|
| ರೈಟ್...ಆದ್ರೆ |
ಪಾತ್ರ ವರ್ಗ: ಮೋಹನ್, ತಾರಾ, ಕರಿಬಸವಯ್ಯ ನಿರ್ದೇಶನ: ಶರವಣ ರಾಜ ಕಿಶೋರ್ ಇದು ಒಂದೇ ಚಿತ್ರ. ಆದ್ರೆ ಕಥೆ ನಾಲ್ಕು. ಈ ಚಿತ್ರವನ್ನು ಅರ್ಥ ಮಾಡಿಕೊಳ್ಳಬೇಕಾದಲ್ಲಿ, ನಾಲ್ಕೂ ಕಥೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಜೀವನದಲ್ಲಿ ಏನೆಲ್ಲಾ ಕಷ್ಟಗಳು ಎದುರಾಗಬಹುದು ಎಂಬುದನ್ನು ನಿರ್ದೇಶಕರು ಈ ಚಿತ್ರದ ಮೂಲಕ ವಿವರಿಸಲು ಪ್ರಯತ್ನ ಪಟ್ಟಿದ್ದಾರೆ. ಚಿತ್ರದಲ್ಲಿ ಬರುವ ನಾಲ್ಕೂ ಕಥೆಗಳೂ ಪ್ರೀತಿಗೆ ಸಂಬಧಿಸಿರುವುದೇ ಆಗಿವೆ. ಸಿನಿಮಾ ಟಿಕೆಟ್ ಮಾರುವ ಸೂರಿ ಹಾಗು ಕಾಲೇಜು ಹುಡುಗಿಯ ನಡುವಣ ಪ್ರೇಮ ಮೊದಲನೆಯ ಕಥೆ. ಮತ್ತೊಂದು ಪ್ರೇಮ ಕಥೆ ಜಾನ್ (ಮೋಹನ್) ಆತನ ಸಹ ವಿದ್ಯಾರ್ಥಿನಿ ಪಲ್ಲವಿಯದು. ಆದರೆ ತಾನೆಂದರೆ ಪ್ರಾಣಬಿಡುವ ಜಾನ್‌ಗೆ ಕೈಕೊಡುವ ಪಲ್ಲವಿ ಶ್ರೀಮಂತನ ಕೈಹಿಡಿಯುತ್ತಾಳೆ.
ಮತ್ತೊಂದು ಅಕ್ಕಪಕ್ಕದ ಮನೆಗಳ ಹುಡುಗ ಹುಡುಗಿಯ ಪ್ರೇಮ ಕಥೆ. ಕೊನೆಯ ಪ್ರೇಮ ಕಥೆಯಲ್ಲಿ ಹುಡುಗ ಹುಡುಗಿಯ ಹಿಂದೆ ಬೀಳುವ ಬದಲು ಹುಡುಗಿಯೇ ಹುಡುಗನ ಹಿಂದೆ ಬೀಳುತ್ತಾಳೆ. ಈ ಕಥೆಯಲ್ಲಿ ಡಾ.ರಾಜ್ ಹಾಗೂ ಶಂಕರ್‌ನಾಗ್ ಅಭಿನಯದ ಚಿತ್ರಗಳ ತುಂಡುಗಳನ್ನು ಸೇರಿಸಲಾಗಿದೆ. ಉಪೇಂದ್ರ ಅವರ 'ಎ' ಚಿತ್ರದ ಸನ್ನಿವೇಶಗಳನ್ನು ಈ ಚಿತ್ರ ನೆನಪಿಗೆ ತರುತ್ತದೆ. ಸಂಗೀತ ನಿರ್ದೇಶಕ ನೀಲ್ ಸಂಯೋಜಿಸಿದ ಹಾಡುಗಳಲ್ಲಿ ಎರಡು ಹಾಡುಗಳು ಇಂಪಾಗಿವೆ. ರಮೇಶ್ ಭಟ್ ಹಾಗೂ ತಾರಾ ಅಭಿನಯ ಪ್ರತಿಭೆಯನ್ನು ನಿರ್ದೇಶಕರು ಚೆನ್ನಾಗಿ ಬಳಸಿಕೊಂಡಿದ್ದಾರೆ.
ಒಂದೇ ಚಿತ್ರದಲ್ಲಿ ನಾಲ್ಕಾರು ಕಥೆಗಳನ್ನು ತುರುಕಿದರೆ ಹೇಗಿರುತ್ತೆ ಎಂಬುದಕ್ಕೆ 'ರೈಟ್... ಆದ್ರೆ' ಚಿತ್ರ ಒಂದು ಉದಾಹರಣೆ. ವಾಲ್ ಪೋಸ್ಟರ್‌ಗಳಲ್ಲಾಗಲಿ, ಜಾಹೀರಾತಿನಲ್ಲಾಗಲಿ ನಟನಟಿಯರ ಫೊಟೋಗಳಿಲ್ಲದ ಕಾರಣ ಇದೊಂದು ವಿಭಿನ್ನಚಿತ್ರವಿರಬಹುದೆಂಬ ಆಸಕ್ತಿ ಚಿತ್ರಪ್ರೇಮಿಗಳಲ್ಲಿ ಹುಟ್ಟುತ್ತದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ವಾಸ್ತು - ಮನೆಯಲ್ಲಿ ಓದುವ ಕೋಣೆಗೆ ಪೂಜಾ ಕೋಣೆಯಂತೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಕಾರಣ ಅಲ್ಲಿ ಸರಸ್ವತಿ ನೆಲೆಯೂರಿದರೆ ಮಾತ್ರ ವಿದ್ಯೆಯು ಪ್ರಧಾನವಾಗುವುದು ಎಂಬ ನಂಬಿಕೆ ಭಾರತೀಯರಲ್ಲಿ ಗಾಡವಾಗಿದೆ. |
| |
|
|
|
|
 | | NRB |
| | |
| |
|
|
|
|
|
| ವಾಣಿಜ್ಯ ಲೇಖನಗಳು - ಯಾವುದೇ ಒಂದು ದೇಶದಲ್ಲಿ ವಕೀಲರ ಸಂಖ್ಯೆ ಹೆಚ್ಚಾಗಿದೆ ಎಂದರೆ ಅಲ್ಲಿ ವಾದ-ವಿವಾದಗಳ ಸಂಖ್ಯೆ ಹೆಚ್ಚುತ್ತಲಿದೆ ಎಂದರ್ಥ. ಯಾವುದೇ ಒಂದು ದೇಶದಲ್ಲಿ ಪೊಲೀಸ್ ಸಂಖ್ಯೆ |
| |
|
|
|
|
|
|
|