ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸಮೀಕ್ಷೆ
ಓಂ ಶಾಂತಿ ಓಂ: ಹಾಸ್ಯ, ಕುತೂಹಲ ಭರಿತ ಮಸಾಲೆ ಚಿತ್ರ
ಗುರುವಾರ, 15 ನವೆಂಬರ್ 2007   ( 12:50 IST )
ಬಾರೀ ಕುತೂಹಲ ಮೂಡಿಸಿದ್ದ ಓಂ ಶಾಂತಿ ಓಂ ಎಲ್ಲರ ಕಾತರವನ್ನು ತಣಿಸಿದೆ. ಚಿತ್ರ ಬಿಡುಗಡೆ ಯಾಗುವ ಮುನ್ನವೇ ಬಾರೀ ಪ್ರಚಾರದಲ್ಲಿದ್ದ ಓಂ ಶಾಂತಿ ಓಂ ನಿರೀಕ್ಷೆಯಿಂತೆಯೇ ಹಿಟ್ ಆಗಿದೆ.

ಹಲವು ಕಾಲದಿಂದ ಶಾರೂಖ್ ಖಾನ್‌ರಿಂದ ಮಸಾಲಾ ಚಿತ್ರವೊಂದನ್ನು ನಿರೀಕ್ಷಿಸುತ್ತಿದ್ದ ಪ್ರೇಕ್ಷಕ ಖುಷ್ ಆಗಿದ್ದಾನೆ. ತಾನು ಬಾಲಿವುಡ್‌ನ ಅಜೇಯ ಬಾದ್‌ಷಾ ಎಂಬುದನ್ನು ಈ ಚಿತ್ರದ ಮೂಲಕ ಅವರು ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಓಂ ಶಾಂತಿ ಓಂ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಸಿದ್ಧತೆ ಮಾಡುತ್ತಿದೆ.

ಆದರೆ ಇದನ್ನು ನೋಡಿದ ಚಿತ್ರ ಪ್ರೇಮಿಗಳಿಗೆ, ಸುಭಾಷ್ ಘಾಯ್ ಅವರ ಕರ್ಜ್, ಅಥವಾ ಇತರ ಚಿತ್ರಗಳಾದ ಕುದ್ರತ್, ಮಧು ಮತಿ, ಮಿಲನ್, ಕರಣ್ ಅರ್ಜುನ್ ಇವುಗಳೆಲ್ಲವೂ ನೆನಪಿಗೆ ಬರಬಹುದು. ಒಟ್ಟಿನಲ್ಲಿ ನಿರ್ದೇಶಕಿ ಫರಾ ಖಾನ್ ಅವರು ಗೆದ್ದಿದ್ದಾರೆ.

ಈ ಕಥೆ ಓಂ (ಶಾರೂಖ್ ಖಾನ್) ಮತ್ತು ಶಾಂತಿ (ದೀಪಿಕಾ ಪಡುಕೋಣೆ) ಅವರದು. ಓಂ ಒರ್ವ ಕಿರಿಯ ಕಲಾವಿದನಾದರೆ, ಶಾಂತಿಯು ಆಗಲೇ ಸೂಪರ್ ಸ್ಟಾರ್ ಪಟ್ಟಕ್ಕೇರಿದವಳು. ಆತ ಆಕೆಯ ದೊಡ್ಡ ಅಭಿಮಾನಿ ಮತ್ತು ಅವನಿಗೆ ಆಕೆಯಲ್ಲಿ ಪ್ರೀತಿ ಮೂಡುತ್ತದೆ.

ಓಂ ಕೂಡ ಸೂಪರ್ ಸ್ಟಾರ್ ಆಗುವ ಕನಸು ಕಾಣುತ್ತಾನೆ. ಆದರೆ ಅಪಘಾತವೊಂದರಲ್ಲಿ ಓಂ ಸಾವನ್ನಪ್ಪುತ್ತಾನೆ. ಆದರೆ ಆತ ಮರುಜನ್ಮ ಪಡೆಯುತ್ತಾನೆ. ತನ್ನ ಸಾವಿನ ಹಿಂದಿನ ನಿಗೂಢತೆ ಭೇದಿಸಲು ಆತ ಪ್ರಯತ್ನಿಸುತ್ತಾನೆ.

