|
| ಈ 'ಚಂಡ' ಪ್ರಚಂಡ; ಆಕ್ಷನ್ ಪ್ರಿಯರಿಗೆ ಹುಗ್ಗಿಯೂಟ |
ನಟ 'ದುನಿಯಾ' ವಿಜಯ್ ಮತ್ತು ನಿರ್ದೇಶಕ, ನಿರ್ಮಾಪಕ ಎಸ್. ನಾರಾಯಣ ನಡುವೆ ಇನ್ನೂ ವಿವಾದ ನಡೆಯುತ್ತಿರುವಾಗಲೇ ಚಂಡ ತೆರೆಗೆ ಬಂದಿದ್ದು, ಸಿನಿಮಾ ರಸಿಕರನ್ನು ರಂಜಿಸುತ್ತಿದೆ. ಒಂದಿಷ್ಟು ಪ್ರೀತಿ, ಒಂದಿಷ್ಟು ತಾಯಿ ಸೆಂಟಿಮೆಂಟು ಎಲ್ಲ ಸೇರಿಕೊಂಡು ಮಸಲಾಮಯವಾಗಿದ್ದಾನೆ ಈ 'ಚಂಡ'.
ಚಿತ್ರಕಥೆ ಹೀಗೆ ಸಾಗುತ್ತದೆ: ಕರ್ರಗಿರುವ ಕರಿಯ (ವಿಜಯ್) ಉಢಾಳ ಮನುಷ್ಯ. ತಿನ್ನುತ್ತಾನೆ, ಸಾರಾಯಿ ಕುಡಿಯುತ್ತಾನೆ. ಬರೇ ಮಕ್ಕಳಾಟದ ಯೋಚನೆಗಳು. ಆದರೆ ತಾಯಿಗೆ ಸಾರ್ವಜನಿಕವಾಗಿ ಅವಮಾನವಾದಾಗ ಆತ ಸಿಡಿದೇಳುತ್ತಾನೆ. ಹುಲಿಯಂತೆ ಘರ್ಜಿಸಿ ವಿರೋಧಿಗಳನ್ನು ಚಚ್ಚುತ್ತಾನೆ. ಹೀಗೆ ಚಚ್ಚಿಸಿಕೊಂಡವರಲ್ಲಿ ಆ ಗ್ರಾಮದ ಡಾನ್ ಒಬ್ಬನ ಕುಟುಂಬಿಕನೂ ಸೇರಿರುತ್ತಾನೆ. ಕರಿಯ ಮತ್ತಷ್ಟು ಮುಂದುವರಿದು ಅದೇ ಡಾನ್ ಕುಟುಂಬಕ್ಕೆ ಸೇರಿದ ಇನ್ನೂ ಇಬ್ಬರ ಮನೆಗಳನ್ನು ಧ್ವಂಸ ಮಾಡುತ್ತಾನೆ.
ಇದೇ ಸಂದರ್ಭ ಈ ಡಾನ್‌ನ ಮಗಳು ಸ್ವಪ್ನ (ಶುಭಾ) ಕರಿಯನತ್ತ ಆಕರ್ಷಿತಳಾಗುತ್ತಾಳೆ. ಕರಿಯನಿಗಂತೂ ಈ ಪ್ರೀತಿ ಪ್ರೇಮದಲ್ಲಿ ನಂಬಿಕೆ ಇರುವುದಿಲ್ಲ. ಸ್ವಪ್ನಳೇ ಆತನನ್ನು ನಾಗರಿಕ ಮನುಷ್ಯನಾಗಿ ರೂಪಿಸತೊಡಗುತ್ತಾಳೆ. ಕರಿಯನೂ ಅವಳನ್ನು ಪ್ರೀತಿಸಿ ಮದುವೆಗೆ ಪ್ರಸ್ತಾಪಿಸಿದಾಗ, ಆಘಾತ ದೊರೆಯುತ್ತದೆ. ತನ್ನ ಕುಟುಂಬಕ್ಕೆ, ಬಂಧುಗಳಿಗೆ ತೀವ್ರ ಘಾಸಿ/ಹಾನಿ ಮಾಡಿದ ಕರಿಯನಿಗೆ ಕೊನೆಯ ಕ್ಷಣದಲ್ಲಿ ಕೈಕೊಡಲೆಂದೇ ಪ್ರೀತಿಸುವ ನಾಟಕವಾಡಿದ್ದಾಗಿ ಹುಡುಗಿ ಹೇಳುತ್ತಾಳೆ.
