|
| ತಂದೆ-ಮಗಳ ರೋಮ್ಯಾನ್ಸ್ ಮುಸ್ಸಂಜೆಯ ಗೆಳತಿ |
| ಮಂಗಳವಾರ, 12 ಮೇ 2009 ( 17:09 IST ) | |
ಚಿತ್ರರಂಗವೆಂದರೆ ಅದು ಸ್ವಲ್ಪ ವಿಚಿತ್ರ ಲೋಕ. ಅಲ್ಲಿ ತಂದೆ-ಮಗ ವೈರಿಗಳಾಗಿ ನಟಿಸುತ್ತಾರೆ, ತಾಯಿ-ಮಗ ಜೊತೆಯಾಗಿ ರೌಡಿಸಂ ಮಾಡುತ್ತಾರೆ. ಆದರೆ ತಂದೆ-ಮಗಳು ರೋಮ್ಯಾನ್ಸ್ ಮಾಡುತ್ತಾರಾ? ಖಂಡಿತಾ ಇಲ್ಲ. ಆದರೆ ಈ ಅಸಾಧ್ಯವಾದ ಮಾತನ್ನು ಸಾಧ್ಯವಾಗಿಸಿದ ನಿರ್ಮಾಪಕ/ಚಿತ್ರದ ನಾಯಕ ಬಿ.ವಿ ಶ್ರೀನಿವಾಸ್.
ಈ ಮಹಾನ್ ಪುರುಷ 'ಮುಸ್ಸಂಜೆಯ ಗೆಳತಿ' ಎಂಬ ಚಿತ್ರ ತೆಗೆದು ಅದರಲ್ಲಿ ಸ್ವತ ತಾನೇ ನಾಯಕನಾಗಿ ನಟಿಸಿದ್ದಲ್ಲದೇ ನಾಯಕಿಯ ಸ್ಥಾನಕ್ಕೆ ತನ್ನ ಮಗಳನ್ನೇ (ಶಾಲಿನಿ) ಆಯ್ಕೆ ಮಾಡಿ ಡ್ಯುಯೆಟ್ ಹಾಡಿದ್ದಾನೆ. ನಮ್ಮ ಸಂಸ್ಕ್ಕತಿ, ತಂದೆ-ಮಗಳ ಸಂಬಂಧವನ್ನು ಮರೆತು ಆಕೆಗೆ ಅರೆನಗ್ನ ಬಟ್ಟೆಗಳನ್ನು ತೊಡಿಸಿದ್ದಾನೆ. ಲೋಚಲೋಚನೆ ಮುತ್ತಿಕ್ಕಿದ್ದಾನೆ. ಇಂತಹ ಮಹಾನುಭಾವ ತನ್ನ ಚಿತ್ರದ ಪೋಸ್ಟರ್‌ನಲ್ಲಿ 'ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿಗೆ ತಂದೆ-ಮಗಳು ನಾಯಕ-ನಾಯಕಿಯಾಗಿ ನಟಿಸಿದ ಚಿತ್ರ' ಎಂದು ಬಿಲ್ಡಪ್ ಬೇರೆ ಕೊಡುತ್ತಿದ್ದಾನೆ.
ಈತನ ಮಗಳು ಕೂಡಾ ಅಷ್ಟೇ. ತನ್ನ ತಂದೆ ಎಂಬ ಅಂಜಿಕೆಯನ್ನು ಬಿಟ್ಟು ಪಿತಾಮಹನೊಂದಿಗೆ ರೊಮ್ಯಾನ್ಸ್ ದೃಶ್ಯಗಳಲ್ಲಿ ಮೈ ಚಳಿ ಬಿಟ್ಟು ನಟಿಸಿದ್ದಾಳೆ. ಈತನ ಈ ಘನ ಕಾರ್ಯಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಕರೆದು ಮಂಗಳಾರತಿ ಮಾಡಿ ಇದಕ್ಕಿಂತ ಒಳ್ಳೆಯ ಕಥೆ ನಿನಗೆ ಸಿಗಲಿಲ್ವಾ ಎಂದು ಕೇಳಿದೆ. ಚಿತ್ರ ಇನ್ನಷ್ಟೇ ಸೆನ್ಸಾರ್ ಆಗಬೇಕಿದೆ.
ಚಿತ್ರದಲ್ಲಿ ಈತನದ್ದು ಪ್ರೊಫೆಸರ್ ಪಾತ್ರ. ತನ್ನ ವಿದ್ಯಾರ್ಥಿನಿಯೊಂದಿಗೆ ಸರಸವಾಡುವ ದುಷ್ಟ ಪಾತ್ರವನ್ನು ಇಲ್ಲಿ ಮಾಡಿದ್ದಾನೆ. ಅಷ್ಟಕ್ಕೂ ಇಲ್ಲಿ ಈತನಿಗೆ ಬೇರೆ ಯಾವ ಕಲಾವಿದರೂ ಸಿಗಲಿಲ್ವಾ? ತನ್ನ ದ್ವಿತೀಯ ಪಿಯುಸಿಯ ಮಗಳನ್ನೇ ಆಯ್ಕೆ ಮಾಡಿ ಚಿತ್ರಿಸುವ ಅಗತ್ಯವಾದರೂ ಏನಿತ್ತು? ಈತನ ಪತ್ನಿಗಾದರೂ ತನ್ನ ಮಗಳನ್ನು ಸ್ವಂತ ತಂದೆಯೊಂದಿಗೆ ರೋಮ್ಯಾನ್ಸ್ ಮಾಡಲು ಬಿಡುವ ಮನಸಾದರೂ ಹೇಗೆ ಬಂತು. ಚಿತ್ರ ಈಗ ವಿವಾದದ ಕೇಂದ್ರ ಬಿಂದುವಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮನೆಯೂ ನಿಮಗೆ ಮುಖ್ಯ, ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ನಿಮಗೇನು ಒಳ್ಳೆಯದೋ ಅದು ನಿಮಗೆ ಗೊತ್ತಿದ್ದರೆ, ಖಂಡಿತಾ ಪ್ರೀತಿ, ವಾತ್ಸಲ್ಯಗಳನ್ನು ಅಪ್ಪಿಕೊಳ್ಳುತ್ತೀರಿ. ಅಚಾತುರ್ಯದಿಂದ ಸ್ವತ್ತು ತಗಾದೆಗಳಲ್ಲಿ ನಿಮ್ಮ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ನೆಂಟರ ಮೃದ್ಧು ಧೋರಣೆಯಿಂದ ಮಾನಸಿಕ ನೆಮ್ಮದಿ. ವ್ಯವಹಾರಗಳಲ್ಲಿ ಇರುಸು ಮುರುಸು. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಪೂಜಾಗಾಂಧಿ ಅಭಿನಯದ ಹುಚ್ಚಿ ಚಿತ್ರಕ್ಕೆ ಡಿಟಿಎಸ್ ನಡೆಯುತ್ತಿದೆ. ಡಿ.ಬಿ.ಕುಮಾರಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರವನ್ನು ವೆಂಕಟೇಶ್ ಪಂಚಾಂಗಂ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. |
| |
|
|
|
|
|
|