|
| ಪಂಕಜ್ ಚಿಲಿಪಿಲಿ ಸದ್ದುಮಾಡುವುದೇ? |
| ಮಂಗಳವಾರ, 12 ಮೇ 2009 ( 17:14 IST ) | |
ಎಸ್. ನಾರಾಯಣ್ ಸದ್ದಿಲ್ಲದೇ ಮತ್ತೊಂದು ಚಿತ್ರಕ್ಕೆ ಚಿತ್ರೀಕರಣ ನಡೆಸುತ್ತಿದ್ದಾರೆ. ಈ ಹಿಂದೆ'ಚೈತ್ರದ ಚಂದ್ರಮ' ಹಾಗೂ 'ಚೆಲ್ಲಿದರೂ ಸಂಪಿಗೆಯಾ' ಚಿತ್ರ ಕೈ ಸುಟ್ಟುಕೊಂಡ ಎಸ್.ನಾರಾಯಣ್ ಈಗ ಮತ್ತೆ ತಮ್ಮ ಮಗ ಪಂಕಜ್‌ನನ್ನು ಹಾಕಿಕೊಂಡು 'ಚೆಲುವಿನ ಚಿಲಿಪಿಲಿ' ಎಂಬ ಚಿತ್ರ ಮಾಡುತ್ತಿದ್ದಾರೆ.
ಸದ್ಯ ಪಂಕಜ್ ಕಾಲೇಜು ರಜೆಯಲ್ಲಿದ್ದಾರೆ. ಇದರಿಂದಾಗಿ ಆರಾಮವಾಗಿ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಚೈತ್ರದ ಚಂದ್ರಮದಲ್ಲಿ ಅಮೂಲ್ಯ ನಾಯಕಿಯಾಗಿದ್ದರೆ ಈ ಬಾರಿ ಚಿಲಿಪಿಲಿಗೆ ಹೊಸ ಬೆಡಗಿ ರೂಪಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇದು ನಾಣಿ ನಿರ್ದೇಶನದ 40 ನೇ ಹಾಗೂ ಅವರ ನಿರ್ಮಾಣದ 15 ನೇ ಚಿತ್ರ ಇದಾಗಿದೆ. ಇದು ಮಾಮೂಲಿ ಲವ್ ಸ್ಟೋರಿ ಅಲ್ಲ. ಪ್ರೀತಿಗೆ ಇಲ್ಲಿ ಹೊಸ ಭಾಷ್ಯ ಬರೆಯುತ್ತಾರಂತೆ. ಅದು ಯಾವ ಭಾಷ್ಯ ಎಂಬುದನ್ನು ಕಾದು ನೋಡಬೇಕು. ಯಾಕಂದ್ರೆ ಈ ಹಿಂದೆ ಚೈತ್ರದ ಚಂದ್ರಮದಲ್ಲೂ ಇದೇ ಡೈಲಾಗ್ ಬಿಟ್ಟಿದ್ದರು. ಆದರೆ ಪ್ರೇಕ್ಷಕ ಪ್ರಭುಗೆ ಆ ಭಾಷ್ಯ ಇಷ್ಟವಾಗಲಿಲ್ಲ.
ಚಿತ್ರದಲ್ಲಿ ಅನಂತ್‌ನಾಗ್ ಹಾಗೂ ಸುಮಲತಾ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಎಲ್ಲವೂ ನಾರಾಯಣ್ ಅವರದ್ದೆ.ಚಿಲಿಪಿಲಿ ಸದ್ದು ಮಾಡುತ್ತದೋ ಕಾದು ನೋಡಬೇಕು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮನೆಯೂ ನಿಮಗೆ ಮುಖ್ಯ, ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ನಿಮಗೇನು ಒಳ್ಳೆಯದೋ ಅದು ನಿಮಗೆ ಗೊತ್ತಿದ್ದರೆ, ಖಂಡಿತಾ ಪ್ರೀತಿ, ವಾತ್ಸಲ್ಯಗಳನ್ನು ಅಪ್ಪಿಕೊಳ್ಳುತ್ತೀರಿ. ಅಚಾತುರ್ಯದಿಂದ ಸ್ವತ್ತು ತಗಾದೆಗಳಲ್ಲಿ ನಿಮ್ಮ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ನೆಂಟರ ಮೃದ್ಧು ಧೋರಣೆಯಿಂದ ಮಾನಸಿಕ ನೆಮ್ಮದಿ. ವ್ಯವಹಾರಗಳಲ್ಲಿ ಇರುಸು ಮುರುಸು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಪೂಜಾಗಾಂಧಿ ಅಭಿನಯದ ಹುಚ್ಚಿ ಚಿತ್ರಕ್ಕೆ ಡಿಟಿಎಸ್ ನಡೆಯುತ್ತಿದೆ. ಡಿ.ಬಿ.ಕುಮಾರಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರವನ್ನು ವೆಂಕಟೇಶ್ ಪಂಚಾಂಗಂ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. |
| |
|
|
|
|
|
|