|
| ಹುಚ್ಚಿಯಾದ ಪೂಜಾಗಾಂಧಿ |
| ಬುಧವಾರ, 1 ಏಪ್ರಿಲ್ 2009 ( 15:33 IST ) | |
ಪೂಜಾಗಾಂಧಿ ಈಗ ಹುಚ್ಚಿಯಾಗಿದ್ದಾರೆ. ಹಾಗಂತ ಅವರ ಅಭಿಮಾನಿಗಳು ಬೇಸರ ಮಾಡಬೇಕಾಗಿಲ್ಲ. ಅವರು ನಟಿಸುತ್ತಿರುವ ಹೊಸ ಚಿತ್ರದ ಹೆಸರು 'ಹುಚ್ಚಿ'. ಈ ಚಿತ್ರವನ್ನು ವೆಂಕಟೇಶ್ ಪಂಚಾಂಗಂ ಎಂಬವರು ನಿರ್ದೇಶಿಸುತ್ತಿದ್ದಾರೆ. ಇವರ ನಿರ್ದೇಶನದ 'ಕಾಳಿದಾಸ ಲವ್ವಲ್ ಬಿದ್ದ' ಬಿಡುಗಡೆಗೆ ಸಿದ್ಧವಾಗಿದೆ.
ಹುಚ್ಚಿ ಚಿತ್ರವನ್ನು ಡಿ.ಬಿ.ಕುಮಾರಸ್ವಾಮಿ ಹಾಗೂ ಗಿರಿ ಪಂಚಾಂಗಂ ನಿರ್ಮಿಸುತ್ತಿದ್ದಾರೆ. ಯುಗಾದಿಯಂದು ಚಿತ್ರೀಕರಣ ಆರಂಭಿಸಿದ್ದಾರೆ. ಆಕಸ್ಮಿಕವಾಗಿ ನಡೆದ ಘಟನೆಯೊಂದರಿಂದ ವಿಚಲಿತಳಾಗುವ ಯುವತಿಯೊಬ್ಬಳು ಜೀವನದಲ್ಲಿ ನಿರಾಸೆ ಅನುಭವಿಸಿ ಅಘಾತಕ್ಕೊಳಗಾಗಿ ಸುತ್ತಮುತ್ತಲಿನವರ ಜೊತೆ ಬದುಕಲು ಭಯ ಪಡುತ್ತಾಳಂತೆ. ಈ ಹುಚ್ಚಿಯ ಹಿನ್ನೆಲೆಯೇ ಚಿತ್ರದ ಕಥೆಯಂತೆ.
ಚಿತ್ರಕ್ಕೆ ಗಿರಿ ಪಂಚಾಂಗಂ ಅವರದೇ ಸಾಹಿತ್ಯ, ಸಂಗೀತವಿದೆ. ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ಮಾಡಲಿದ್ದಾರಂತೆ. ಶರಪಂಜರ ಚಿತ್ರದಲ್ಲಿ ಕಲ್ಪನಾ ಹುಚ್ಚಿಯಾಗಿ ಅಭಿನಯಿಸಿದ ನಂತರ ಅಂತಹ ಪಾತ್ರವನ್ನು ತಾವು ಕೂಡಾ ಮಾಡಬೇಕೆಂದು ಅನೇಕ ನಟಿಯರಿಗೆ ಆಸೆಯಿರುತ್ತದೆ. ಆದರೆ ಅಂತಹ ಅವಕಾಶ ಸಿಗುವುದಿಲ್ಲ. ಈಗ ಮಳೆ ಹುಡುಗಿಗೆ ಈ ಅವಕಾಶ ಒದಗಿ ಬಂದಿದೆ. ಅವಕಾಶವನ್ನು ಯಾವ ರೀತಿ ಬಳಸುತ್ತಾರೆ ಕಾದು ನೋಡಬೇಕು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಅಚಾತುರ್ಯದಿಂದ ಸ್ವತ್ತು ತಗಾದೆಗಳಲ್ಲಿ ನಿಮ್ಮ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ನೆಂಟರ ಮೃದ್ಧು ಧೋರಣೆಯಿಂದ ಮಾನಸಿಕ ನೆಮ್ಮದಿ. ವ್ಯವಹಾರಗಳಲ್ಲಿ ಇರುಸು ಮುರುಸು. ವೈಯಕ್ತಿಕ ವ್ಯವಹಾರಗಳ ಇತ್ಯರ್ಥಕ್ಕೆ ಸಾಲ ಲಭ್ಯ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸಮೀಕ್ಷೆ - ಕನ್ನಡ ಚಿತ್ರವೊಂದರಲ್ಲಿ ಅಮೀಷಾ ಪಟೇಲ್ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿಬರುತ್ತಿದೆ. ತೆಲುಗು ಚಿತ್ರ 'ಆಥನೊಕ್ಕಡೆ' ಯನ್ನು ನವೀನ್ ಎಂಬುವರು ಕನ್ನಡದಲ್ಲಿ ರೀಮೇಕ್ ಮಾಡಿ |
| |
|
|
|
|
|
|