ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ಮೊಗ್ಗಿನ ಜಡೆ
ಬೆಂಗಳೂರು(ಏಜೆನ್ಸಿ), 16 ಏಪ್ರಿಲ್ 2008   ( 15:34 IST )
ವರ್ಷದ ಹಿಂದೆ ಆರಂಭವಾಗಿ ಬಿಡುಗಡೆಯಾಗುತ್ತದೋ ಇಲ್ಲವೋ ಎಂಬ ಅನುಮಾನವಿದ್ದ 'ಮೊಗ್ಗಿನ ಜಡೆ' ಚಿತ್ರ ಈ ವಾರ ತೆರೆ ಕಾಣುತ್ತಿದೆ. ಪಿ.ಆರ್. ರಾಮದಾಸ್ ನಾಯ್ಡು ನಿರ್ದೇಶನದ ಈ ಚಿತ್ರ ಈಗಾಗಲೆ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಆದರೆ ಅಧಿಕೃತವಾಗಿ ಈ ವಾರ ಬಿಡುಗಡೆಯಾಗುತ್ತಿದೆ.

'ಮೊಗ್ಗಿನ ಜಡೆ' ಒಂದು ಕಲಾತ್ಮಕ ಚಿತ್ರ. ನಗರ ಜೀವನದ ಮೇಲೆ ಜಾಗತೀಕರಣ ಬೀರುವ ಪರಿಣಾಮಗಳನ್ನು ಚಿತ್ರ ಒಳಗೊಂಡಿದೆ. 'ಮೊಗ್ಗಿನ ಜಡೆ'ಯಲ್ಲಿ ಮಾಸ್‌‌‌‌‌‌‌ಗೆ ಇಷ್ಟವಾಗುವ ಅಂಶಗಳು ಕೂಡಾ ಇವೆ ಎಂಬುದು ಚಿತ್ರತಂಡದ ಅಭಿಪ್ರಾಯ.

ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಪಾಶ್ಚಾತ್ಯೀಕರಣ ಬೀರುತ್ತಿರುವ ಪ್ರಭಾವ, ಇದರಿಂದ ನಮ್ಮ ಯುವಜನಾಂಗ ಎತ್ತ ಸಾಗುತ್ತಿದೆ ಎಂಬುದು ನಾವು ಗ್ರಹಿಸಿದ ರೀತಿಯಲ್ಲಿ ಇರುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ನಿರ್ದೇಶಕ ನಾಯ್ಡು ಅವರಿಗೆ ಈ ಚಿತ್ರ ಮಾಡಲು ಇರಾನಿಯನ್ ಚಿತ್ರವೊಂದು ಸ್ಪೂರ್ತಿಯಂತೆ. ಇರಾನಿಯನ್ ಚಿತ್ರಗಳು ತಮ್ಮ ಇತಿಮಿತಿಗಳ ಮಧ್ಯೆಯೂ ಸಾಂಸ್ಕ್ಕತಿಕ ಹಿನ್ನೆಲೆಯನ್ನು ಬಿಟ್ಟುಕೊಡದೇ ತಯಾರಾಗುತ್ತವೆ ಎಂದು ಹೇಳುತ್ತಾರೆ ನಿರ್ದೇಶಕ ರಾಮದಾಸ್ ನಾಯ್ಡು.

ಮಚ್ಚು ಲಾಂಗು ಹಾಗೂ ಬರೀ ಪ್ರೇಮಕಥೆಗಳದ್ದೇ ಚಿತ್ರ ಬರುತ್ತಿರುವ ಕಾಲದಲ್ಲಿ ಒಂದು ಸೃಜನಾತ್ಮಕ ಚಿತ್ರ ತಯಾರಿಸಿದ್ದಾರೆ ರಾಮದಾಸ್ ನಾಯ್ಡು. ಇಬ್ಬರು ಪುಟ್ಟ ಮಕ್ಕಳೇ ತಮ್ಮ ಚಿತ್ರದಲ್ಲಿನ ಹೀರೋ ಹೀರೋಯಿನ್ ಎನ್ನುತ್ತಾರೆ ಅವರು.

