರೆ ಚಿತ್ರ ಮತ್ತಷ್ಟು ಚೆನ್ನಾಗಿ ಮೂಡಿ ಬರುತಿತ್ತು.

ತನ್ನ ಕನಸಿನ ಕನ್ಯೆಗಾಗಿ ಹುಡುಕಿ ಹುಡುಕಿ ಬೇಸತ್ತಿರುವ ಬ್ಯಾಚುಲರ್ ಬಾಲು ಆಲಿಯಾಸ್ ಬಾಲುಗೆ (ಜಗ್ಗೇಶ್) ಕೊನೆಗೆ ಲಕ್ಷ್ಮೀ (ಪೂಜಾಗಾಂಧಿ) ಸಿಗುತ್ತಾಳೆ. ಅನೇಕ ಏರುಪೇರುಗಳ ನಂತರ ಈಕೆ ಕೂಡಾ ಬಾಲುವನ್ನು ಇಷ್ಟಪಡುತ್ತಾಳೆ. ಆದರೆ ಇವರಿಬ್ಬರ ಪ್ರೇಮದ ಮಧ್ಯೆ ಅಡ್ಡ ಗೋಡೆಯಾಗಿ ಲಕ್ಷ್ಮೀಯ ಮಾವ ಮೇಲುಕೋಟೆ (ರಂಗಾಯಣ ರಘು) ಬರುತ್ತಾನೆ. ಈತ ತನ್ನ ಮಗ ಕೆಂಪುಕೋಟೆಗೆ ಲಕ್ಷ್ಮಿಯನ್ನು ಮದುವೆ ಮಾಡಿಸಿ ಆಕೆಯ ಹೆಸರಿನಲ್ಲಿರುವ ಅಪಾರ ಪ್ರಮಾಣದ ಆಸ್ತಿಯನ್ನು ಕೊಳ್ಳೆ ಹೊಡೆಯಬೇಕು ಎಂದು ಯೋಚಿಸಿರುತ್ತಾನೆ. ಈ ಮದುವೆ ಪ್ರಸ್ತಾವನೆಗೆ ಲಕ್ಷ್ಮೀಯ ಅಜ್ಜ ಕೂಡಾ ಒಪ್ಪಿಗೆ ನೀಡುವುದನ್ನು ಕಂಡಾಗ ಲಕ್ಷ್ಮಿ ಬಾಲುನೊಂದಿಗೆ ಪರಾರಿಯಾಗುತ್ತಾಳೆ. ಇಲ್ಲಿನ ದೃಶ್ಯ ಹೆಚ್ಚು ಕುತೂಹಲಕಾರಿಯಾಗಿ ಮೂಡಿಬಂದಿದೆ.

ಜಗ್ಗೇಶ್ ಅಭಿನಯದಲ್ಲಿ ಎರಡು ಮಾತಿಲ್ಲ. ಅವರ ಅದ್ಬುತ ಮ್ಯಾನರಿಸಂ ಅದೇ ಡಬ್ಬಲ್ ಮೀನಿಂಗ್ ಇರುವ ಡೈಲಾಗ್ ಶೈಲಿಯಿಂದ ಪ್ರೇಕ್ಷಕರನ್ನು ರಂಜಿಸುತ್ತಾರೆ. ಇದಕ್ಕೆ ಸಾಥ್ ನೀಡಲು ಶರಣ್ರ ಕಿಲಕಿಲ ನಗುವಿದೆ. ಪೂಜಾ ಗಾಂಧಿಯ ಅಭಿನಯ ಚೆನ್ನಾಗಿ ಮೂಡಿಬಂದಿದ್ದರೂ, ಇನ್ನು ಸುಧಾರಿಸಬೇಕು. ರಂಗಾಯಣ ರಘು ತಮ್ಮ ಎಂದಿನ ಅಭಿನಯ ನೀಡಿದ್ದಾರೆ. ದಾಸರ ಸೀನು ಅವರ ಛಾಯಾಗ್ರಹಣ ಓಕೆ. ಸಾಧುಕೋಕಿಲ ಸಂಗೀತ ಪರ್ವಾಗಿಲ್ಲ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಅರ್ಜುನಂದು ಸಾಹಸ ಏಕೋ ಓವರ್ ಆಯಿತು?!
ಅಯೋಮಯ ಬೊಂಬಾಟ್
ಚಿತ್ರ: ನಂದಾದೀಪ
ಪ್ರೀತಿಯ ಸುತ್ತ ಸುತ್ತುವ ತಾಜ್ಮಹಲ್
ಜಿಂದಗಿ'.. ಇದು ಜೀವನ ಪಲ್ಲಟ
ರವಿಚಂದ್ರನ್- ಜಗ್ಗೇಶ್ ಜೋಡಿ ಮತ್ತೆ ವಿಫಲ
ಗ್ರಹ ಗತಿ
ದೈನಿಕ - ಅನುಭವಿಗಳ ಸಲಹೆ ಮೇರೆಗೆ ಉತ್ತಮ ಪ್ರಯೋಜನ ಪಡೆಯುತ್ತೀರಿ. ಮುದ್ರಣ ಮತ್ತು ವ್ಯಾಪಾರಿಗಳಿಗೆ ಹೆಚ್ಚಿನ ಒತ್ತಡ. ಕಾರ್ಯಭಾರ ಹೆಚ್ಚಾಗುತ್ತದೆ. ಉದ್ಯೋಗಿಗಳು ಬಡ್ತಿ , ಇನ್ನಿತರ ಪ್ರಯೋಜನಗಳನ್ನು ಪಡೆಯುತ್ತಾರೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಿದ್ದು ಬಿಜೆಪಿಗೆ ಬಂದರೆ ಸ್ವಾಗತ: ಜಿಟಿಡಿ
ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತೀಯ ಜನತಾ ಪಕ್ಷಕ್ಕೆ ಬರುವುದಾದರೆ ಅವರನ್ನು ...
ಗಣಿ ಲಂಚ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹ
ಪಕ್ಷೇತರರ ಸಚಿವ ಸ್ಥಾನಕ್ಕೆ ಸಂಚಕಾರ?
ಮನರಂಜನೆ
ಚಿತ್ರ ಸುದ್ದಿ - ಉಪೇಂದ್ರರ ಅಭಿನಯವನ್ನು ತಮಿಳರು ಮೆಚ್ಚಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಸತ್ಯಂ' ಚಿತ್ರದಲ್ಲಿ ಉಪೇಂದ್ರ ಅಭಿನಯಿಸಿದ್ದರು. ಚಿತ್ರದಲ್ಲಿ ಉಪ್ಪಿ ಮಾಣಿಕವೇಲ್ ಎಂಬ ಪಾತ್ರ ಮಾಡಿದ್ದಾರೆ. ಈ ಚಿತ್ರ ತೆಲುಗಿನಲ್ಲಿ 'ಸೆಲ್ಯೂಟ್' ಎಂಬ ಹೆಸರಿನಲ್ಲಿ ಹೊರ ಬಂದಿದೆ.
ಮುಂದೆ ಓದಿ|ಮತ್ತಷ್ಟು...