ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ನಾಟಕದಂತಿರುವ 'ಆಪರೇಷನ್ ಅಂಕುಶ'!
ಬೆಂಗಳೂರು (ಏಜೆನ್ಸಿ), ಮಂಗಳವಾರ, 11 ಡಿಸೆಂಬರ್ 2007   ( 21:23 IST )
ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ: ವಾಸುದೇವ ರಾವ್
ತಾರಾಗಣ: ಜಯಂತಿ, ಪದ್ಮಾವಾಸಂತಿ, ಅಶೋಕ್ ರಾವ್, ಭರತ್ ಭಾಗವತರ್, ಬ್ಯಾಂಕ್ ಜನಾರ್ಧನ್

ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್‌ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ.

ಕ್ಯಾಮರಾವನ್ನು 360 ಡಿಗ್ರಿಯಲ್ಲಿ ಸುತ್ತಾಡಿಸಿ ಚಿತ್ರೀಕರಣ ಮಾಡಬಹುದು ಎಂಬ ಸೂತ್ರವನ್ನು ಪಕ್ಕಕ್ಕಿಟ್ಟು, ಕೇವಲ 180 ಡಿಗ್ರಿ ಕೋನದಲ್ಲಿ ... ಅಂಕುಶ ಚಿತ್ರೀಕರಿಸಲಾಗಿದೆ. ಅದೊಂದೇ ಈ ಚಿತ್ರದ ವಿಶೇಷವಲ್ಲ. ಚಿತ್ರದಲ್ಲ್ಲೊಂದು ಬಂಗಲೆ. ಅಲ್ಲಿ ಪಾತ್ರಗಳು ಪರಿಸ್ಥಿತಿಗೆ ಅನುಗುಣವಾಗಿ ಎಡ ಹಾಗೂ ಬಲಕ್ಕೆ ಚಲಿಸುತ್ತವೆ. ಅವರು ಕ್ಯಾಮರಾದಿಂದ ಪಕ್ಕಕ್ಕೆ ಸರಿಯುವುದಿಲ್ಲ, ಹಾಗೇ ಕ್ಯಾಮರಾ ಸಹಾ ಪಕ್ಕಕ್ಕೆ ಸರಿಯುವುದಿಲ್ಲ. ಈ ರೀತಿ ಈ ಚಿತ್ರದ ನಿರ್ದೇಶಕ ಸಿನೆಮಾ ವ್ಯಾಕರಣವನ್ನು ಮುರಿದಿದ್ದಾರೆ.

ಒಂದೂರಿನಲ್ಲಿ ಸಮಾಜಕ್ಕೆ ಮಾದರಿ ಎನ್ನಬಹುದಾದ ಒಂದು ಕುಟುಂಬವಿರುತ್ತದೆ. ಲಂಡನ್ನಲ್ಲಿ ನೆಲೆಸಿದ್ದ ಶ್ರೀಕಂಠಯ್ಯ (ಅಶೋಕ್‌ ರಾವ್) ಈ ಮನೆಯ ಒಡೆಯ. ಆತ ತನ್ನ ಪತ್ನಿಯೊಂದಿಗೆ ಈ ಊರಿಗೆ ಆಗಮಿಸುತ್ತಾನೆ. ಅಲ್ಲಿ ನೆಲೆಸುವ ಆಶಯ ಅವರದ್ದು. ಒಂದು ದಿನ ಆಘಾತಕಾರಿ ಘಟನೆಯೊಂದು ನಡೆಯುತ್ತದೆ. ಆ ಘಟನೆಯನ್ನು ಕುರಿತದ್ದೇ ಆಪರೇಷನ್ ಅಂಕುಶ.

