|
| ಈ ವಾರ ಥಿಯೇಟರ್‌ಗೆ 'ಸವಾರಿ' |
| ಗುರುವಾರ, 9 ಏಪ್ರಿಲ್ 2009 ( 16:44 IST ) | |
ಶ್ರೀನಗರ ಕಿಟ್ಟಿ ಹಾಗೂ ಪ್ಯಾರಿಸ್ ಪ್ರಣಯ ಚಿತ್ರದಲ್ಲಿ ನಟಿಸಿದ ರಘು ಮುಖರ್ಜಿ ನಾಯಕರಾಗಿರುವ ಸವಾರಿ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಇಲ್ಲಿ ನಾಯಕ ಪ್ರೀತಿಯ ರೀತಿ, ನೀತಿ ಹುಡುಕುತ್ತಾ ಸಾಗುತ್ತಾನೆ. ಹಾದಿ ಮಧ್ಯೆ ಹತ್ತು ಹಲವು ತಿರುವು, ಜತೆಗೊಂದಿಷ್ಟು ಕುರುಹು ಸಿಗುತ್ತದೆ. ಕ್ರಮೇಣ ನಾಯಕ ಪ್ರೀತಿಯ ಅರ್ಥ ಕಂಡುಕೊಳ್ಳುತ್ತಾನೆ- ಇದು ಸವಾರಿ ಚಿತ್ರದ ಒನ್ಲೈನ್ ಸ್ಟೌರಿ.
ಚಿತ್ರವನ್ನು ಜೇಕಬ್ ವರ್ಗೀಸ್ ನಿರ್ದೇಶಿಸಿದ್ದಾರೆ. ಇದು ತೆಲುಗಿನ ಗಮ್ಯಂ ಚಿತ್ರದ ರೀಮೇಕ್. ಚಿತ್ರವನ್ನು ಉಷಾಕಿರಣ್ ಮೂವೀಸ್ ರಾಮೋಜಿರಾವ್ ಅವರು ನಿರ್ಮಿಸಿದ್ದಾರೆ. ಚಿತ್ರಕ್ಕೆ ಸಂಗೀತ ವಾದಕ ಕದ್ರಿ ಗೋಪಾಲನಾಥ್ ಅವರ ಮಗ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳು ಹಿಟ್ ಆಗಿವೆ ಎನ್ನುತ್ತಾರೆ ನಿರ್ದೇಶಕರು.
ಜೇಕಬ್ ಈ ಮೊದಲು ಮಲಯಾಳಂನಲ್ಲಿ ಆದಿಯಂ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದರು. ಅದಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿತ್ತು. ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ, ಕುದುರೆಮುಖ, ಕುಕ್ಕೆ ಸುಬ್ರಹ್ಮಣ್ಯಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಕಮಲಿನಿ ಮುಖರ್ಜಿ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರಾನ್ನ ಚಿತ್ರಾನ್ನ ಬೆಡಗಿ ಸುಮನ್ ರಂಗನಾಥ್ ಐಟಂ ಹಾಡೊಂದಕ್ಕೆ ಇಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಚಿತ್ರ ಖಂಡಿತವಾಗಿಯೂ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ ಶ್ರೀನಗರ ಕಿಟ್ಟಿ. ಸವಾರಿಯ ಮೇಲೆ ಪ್ರೇಕ್ಷಕರ ಸವಾರಿ ಹೇಗಿರುತ್ತೆ ಎಂಬುದನ್ನು ಕಾದು ನೋಡಬೇಕು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಪ್ರಶಂಸೆ. ಪತ್ರಿಕೆ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ವರ್ಗಾವಣೆ ಸಂಭವ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಟ ಪ್ರೇಮ್ ಈಗ ಗೊಂದಲದಲ್ಲಿದ್ದಾರೆ. ಕಳೆದ ವಾರವಷ್ಟೇ ಬಿಡುಗಡೆಯಾದ ಅವರ 'ಗೌತಮ' ಚಿತ್ರವನ್ನು ಹುಬ್ಬಳ್ಳಿಯ ಥಿಯೇಟರ್ ಮಾಲೀಕರು ಎತ್ತಂಗಡಿ ಮಾಡಲು ನಿರ್ಧರಿಸಿದ್ದಾರೆ. ಇದರಿಂದ ಪ್ರೇಮ್ ಸಿಟ್ಟಾಗಿದ್ದಾರೆ |
| |
|
|
|
|
|
|