ಕೋಪಗೊಂಡು ಕರಿಯ ಹೊರಡುತ್ತಾನಾದರೂ, ದಿನಕಳೆದಂತೆ ಪ್ರೇಮ ವೈಫಲ್ಯ ಅವನನ್ನು ಕಾಡುತ್ತಾ ಇರುತ್ತದೆ. ಕಲ್ಲುಬಂಡೆಯಂತಿದ್ದ ಕರಿಯನ ಮನಸ್ಸು ಮೃದುವಾಗಿಬಿಟ್ಟಿರುತ್ತದೆ ಮತ್ತು ಪ್ರೇಮ ವಿರಹದಿಂದ ತೊಳಲಾಡುತ್ತಿರುತ್ತದೆ. ಸ್ವಪ್ನ ಕೂಡ ನಿಧಾನವಾಗಿ ತನ್ನ ಮನಸ್ಸು ಬದಲಾಯಿಸುತ್ತಾಳಾದರೂ ಅದು ತೀರಾ ತಡವಾಗಿಬಿಡುತ್ತದೆ. ಕರಿಯ ಸ್ವಪ್ನಳನ್ನು ಎಷ್ಟರ ಮಟ್ಟಿಗೆ ಪ್ರೀತಿಸುತ್ತಾನೆಂಬುದು ಚಿತ್ರದ ಕ್ಲೈಮಾಕ್ಸ್.
ವಿಜಯ್ ಪಾತ್ರ ಪೋಷಣೆ ಚೆನ್ನಾಗಿದೆ. ಶುಭಾ ನಟನೆಯೂ ಉತ್ತಮವಾಗಿದ್ದು, ಒಳ್ಳೆಯ ಭರವಸೆ ಮೂಡಿಸಿದ್ದಾರೆ. ಸುಂದರ್ ರಾಜ್, ಶೋಭಾ ರಾಘವೇಂದ್ರ, ಕೋಮಲ್ ಕುಮಾರ್ ಪಾತ್ರೋಚಿತವಾಗಿ ನಟಿಸಿದ್ದಾರೆ. 'ಚಂಡ'ದ ಚಿತ್ರದ ಹಾಡುಗಳೂ ಚೆನ್ನಾಗಿವೆ ಮತ್ತು ಎಸ್.ನಾರಾಯಣ್ ಅವರು ನಿರ್ದೇಶನದಲ್ಲಿ ಗೆದ್ದಿದ್ದಾರೆ ಎನ್ನಬಹುದು. ಒಟ್ಟಿನಲ್ಲಿ ಆಕ್ಷನ್ ಪ್ರಿಯರಿಗೆ ಇಷ್ಟವಾಗುವ ಚಿತ್ರವಿದು ಎನ್ನಲಡ್ಡಿಯಿಲ್ಲ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ವಾಸ್ತು - ಮನೆಯಲ್ಲಿ ಓದುವ ಕೋಣೆಗೆ ಪೂಜಾ ಕೋಣೆಯಂತೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಕಾರಣ ಅಲ್ಲಿ ಸರಸ್ವತಿ ನೆಲೆಯೂರಿದರೆ ಮಾತ್ರ ವಿದ್ಯೆಯು ಪ್ರಧಾನವಾಗುವುದು ಎಂಬ ನಂಬಿಕೆ ಭಾರತೀಯರಲ್ಲಿ ಗಾಡವಾಗಿದೆ. |
| |
|
|
|
|
 | | NRB |
| | |
| |
|
|
|
|
|
| ವಾಣಿಜ್ಯ ಲೇಖನಗಳು - ಯಾವುದೇ ಒಂದು ದೇಶದಲ್ಲಿ ವಕೀಲರ ಸಂಖ್ಯೆ ಹೆಚ್ಚಾಗಿದೆ ಎಂದರೆ ಅಲ್ಲಿ ವಾದ-ವಿವಾದಗಳ ಸಂಖ್ಯೆ ಹೆಚ್ಚುತ್ತಲಿದೆ ಎಂದರ್ಥ. ಯಾವುದೇ ಒಂದು ದೇಶದಲ್ಲಿ ಪೊಲೀಸ್ ಸಂಖ್ಯೆ |
| |
|
|
|
|
|
|
|