ಮುಷ್ತಾಕ್ ಶೇಖ್ ಮತ್ತು ಫರಾ ಖಾನ್ ಅವರ ಚಿತ್ರಕಥೆ ಮನಮುಟ್ಟುವಂತಿದೆ. ದೀಪಿಕಾ ಮತ್ತು ಅರ್ಜುನ್ ನಡುವಿನ ಜಗಳ, ಇದು ಶಾರುಖ್ ಕಿವಿಗೆ ಬೀಳುವುದು, ಅರ್ಜುನ್ ತನ್ನ ಚಿತ್ರ "ಓಂ ಶಾಂತಿ ಓಂ"ನ ಸೆಟ್‌ಗೆ ದೀಪಿಕಾಳನ್ನು ಕರೆದೊಯ್ಯುವುದು... ಹೀಗೆ ಘಟನೆಗಳು ಮಧ್ಯಂತರಕ್ಕೆ ಮುನ್ನ ಕುತೂಹಲ ಮೂಡಿಸುತ್ತದೆ ಮತ್ತು ಹಾಸ್ಯ ಪ್ರಧಾನವಾಗಿದೆ.

ಮಧ್ಯಂತರದ ಬಳಿಕ ಚಿತ್ರವು ಮತ್ತಷ್ಟು ರಸವತ್ತಾಗುತ್ತಾ ಹೋಗುತ್ತದೆ. ಅದರಲ್ಲಿ ಪುನರ್ಜನ್ಮಕ್ಕೆ ಸಂಬಂಧಿಸಿದ ಕಥೆಯ ಎಳೆ ಬಿಚ್ಚುತ್ತಾ ಹೋಗುತ್ತದೆ. ದರ್ದ್ ಎ ಡಿಸ್ಕೋ ಹಾಡು, ಈಗ ವೃದ್ಧೆಯಾಗಿರುವ ತಾಯಿ (ಕಿರಣ್ ಖೇರ್), ಓಂ ನ ಕಾರನ್ನು ಓಡಿಸಿಕೊಂಡು ಹೋಗುವುದು, ಫಿಲ್ಮ್ ಫೇರ್ ಪ್ರಶಸ್ತಿ ಪಡೆಯುವಾಗ ಶಾರೂಖ್ ಖಾನ್ ಪಾತ್ರದ ಪೂರ್ವ ಜನ್ಮದ ಫ್ಲ್ಯಾಶ್ ಬ್ಯಾಕ್‌ಗಳು... ಚೆನ್ನಾಗಿ ಚಿತ್ರಣವಾಗಿದೆ.

ಫರಾ ಅವರು ತಮ್ಮ ಪ್ರೇಕ್ಷಕರ ನಾಡಿಮಿಡಿತವನ್ನು ತಿಳಿದುಕೊಂಡೇ ಇಂಥ ಸಾಹಸಕ್ಕೆ ಕೈ ಹಚ್ಚಿದ್ದಾರೆ ಅನಿಸುತ್ತದೆ. ಫರಾ ಉತ್ತಮ ಕಥಾ ನಿರೂಪಕಿಯಾಗಿ ಇಲ್ಲಿ ಯಶಸ್ವಿಯಾಗಿದ್ದಾರೆ.

ವಿ.ಮಣಿಕಂಠನ್‌ರ ಅತ್ಯುತ್ತಮ ಸಿನಿಮಾಟೋಗ್ರಫಿ, ಮಯೂರ್ ಪುರಿಯವರ ಮನ ಮುಟ್ಟುವ ಸಂಭಾಷಣೆ, ವಿಶಾಲ್ -ಶೇಖರ್ ಹಿಟ್ ಸಂಗೀತ ಓಂ ಶಾಂತಿ ಓಂ ಚಿತ್ರಕ್ಕೆ ಹೆಚ್ಚಿನ ರಸ ತುಂಬಿಸಿದೆ.

ನಟನೆಗೆ ಸಂಬಂಧಿಸಿದಂತೆ, ಶಾರೂಖ್ ತಮ್ಮ ಎಂದಿನ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಈ ಕಡೆ ದೀಪಿಕಾ ಅತ್ಯುತ್ತಮ ನಾಯಕಿಯಾಗುವ ಎಲ್ಲ ಲಕ್ಷಣಗಳನ್ನು ತೋರಿಸಿಕೊಟ್ಟಿದ್ದಾರೆ. ಶಾರೂಖ್ ಅವರಂಥಹ ಅಗ್ರ ನಟನ ಜತೆಗೂಡಿ ಗಮನ ಸೆಳೆಯುವ ನಟನೆ ನೀಡಿದ್ದಾರೆ.