'ಮೊಗ್ಗಿನ ಜಡೆ' ಈಗಾಗಲೇ ಭಾರತದ ಆರು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಮುಂದಿನ ತಿಂಗಳು ನಡೆಯಲಿರುವ ಕೇರಳ ರಾಜ್ಯ ಸರ್ಕಾರದ ಚಲನಚಿತ್ರೋತ್ಸವದಲ್ಲಿಯೂ ಅದು ಮೂರು ಪ್ರದರ್ಶನ ಕಾಣಲಿದೆ. ಚಿತ್ರಕ್ಕೆ ಎಲ್. ವೈದ್ಯನಾಥನ್ ಸಂಗೀತ ನೀಡಿದ್ದಾರೆ. ಪವಿತ್ರಾ ಲೋಕೇಶ್, ಬೇಬಿ ಶ್ರೀಷಾ ಚಿತ್ರದ ಉಳಿದ ತಾರಾಗಣದಲ್ಲಿರುವ ಪ್ರಮುಖರು
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಿಸ್ಟರ್ ಗರಗಸ
ಥ್ರಿಲ್ಲರ್ ಚಿತ್ರ ಆಕ್ಸಿಡೆಂಟ್
ಸತ್ಯ ಇನ್ ಲವ್ ಶಿವಣ್ಣ ಸಕ್ಸೆಸ್ಸ್
ಗೂಳಿಯಲ್ಲಿ ಮಿಂಚಿದ ಸುದೀಪ್‌
ನಂದ ಲವ್ಸ್ ನಂದಿತಾ ಮತ್ತೊಂದು ರೌಡಿಸಂ ಚಿತ್ರ ಅಷ್ಟೇ!!
ನಂದ ಲವ್ಸ್ ನಂದಿತಾ
ಗ್ರಹ ಗತಿ
ದೈನಿಕ - ಈ ದಿನ ನಿಮಗೆ ಹೆಸರು ಮತ್ತು ಖ್ಯಾತಿ ದೊರೆಯುತ್ತದೆ. ವ್ಯಾಪಾರಕ್ಕೆ ಅನುಕೂಲ ಪರಿಸರವಿರುತ್ತದೆ. ನಿಮ್ಮನ್ನು ಸೋಲಿಸುವ ಯಾವುದೇ ಅವಕಾಶ ಶತ್ರುಗಳಿಗೆ ಇರುವುದಿಲ್ಲ.ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
pti
 
ನಳಿನಿಯನ್ನು ಭೇಟಿ ಮಾಡುತ್ತಿದ್ದ ಪ್ರಿಯಾಂಕ
ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರ ಹತ್ಯೆ ಆರೋಪಿ ನಳಿನಿಯನ್ನು ರಾಜೀವ್ ಗಾಂಧಿ ಪುತ್ರಿ ....
ಮೋದಿ ಭೇಟಿ ಮಾಡಿದ ರಮಣ್ ಸಿಂಗ್
ಬಾಲಕ ಬುಧಿಯಾ ಮಾಜಿ ಕೋಚ್ ಹತ್ಯೆ
ಮನರಂಜನೆ
ಚಿತ್ರ ಸುದ್ದಿ - ಚಿತ್ರರಂಗದಲ್ಲಿ ಉದ್ಯಮದ ಮಂದಿ ನೆನೆಸಿದಂತೆ ಕೆಲವೊಮ್ಮೆ ನಡೆಯುವುದಿಲ್ಲ. ಅವರೊಂದು ನೆನೆದರೆ ಪ್ರೇಕ್ಷಕರು ಇನ್ನೊಂದು ನೆನೆಯುತ್ತಾರೆ.
ಮುಂದೆ ಓದಿ|ಮತ್ತಷ್ಟು...