ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ಮಿಸ್ಟರ್ ಗರಗಸ
ದಿನೇಶ್‌ ಬಾಬು ಚಿತ್ರಗಳ ಬಗ್ಗೆ ಜನರಲ್ಲಿ ಒಂದು ಬಗೆಯ ನೀರೀಕ್ಷೆ ಇದೆ. ಅವರು ಸಾಂಸಾರಿಕ, ಹಾಸ್ಯ, ಥ್ರಿಲ್ಲರ್ ಹೀಗೆ ಯಾವುದೇ ಶೈಲಿಯ ಕಥೆಗಳನ್ನು ಆರಿಸಿಕೊಂಡರೂ ಅದರ ನಿರೂಪಣಾ ಶೈಲಿಯನ್ನು ಅದಕ್ಕೆ ತಕ್ಕಂತೆ ಹೊಂದಿಸಿಕೊಳ್ಳುತ್ತಾರೆ ಎಂಬುದೇ ಈ ನೀರೀಕ್ಷೆಗೆ ಕಾರಣ.

ಅವರ ನಿರ್ದೇಶನದ ಸುಪ್ರಭಾತ, ಇದು ಸಾಧ್ಯ, ಇನ್ಸ್ಪೆಕ್ಟರ್ ವಿಕ್ರಂ, ನಿಶ್ಯಬ್ದ, ಅಮೃತವರ್ಷಿಣಿ, ಹೆಂಡ್ತಿಗ್ಹೇಳ್ಬೇಡಿ, ಮಹೇಶ್ವರ, ಲಾಲಿ ಹೀಗೇ ಒಂದೊಂದೂ ವಿಭಿನ್ನ ಚಿತ್ರಗಳೇ. ಆದರೆ ಮಿಸ್ಟರ್ ಗರಗಸ ಚಿತ್ರದಲ್ಲಿ ಒಟ್ಟಾರೆಯಾಗಿ ಹಾಸ್ಯದ ಹೂರಣವಿದ್ದರೂ ಅದು ದಿನೇಶ್ ಬಾಬುರವರ ಶೈಲಿಯಲ್ಲಿಲ್ಲ ಎಂಬುದು ಗಮನಾರ್ಹ ಸಂಗತಿ.

ಜೀವನದಲ್ಲಿ ತಾಳ್ಮೆ, ಪ್ರೀತಿ ಹಾಗೂ ತ್ಯಾಗಗಳು ನೆಮ್ಮದಿಯ ಜೀವನ ನಡೆಸುವಲ್ಲಿ ನೆರವಾಗುವ ಅಂಶಗಳು ಎಂಬ ಸೂಕ್ಷ್ಮ ಸಂದೇಶವನ್ನು ನಿರ್ದೇಶಕರು ಒಂದು ಉತ್ತಮ ಹಾಸ್ಯ ಚಿತ್ರದ ಮೂಲಕ ಬಿಂಬಿಸಿದ್ದಾರೆ. ಚಿತ್ರವೀಡೀ ನಗೆಗಡಲಲ್ಲಿ ತೇಲಿಸುತ್ತದೆ. ಆದರೆ ಕೆಲವು ಹಾಸ್ಯ ಸಂಭಾಷಣೆಗಳು ಪದೇ ಪದೇ ಮರುಕಳಿಸುವುದರಿಂದ ಬೋರ್ ಆಗುತ್ತದೆ. ಚಿತ್ರದ ಪ್ರಮೋಗಳಲ್ಲಿ ಹೇಳುವಂತೆ ಶಯಾಕೋ ಸಕತ್ ಕುಯ್ತಾನೆ ಕಣಣ್ಣೋ ಎಂದು ಪ್ರೇಕ್ಷಕರು ಆಗಾಗ ಗೊಣಗುವಷ್ಟರ ಮಟ್ಟಿಗೆ ಸಂಭಾಷಣೆ ರೀಪೀಟ್ ಆಗುತ್ತದೆ. ಉಳಿದಂತೆ ಯಾವುದೇ ಆಶ್ಲೀಲತೆ ಇಲ್ಲದ ಒಂದು ಉತ್ತಮ ಹಾಸ್ಯ ಚಿತ್ರ ಮಿಸ್ಟರ್ ಗರಗಸ.

