|
| ಬಂಧು-ಬಳಗ ಕಣ್ಣೀರು ಸುರಿಸುವ ಕಥೆಯಲ್ಲ |
| ಬೆಂಗಳೂರು, ಸೋಮವಾರ, 9 ಜೂನ್ 2008 ( 15:29 IST ) | |
ಚಿತ್ರದ ಟೈಟಲ್ ಕೇಳಿದರೆ ಇದೊಂದು ಸೆಂಟಿಮೆಂಟ್ ಚಿತ್ರ ಎಂದು ಭಾಸವಾಗುತ್ತದೆ. ಆದರೆ ನಿರ್ದೇಶಕರು ಇಲ್ಲಿ ಪ್ರೇಕ್ಷಕರಿಂದ ಕಣ್ಣೀರು ಸುರಿಸುವ ಪ್ರಯತ್ನ ಮಾಡದೆ ಒಂದು ನಯವಾದ ಕಥಾಹಂದರವಿರುವ ಚಿತ್ರವನ್ನು ನೀಡಿದ್ದಾರೆ. ಇದು ಅಣ್ಣ-ತಂಗಿ ಕಥೆ ಎನ್ನುವುದಕ್ಕಿಂತ ಮುಖ್ಯವಾಗಿ ಒಂದು ಕುಟುಂಬದೊಳಗಿನ ಕಥೆ ಎನ್ನಬಹುದು.
ಇಲ್ಲಿ ಶಿವರಾಜ್ ಕುಮಾರ್ ಗಾಂಧಿ ತತ್ವವನ್ನು ಪಾಲಿಸಿದ್ದಾರೆ. ತನ್ನ ಕೋಟ್ಯಾಂತರ ರೂಪಾಯಿಯ ಆಸ್ತಿ ಕೇಳಿ ಬರುವ ಅಣ್ಣಂದಿರಿಗೆ ಹಾಗೂ ಅತ್ತಿಗೆಯರಿಗೆ ಆಸ್ತಿ ಬರೆದು ಕೊಡಲು ಒಪ್ಪುತ್ತಾರೆ. ಆದರೆ ಅದಕ್ಕಿಂತ ಮುಂಚೆ ತನ್ನ ತಂಗಿಯ ಮದುವೆ ನಡೆಸಿ ಕೊಡಬೇಕೆಂಬ ಷರತ್ತು ಹಾಕುತ್ತಾರೆ.
ದುರಾಸೆಯಿಂದ ಕೂಡಿದ ಅಣ್ಣಂದಿರು ತಂಗಿಯ ಗಂಡನನ್ನೇ ಸಾಯಿಸಲು ಮುಂದಾಗುತ್ತಾರೆ. ಆಗಲು ಶಿವರಾಜ್ ಕುಮಾರ್ ಹಿಂಸೆಗಿಳಿಯುವುದಿಲ್ಲ. ಅಹಿಂಸೆಯ ಮೂಲಕ ತನ್ನ ವೈರಿಗಳ ಮನ ಗೆಲ್ಲಲು ಪ್ರಯತ್ನಿಸುತ್ತಾರೆ. ದ್ವೇಷವನ್ನು ಪ್ರೀತಿಯಿಂದ ಜಯಿಸಬೇಕೆಂದು ಕೊಂಡು ಎಲ್ಲರ ಮನ ಗೆಲ್ಲುತ್ತಾರೆ.
ಇವತ್ತಿನ ಐಟಿ ಬಿಟಿಗಳ ನಡುವೆ ಗ್ರಾಮೀಣ ಸೊಗಡಿನ ಚಿತ್ರಕಥೆ ಚೆನ್ನಾಗಿ ಮೂಡಿಬಂದಿದೆ. ಸೆಂಟಿಮೆಂಟ್ ಅಭಿನಯದಲ್ಲಿ ಶಿವಣ್ಣ ಅದ್ಬುತವಾಗಿ ನಟಿಸಿದ್ದಾರೆ. ನಾಯಕಿ ಪೂನಂ ಕೌರ್ ನಾಯಕಿ ಕಂ ಕಾಮಿಡಿಯನ್ ಆಗಿ ಕಾಣಿಸಿಕೊಂಡು ಮಿಂಚಿದ್ದಾರೆ. ತಂಗಿ ಪಾತ್ರದಲ್ಲಿ ನಟಿಸಿದ ತೇಜಸ್ವಿನಿಗೆ ನಿರ್ದೇಶಕ ನಾಗಣ್ಣ ಹೆಚ್ಚು ಅವಕಾಶ ಕೊಟ್ಟಿಲ್ಲ. ಅವರ ಭಾವನೆಗಳನ್ನು ಕೇವಲ ನಗುವ ಮೂಲಕ ವ್ಯಕ್ತಪಡಿಸುವಂತಿದೆ.
ಚಿತ್ರದಲ್ಲಿ ಶಶಿಕುಮಾರ್, ಧರ್ಮ, ಹೇಮಾ ಚೌಧರಿ ಹಾಗೂ ದೊಡ್ಡಣ್ಣ ಅಭಿನಯ ಚೆನ್ನಾಗಿ ಮೂಡಿಬಂದಿದೆ. ಕ್ಯಾಮರಾ ಕೆಲಸ ಹಾಗೂ ಸಂಗೀತ ಚೆನ್ನಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು.ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡ ಚಿತ್ರರಂಗಕ್ಕೆ ಬರುವ ನಟ-ನಟಿಯರೆಲ್ಲ ಉತ್ತಮ ಅವಕಾಶಗಳ ನಿರೀಕ್ಷೆಯಲ್ಲಿಯೇ ಬರುತ್ತಾರೆ. ಆದರೆ ಬಂದ ನಂತರ ಅವರ ನಿರಾಸೆ ಈಡೇರುವುದು ಸ್ವಲ್ಪ ಕಷ್ಟ. ಚಿತ್ರರಂಗದಲ್ಲಿ ಗಟ್ಟಿ ಬೇರೂರುವ ಆಸೆಯಲ್ಲಿ ಅಕುಲ್ ಎಂಬ ಯುವ ನಟ ಎಂಟ್ರಿ ಕೊಟ್ಟಿದ್ದಾರೆ. |
| |
|
|
|
|
|
|
|