|
| ಮನಕುಣಿಸದ 'ಆ ಜಾ ನಾಚ್ ಲೇ' |
ಧಕ್ ಧಕ್ ಬೆಡಗಿ ಮಾಧುರಿ ದಿಕ್ಷೀತ್ ಕಳೆದ ಶುಕ್ರವಾರ ಬಾಲಿವುಡ್‌ನಲ್ಲಿ ತನ್ನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆಜಾ ನಾಚ್‌ಲೇ ಮೂಲಕ ಬಾಲಿವುಡ್ ಜಗತ್ತಿಗೆ ಅವರ ಪುನರಾಗಮನವಾಗಿದೆ. ಅದರೆ, ದೇಶದ ನಂ.1 ಬ್ಯಾನರ್ ನಿರ್ಮಿಸಿದ ಈ ಆಜಾ ಪ್ರೇಕ್ಷಕರ ಮನಸ್ಸನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆಯೇ? ಮಾಧುರಿ ದಿಕ್ಷೀತ್ ಮೊದಲಿನ ಹಾಗೆ ಅಭಿಮಾನಿಗಳಲ್ಲಿ ಮನಕ್ಕೆ ಕಚಗುಳಿ ಮತ್ತು ಕಿಚ್ಚು ಇಡಬಲ್ಲರೆ ಎಂಬ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಕ್ಕಿಲ್ಲ.
ಯಶ್-ಮಾಧುರಿ ಜೋಡಿಯ ಆಜಾ ನಾಚ್‌ಲೇ ನಿರೀಕ್ಷೆಗೂ ಮೀರಿ ತೋಪೆದ್ದು ಹೋಗಿದೆ. ಈ ರೀತಿ ಪ್ಲಾಪ್ ಎಂಬ ಹಣೆಪಟ್ಟಿ ಬರಲು ಕಾರಣ ಕಥೆ. ನೀಜ ಜೀವನದ ಕಥೆಯಂತೆ ಪ್ರಾರಂಭವಾಗುವ ಸಿನಿಮಾ ಒಂದು ಗಂಟೆಯ ನಂತರ ಎಲ್ಲ ಕುತೂಹಲಗಳನ್ನು ಕಳೆದುಕೊಳ್ಳುತ್ತದೆ. ಅಲ್ಲದೆ ಚಿತ್ರದ ಹೆಸರು 'ಆಜಾ ನಾಚ್ ಲೇ' ಎಂದಾಗ ಮನಮುಟ್ಟುವ ಸಂಗೀತ ಆಸ್ವಾದಿಸಬಹುದು ಎನ್ನುವ ನಿರೀಕ್ಷೆ ಸುಳ್ಳಾಗುತ್ತದೆ. ಚಿತ್ರದ ಒಂದೇ ಒಂದು ಹಾಡು ಗುನುಗುನಿಸಲು ಅರ್ಹತೆ ಪಡೆದಿಲ್ಲ. ಹೀಗಾಗಿ ಪ್ರೇಕ್ಷಕ ನಿರಾಸೆಗೊಳ್ಳುತ್ತಾನೆ. ಒಂದೇ ವಾಕ್ಯದಲ್ಲಿ ಹೇಳಬೇಕು ಎಂದರೆ ಆಜಾ ಚಿತ್ರಕಥೆ ಮತ್ತು ಸಂಗೀತದಲ್ಲಿ ಸಂಪೂರ್ಣ ವಿಫಲ.
ಕಥೆ ಪ್ರಾರಂಭವಾಗುವುದು ನೃತ್ಯದಿಂದ. ಒಂದು ದಿನ ದಿಯಾ ( ಮಾಧುರಿ ದೀಕ್ಷಿತ್) ದೂರದ ನ್ಯೂಯಾರ್ಕ್‌ನಲ್ಲಿ ನೃತ್ಯಾಭ್ಯಾಸ ಮಾಡುತ್ತಿರುತ್ತಾರೆ. ಆ ಸಮಯದಲ್ಲಿ ಭಾರತದಲ್ಲಿನ ಒಂದು ಹಳ್ಳಿ ಶಾಮ್ಲಿಯಿಂದ ಕರೆ ಬರುತ್ತದೆ. ಗುರುಗಳಾದ ಮಕರಂದ (ದರ್ಶನ್ ಜರಿವಾಲಾ) ತನ್ನ ಅಂತಿಮ ಯಾತ್ರೆಗೆ ಸಿದ್ಧವಾಗುತ್ತಿರುತ್ತಾನೆ. ಅದಕ್ಕೂ ಮುನ್ನ ತನ್ನ ಶಿಷ್ಯೆ ದಿಯಾಳಿಗೆ ಅಜಂತಾವನ್ನು ರಕ್ಷಿಸುವ ಜವಾಬ್ದಾರಿ ವಹಿಸುವುದಕ್ಕೆ ಬದ್ಧನಾಗಿರುತ್ತಾನೆ. ಇಲ್ಲಿಂದ ಅಕ್ಷರಶಃ ಅಜಂತಾ ರಕ್ಷಣೆಯ ಯುದ್ಧ ಪ್ರಾರಂಭ. ಪ್ರಮುಖ ಪಾತ್ರದಲ್ಲಿ ಮಾಧುರಿ ಇದ್ದು ಅವರೊಂದಿಗೆ ಹೆಜ್ಜೆ ಹಾಕುವುದಕ್ಕೆ ವಿರೋಧ ಒಡ್ಡುವುದಕ್ಕೆ ಹಲವು ಪಾತ್ರಗಳಿವೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ವಾಸ್ತು - ಮನೆಯಲ್ಲಿ ಓದುವ ಕೋಣೆಗೆ ಪೂಜಾ ಕೋಣೆಯಂತೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಕಾರಣ ಅಲ್ಲಿ ಸರಸ್ವತಿ ನೆಲೆಯೂರಿದರೆ ಮಾತ್ರ ವಿದ್ಯೆಯು ಪ್ರಧಾನವಾಗುವುದು ಎಂಬ ನಂಬಿಕೆ ಭಾರತೀಯರಲ್ಲಿ ಗಾಡವಾಗಿದೆ. |
| |
|
|
|
|
 | | NRB |
| | |
| |
|
|
|
|
|
| ವಾಣಿಜ್ಯ ಲೇಖನಗಳು - ಯಾವುದೇ ಒಂದು ದೇಶದಲ್ಲಿ ವಕೀಲರ ಸಂಖ್ಯೆ ಹೆಚ್ಚಾಗಿದೆ ಎಂದರೆ ಅಲ್ಲಿ ವಾದ-ವಿವಾದಗಳ ಸಂಖ್ಯೆ ಹೆಚ್ಚುತ್ತಲಿದೆ ಎಂದರ್ಥ. ಯಾವುದೇ ಒಂದು ದೇಶದಲ್ಲಿ ಪೊಲೀಸ್ ಸಂಖ್ಯೆ |
| |
|
|
|
|
|
|
|