|
| ಹೊಸಬರ ದಂಡಿನ ಆಕರ್ಷಕ ಸಾವರಿಯಾ |
ದೇವದಾಸ್‌ನಂತಹ ಅಧ್ಭುತ ಚಿತ್ರವನ್ನು ಚಿತ್ರರಂಗಕ್ಕೆ ನೀಡಿದ ಬಾಲಿವುಡ್ ಖ್ಯಾತ ನಿರ್ದೆಶಕ ಸಂಜಯ್ ಲೀಲಾ ಬನ್ಸಾಲಿ ಅವರ ಉತ್ತಮ ಚಿತ್ರಗಳ ಸಾಲಿಗೆ ಇದೀಗ ಸಾವರಿಯಾ ಚಿತ್ರವೂ ಸೇರ್ಪಡೆಗೊಂಡಿದೆ.
ಅಮೆರಿಕದ ಮೋಷನ್ ಪಿಕ್ಚರ್ಸ್ ಅಸೋಸಿಯೋಶನ್ ಸಾವರಿಯಾ ಚಿತ್ರಕ್ಕೆ ಪಿಜಿ ರೇಟಿಂಗ್ ಪತ್ರ ನೀಡಿದೆ. ಚಿತ್ರದಲ್ಲಿ ರಿಷಿಕಪೂರ್ ಪುತ್ರ ರಣಬೀರ್ ಕಪೂರ್, ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ನಟಿಸಿದ್ದಾರೆ. ಝೋರಾ ಸೆಹಗಲ್, ಸಲ್ಮಾನ್ ಖಾನ್, ರಾಣಿ ಮುಖರ್ಜಿ, ಅವರುಗಳೂ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಗುಲಾಬಿ (ರಾಣಿ ಮುಖರ್ಜಿ) ಒಬ್ಬ ಕರೆವೆಣ್ಣು. ಸುಂದರ, ಆಕರ್ಷಕ, ಮೃದು ಮಾತಿನ ರಣಬೀರ್ ರಾಜ್ (ರಣಬೀರ್ ಕಪೂರ್) ನೋಡಿದ ಪ್ರಥಮ ನೋಟದಲ್ಲೇ ರಾಣಿಗೆ ಪ್ರೇಮಾಂಕುರವಾಗುತ್ತದೆ. ಇದು ಚಿತ್ರಕಥೆಯ ಕೇಂದ್ರ ಬಿಂದುವಾಗುತ್ತದೆ.
ರಣಬೀರ್ ಕಪೂರ್ ಅನಾಥ. ಮೇಲಾಗಿ ತಾನು ಯಾರು? ಎಲ್ಲಿಯವನು? ಬಂಧುಬಳಗ ಯಾವುದು ಗೊತ್ತಿಲ್ಲದೇ ತನ್ನ ನೆರಹೊರೆಯವರ ಪ್ರೀತಿಯನ್ನೇ ಸರ್ವಸ್ವವೆಂದು ತಿಳಿದು ಜೀವಿಸುತ್ತಿರುವ ಸರಳ ಸಜ್ಜನಿಕೆಯ ಹೃದಯವಂತ.
ರಾಣಿಯ ಮನಸ್ಸನ್ನು ಗೆದ್ದ ರಣಬೀರ್, 37 ವರ್ಷಗಳ ಹಿಂದೆ ಮಗನನ್ನು ಕಳೆದುಕೊಂಡು ದುಖಿತಳಾಗಿದ್ದ ಲಿಲ್ಲಿ ಪಾಪ್ (ಝೋರಾ ಸೆಹಗಲ್)ಗೆ ಮಗನ ಪ್ರೀತಿಯನ್ನು ನೀಡಿ ಅವಳ ಮನಸ್ಸನ್ನು ಗೆಲ್ಲುತ್ತಾನೆ
ರಾಜ್ ತನ್ನ ಜೀವನವನ್ನು ಸುಗಮವಾಗಿ ಸಾಗಿಸಲು ಹೋರಾಟ ಮಾಡುತ್ತಿರುತ್ತಾನೆ. ಅವನ ಮನದಲ್ಲಿ ಸದಾ ದುಃಖ ತುಂಬಿರುತ್ತದೆ. ಒಂದು ಬಾರಿ ಮೋಹಕ ರೂಪಸಿ ಸುಂದರವಾದ ಬಾಲೆ ಸಕೀನಾ (ಸೋನಮ್ ಕಪೂರ್) ಳನ್ನು ನೋಡುತ್ತಾನೆ. ಅವನಿಗೆ ನಾನು ಒಂಟಿಯಲ್ಲ ನನ್ನೊಂದಿಗೆ ಸಕೀನಾ ಇದ್ದಾಳೆ ಎಂದು ಸಂತೋಷದಿಂದ ಹುಚ್ಚು ಪ್ರೀತಿಯ ಅಲೆಗಳಲ್ಲಿ ತೇಲಿಹೋಗುತ್ತಾನೆ. ಸಕೀನಾಳ ಹೆಸರನ್ನು ಪಟ್ಟಣದ ಪ್ರತಿಯೊಂದು ಗೋಡೆಗಳ ಮೇಲೆ ಬರೆಯುತ್ತಾನೆ.ನಾನು ಅವಳನ್ನು ಪ್ರೀತಿಸುತ್ತೇನೆ ಅವಳ ಹೃದಯ ನನಗಾಗಿ ಮೀಸಲಾಗಿದೆ ಎನ್ನುವ ಭಾವನೆಗಳಲ್ಲಿ ಕೊಚ್ಚಿ ಹೋಗುತ್ತಾನೆ.