ಕೊನೆಗೆ ಪ್ರೇಕ್ಷಕರಿಗೆ ಆ ಘಟನೆಯ ಒಗಟು ತಿಳಿಯುತ್ತದೆ. ಈ ಸಿನೆಮಾ ಕತೆ ಒಂದು ರೀತಿ ಆಸಕ್ತಿ ಹುಟ್ಟಿಸುತ್ತದೆ. ಆದರೆ ಒಟ್ಟಾರೆ ಈ ಸಿನೆಮಾ ಕಳಪೆ ಎನಿಸುತ್ತದೆ. ನೀವು ಚಿತ್ರಮಂದಿರದಲ್ಲಿ ಕುಳಿತು ನಾಟಕ ಬಯಸುವುದಾದರೆ ಈ ಚಿತ್ರ ವೀಕ್ಷಿಸಬಹುದು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ರೈಟ್...ಆದ್ರೆ
ಮನಕುಣಿಸದ 'ಆ ಜಾ ನಾಚ್ ಲೇ'
ಈ 'ಚಂಡ' ಪ್ರಚಂಡ; ಆಕ್ಷನ್ ಪ್ರಿಯರಿಗೆ ಹುಗ್ಗಿಯೂಟ
ಹೊಸಬರ ದಂಡಿನ ಆಕರ್ಷಕ ಸಾವರಿಯಾ
ಓಂ ಶಾಂತಿ ಓಂ: ಹಾಸ್ಯ, ಕುತೂಹಲ ಭರಿತ ಮಸಾಲೆ ಚಿತ್ರ
ಗಂಡನ ಮನೆ
ಆರೋಗ್ಯ
ಚಿಕಿತ್ಸೆ - ನಿಮ್ಮ ಕೂದಲನ್ನು ವಾರಕ್ಕೆರಡು ಬಾರಿ ಮಾತ್ರ ತೊಳೆಯಿರಿ. ತೊಳೆಯಲು ಬಿಸಿನೀರನ್ನು ಬಳಸುವುದು ಬೇಡ. ಕೂದಲು ತೊಳೆಯಲು ಶ್ಯಾಂಪು ಬಳಸುತ್ತಿದ್ದರೆ, ಸೌಮ್ಯವಾದ ಶ್ಯಾಂಪೂಗಳನ್ನು ಬಳಸುವುದು ಉತ್ತಮ.
ಮುಂದೆ ಓದಿ|ಮತ್ತಷ್ಟು...
ಮನರಂಜನೆ
NRB
 
ಈ 'ಚಂಡ' ಪ್ರಚಂಡ; ಆಕ್ಷನ್ ಪ್ರಿಯರಿಗೆ ಹುಗ್ಗಿಯೂಟ
ನಟ "ದುನಿಯಾ" ವಿಜಯ್ ಮತ್ತು ನಿರ್ದೇಶಕ, ನಿರ್ಮಾಪಕ ಎಸ್ ನಾರಾಯಣ ನಡುವೆ ಇನ್ನೂ ವಿವಾದ ...
ಮನಕುಣಿಸದ 'ಆ ಜಾ ನಾಚ್ ಲೇ'
ರೈಟ್...ಆದ್ರೆ
ಗ್ರಹ ಗತಿ
ವಾಸ್ತು - ಮನೆಯಲ್ಲಿ ಭೋಜನ ಕೋಣೆ ಬಹು ಪ್ರಮುಖವಾದುದು, ಹಾಗಾಗಿ ಇದರ ಬಗ್ಗೆಯೂ ಗಮನ ಹರಿಸಬೇಕಾದುದು ಅತಿ ಮುಖ್ಯ. ಯಾಕೆಂದರೆ ನಾವು ಆಹಾರ ಸೇವಿಸುವ ಸ್ಥಳ ಅಥವಾ ಪರಿಸರ ಉತ್ತಮ ಮತ್ತು ಆರಾಮದಾಯಕವಾಗಿದ್ದರೆ ಮಾತ್ರ ಆಹಾರವು ಸರಿಯಾಗಿ ಪಚನಗೊಳ್ಳುವುದು. ಸೂಕ್ತ ಸ್ಥಳದಲ್ಲಿ ಆಹಾರ ಸೇವಿಸುವುದರಿಂದ ದೇಹಕ್ಕೆ ಆರೋಗ್ಯವೂ, ಮನಸ್ಸಿಗೆ ಹಿತವೂ ಲಭಿಸುತ್ತದೆ.
ಮುಂದೆ ಓದಿ|ಮತ್ತಷ್ಟು...
Marketplace