ಅರ್ಜುನ್ ರಾಮ್‌ಪಾಲ್ ನೆಗೆಟಿವ್ ಪಾತ್ರದಲ್ಲಿ ತಮ್ಮದೇ ಸ್ಟೈಲ್‌ ತೋರಿಸಿ ಗಮನ ಸೆಳೆದಿದ್ದಾರೆ. ಕಿರಣ್ ಖೇರ್ ಎಂದಿನಂತೆ ಅದ್ಭುತ ನಟನೆ, ಜಾವೇದ್ ಶೇಖ್ ತಮ್ಮ ಪ್ರತಿಭೆ ಮೆರೆದಿದ್ದರೆ, ಬಿಂದು ಅವರು ಹಾಸ್ಯ ಕ್ಷಣಗಳಿಗೆ ಜೀವ ತುಂಬಿದ್ದಾರೆ.

ಬಾಕ್ಸಾಫೀಸಿನಲ್ಲಿನ ಎಲ್ಲಾ ದಾಖಲೆಗಳನ್ನು ಮುರಿಯುವ ಪಥದಲ್ಲಿರುವ ಓಂ ಶಾಂತಿ ಓಂ ಚಿತ್ರ ಎಲ್ಲರೂ ನೋಡಬಹುದಾದ ಒಂದು ಉತ್ತಮ ಚಿತ್ರವಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಗಂಡನ ಮನೆ
ಸುರಸುಂದರಾಗ 'ಮನ್ಮಥ'ನ ಆಗಮನ !
ಸ್ನೇಹನಾ ಪ್ರೀತೀನಾ...ನೀವೇ ಹೇಳಿ?
ಸಂತ- ಪ್ರೀತಿಸ್ದೋರಿಗೆ ಸ್ವಂತ
ಮಸ್ತಿ ಮಾಡೋಣ ಬಾ......
ನಿಗೂಢತೆಯ ಸುತ್ತ ಸುತ್ತುವ ಸೌಂದರ್ಯ
ಗ್ರಹ ಗತಿ
ಸಾಪ್ತಾಹಿಕ - ಎಲ್ಲ ಕಡೆಗಳಿಂದಲೂ ನಿಮಗೆ ಅನುಕೂಲವಾಗಲಿದೆ. ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ.
ಮುಂದೆ ಓದಿ|ಮತ್ತಷ್ಟು...
ಗ್ರಹ ಗತಿ
AP
 
ಲಗ್ನೇಶ ಬುಧ ಇದ್ದರೂ ವಿಶ್ವಕಪ್ ತಂದ ಧೋನಿ
ಇತ್ತೀಚೆಗಿನ ಟ್ವೆಂಟಿ20 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ವಿಶ್ವ ಕಪ್ ತಂದ...
ರಾಹುಲ್ ಗಾಂಧಿ ಭವಿಷ್ಯ ಹೇಗಿದೆ?
ಜೂಹಿ ಬಬ್ಬರ್ ಉಜ್ವಲ ಭವಿಷ್ಯ
ಸಾಹಿತ್ಯ
ಪ್ರೇಮಗಾಥೆ - ಮರೀನಾ ಬೀಚ್‌ನ ಸಂಜೆಗೆಂಪಿನ ಕಡಲ ಕಿನಾರೆಯಲ್ಲಿ ಕಲರವ ಕೇಳಿಬರುತ್ತಿತ್ತು. ಬಿಸಿಲ ಧಗೆಗೆ ಬಳಲಿದ ನೂರಾರು ಹುಡುಗರು ಉಪ್ಪು ನೀರಿನಲ್ಲಿ ಈಜು ಬಿದ್ದಿದ್ದರು. ಉಕ್ಕಿ ಬರುವ ನೊರೆ ನೊರೆ ಅಲೆಯಲ್ಲಿ ಕಾಲು ಕುಣಿಸುತ್ತಾ
ಮುಂದೆ ಓದಿ|ಮತ್ತಷ್ಟು...
Marketplace