ಆದರೆ ಸಕೀನಾಳ ಹೃದಯ ಗೆದ್ದ (ಇಮಾನ್) ಸಲ್ಮಾನ್‌ಗಾಗಿ ಅವಳ ಪ್ರೀತಿ ನಿರಂತರ ಕಾಯುತ್ತಿರುತ್ತದೆ. ಸಲ್ಮಾನ್ ದೂರದಲ್ಲಿರುವುದರಿಂದ ಅವನು ಬರುವವರೆಗೆ ರಾಜ್‌ನೊಂದಿಗೆ ಗೆಳತನ ಬಯಸುತ್ತಾಳೆ ಎನ್ನುವುದು ರಾಜ್‌ಗೆ ಗೊತ್ತಿರುವುದಿಲ್ಲ.
ಆದರೆ ಹಬ್ಬದ ದಿನದಂದು ಆಗಮಿಸಿದ (ಇಮಾನ್) ಸಲ್ಮಾನ್, ರಾಜ್ ಜೀವನದಲ್ಲಿ ಬಿರುಗಾಳಿ ಎಬ್ಬಿಸುತ್ತಾನೆ. ಸಕೀನಾಳಿಗೆ ತಾನು ನಿಜವಾಗಿ ಪ್ರೀತಿಸುತ್ತಿರುವುದಾಗಿ ತಿಳಿಹೇಳಲು ರಾಜ್ ಪ್ರಯತ್ನಿಸುತ್ತಾನೆ. ಆದರೆ ಸಕೀನಾ ತನ್ನನ್ನು ಪ್ರೀತಿಸುವುದಿಲ್ಲ ಎನ್ನುವ ಘೋರ ಸತ್ಯಾಂಶ ಅವನನ್ನು ಆಧೀರನನ್ನಾಗಿಸುತ್ತದೆ. ಸಕೀನಾ ರಾಜ್ ಅಥವಾ ಇಮಾನ್ ಇವರಿಬ್ಬರಲ್ಲಿ ಯಾರನ್ನು ಆಯ್ಕೆ ಮಾಡುತ್ತಾಳೆ? ರಾಜ್ ಸಂತೋಷವಾಗಿರಲು ಗುಲಾಬಿ ತನ್ನ ಗುಪ್ತ ಪ್ರೀತಿಯನ್ನು ತ್ಯಾಗ ಮಾಡುತ್ತಾಳೆಯೇ? ಮುಂದಿನ ವಿವರಗಳನ್ನು ತೆರೆಯೆ ಮೇಲೆ ನೋಡಿದರೆ ಚೆನ್ನಾಗಿರುತ್ತದೆ.
ಸಾವರಿಯಾ ಚಿತ್ರದಲ್ಲಿ ಉತ್ತಮ ಹೊರಾಂಗಣ ಚಿತ್ರೀಕರಣ, ಅದ್ಭುತ ಕ್ಯಾಮರಾ ಕೈಚಳಕ, ಸುಂದರವಾದ ಕಥೆ, ದೃಶ್ಯಸಂವಹನ, ಕಲಾ ನಿರ್ದೇಶಕ ಒಮುಂಗ್‌ಕುಮಾರ್ ಅವರ ಕಲೆಯನ್ನು ನೋಡಿದಲ್ಲಿ ಹೊಸಲೋಕವನ್ನು ಪ್ರವೇಶಿಸಿದಂತಾಗುತ್ತದೆ.
ನಿರ್ದೇಶಕ ಸಂಜಯ ಲೀಲಾ ಬನ್ಸಾಲಿ ಹಾಗೂ ರಾಜ್‌ಕಪೂರ್ ಪ್ರಯತ್ನಗಳಿಗೆ ಸಾಮ್ಯತೆ ಇದೆ ಎಂದು ಬಾಲಿವುಡ್ ಮೂಲಗಳು ಪ್ರಂಶಸೆ ಮಾಡುತ್ತಿವೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಸಾಪ್ತಾಹಿಕ - ಎಲ್ಲ ಕಡೆಗಳಿಂದಲೂ ನಿಮಗೆ ಅನುಕೂಲವಾಗಲಿದೆ. ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. |
| |
|
|
|
|
 | | AP |
| | |
| |
|
|
|
|
|
| ಪ್ರೇಮಗಾಥೆ - ಮರೀನಾ ಬೀಚ್‌ನ ಸಂಜೆಗೆಂಪಿನ ಕಡಲ ಕಿನಾರೆಯಲ್ಲಿ ಕಲರವ ಕೇಳಿಬರುತ್ತಿತ್ತು. ಬಿಸಿಲ ಧಗೆಗೆ ಬಳಲಿದ ನೂರಾರು ಹುಡುಗರು ಉಪ್ಪು ನೀರಿನಲ್ಲಿ ಈಜು ಬಿದ್ದಿದ್ದರು. ಉಕ್ಕಿ ಬರುವ ನೊರೆ ನೊರೆ ಅಲೆಯಲ್ಲಿ ಕಾಲು ಕುಣಿಸುತ್ತಾ |
| |
|
|
|
|
|
|
|