ನಿರ್ಮಾಪಕರಲ್ಲಿ ಕಥೆ ಹೇಳಿ ತನಗೊಂದು ಅವಕಾಶ ಪಡೆಯಲು ಕಥೆಗಾರ ಮುನಿಯಾ (ಕೋಮಲ್) ನಿರ್ಮಾಪಕ ಪಾರ್ಥಸಾರಥಿ (ಅನಂತ್‌‌‌‌ನಾಗ್) ಮನೆಗೆ ಬರುತ್ತಾನೆ. ಪಾರ್ಥಸಾರಥಿಯ ಪತ್ನಿ ಮಾಧವಿ (ಐಶ್ವರ್ಯ) ಹಾಗೂ ಮಗಳು ತೇಜಾರಿಗೆ (ಲಕ್ಷ್ಮೀ ಹೆಗ್ಡೆ) ವೈಮನಸ್ಸಿದ್ದಿದ್ದರಿಂದ ಇವರಿಬ್ಬರೂ ಬೇರೆಯೇ ವಾಸಿಸುತ್ತಿರುತ್ತಾರೆ. ಸದಾ ಮಗಳನ್ನು ಅವಲಂಬಿಸಿರುವ ಪಾರ್ಥ ಸಾರಥಿಯನ್ನು ಅವರ ಪತ್ನಿ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಅಂತೆಯೇ ತೇಜಾ ಕೂಡ ತನ್ನ ಮಲತಾಯಿ ಮಾಧವಿಯನ್ನು ದ್ವೇಷಿಸುತ್ತಾಳೆ. ಕಥೆಗಾರ ಮುನಿಯಾ ಇವರ ಮನೆಗೆ ಬಂದ ನಂತರ ಈ ಮೂವರ ಸಂಬಂಧ ಮತ್ತಷ್ಟು ಹದಗೆಡುತ್ತದೆ. ಆದರೆ ಇವೆಲ್ಲವನ್ನು ಮುನಿಯಾ ಯಾವ ರೀತಿ ಸರಿಪಡಿಸುತ್ತಾನೆ ಎಂಬುದನ್ನು ಇಲ್ಲಿ ಹೇಳಿದರೆ ಚೆನ್ನಾಗಿರುವುದಿಲ್ಲ, ನೀವು ಚಿತ್ರವನ್ನು ನೋಡಲೇಬೇಕು.

ಕೋಮಲ್ ಅಭಿನಯ ಚೆನ್ನಾಗಿ ಮೂಡಿಬಂದಿದೆ. ಅನಂತ್‌‌ನಾಗ್ ಅಭಿನಯದ ಬಗ್ಗೆ ದೂಸ್ರಾ ಮಾತಿಲ್ಲ. ಐಶ್ವರ್ಯ ಹಾಗೂ ಲಕ್ಷ್ಮೀ ಹೆಗ್ಡೆ ನಟನೆ ಚೆನ್ನಾಗಿದೆ. ಆದರೆ ಇಲ್ಲಿ ಕೇವಲ ಅನಂತ್‌ನಾಗ್ ಹಾಗೂ ಕೋಮಲ್‌ಗೆ ಮಾತ್ರ ಪ್ರಾಮುಖ್ಯತೆ ನೀಡಲಾಗಿದೆ. ಟಿ.ಎಸ್.ನಾಗಾಭರಣ ಬಂದು ಹೋಗುತ್ತಾರೆ ಅನ್ನುವುದನ್ನು ಬಿಟ್ಟರೆ ಹೆಚ್ಚೇನೂ ಇಲ್ಲ. ಮಣಿಕಾಂತ್ ಕದ್ರಿ ಅವರ ಸಂಗೀತ ಸಾಧಾರಣವಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಥ್ರಿಲ್ಲರ್ ಚಿತ್ರ ಆಕ್ಸಿಡೆಂಟ್
ಸತ್ಯ ಇನ್ ಲವ್ ಶಿವಣ್ಣ ಸಕ್ಸೆಸ್ಸ್
ಗೂಳಿಯಲ್ಲಿ ಮಿಂಚಿದ ಸುದೀಪ್‌
ನಂದ ಲವ್ಸ್ ನಂದಿತಾ ಮತ್ತೊಂದು ರೌಡಿಸಂ ಚಿತ್ರ ಅಷ್ಟೇ!!
ನಂದ ಲವ್ಸ್ ನಂದಿತಾ
ಸೂತ್ರಧಾರನ ಹಂಗಿಲ್ಲದ ವಾರಸ್‌ದಾರ
ಗ್ರಹ ಗತಿ
ದೈನಿಕ - ಅತ್ಯುತ್ಸಾಹದಿಂದಿರುತ್ತೀರಿ ಮತ್ತು ಪೂರ್ಣ ಸಂತೋಷದಿಂದಿರುತ್ತೀರಿ.ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
pti
 
ಮಹಿಳಾ ಮೀಸಲಾತಿಗೆ ಪ್ರಯತ್ನ: ಸೋನಿಯ
ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿ ಒದಗಿಸಲು ತಮ್ಮ ಪಕ್ಷವು ಗಂಭೀರ ಪ್ರಯತ್ನ ಮಾಡುವುದೆಂದು ....
ಲ್ಯಾಟಿನ್ ಅಮೆರಿಕದ ರಾಷ್ಟ್ರಗಳಿಗೆ ರಾಷ್ಟ್ರಪತಿ ಭೇಟಿ
ಕಾಳಸಂತೆ: 25 ಗೋಡೌನ್‌ಗಳ ಮೇಲೆ ದಾಳಿ
ಮನರಂಜನೆ
ಚಿತ್ರ ಸುದ್ದಿ - ಪ್ರೀತಿ ಮಾಡುವುದೇ ಕಷ್ಟ. ಅಂತಹದರಲ್ಲಿ ಪ್ರೀತಿಸಿದ ವಿಷಯವನ್ನು ಹುಡುಗನಿಗೆ ತಿಳಿಸಲು ಸೂಕ್ತ ಸ್ಥಳದ ಕೊರತೆ ಬೇರೆ.
ಮುಂದೆ ಓದಿ|ಮತ್ತಷ್ಟು...