ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಜಾಜಿಮಲ್ಲಿಗೆ ಬಿಡುಗಡೆಗೆ ಮುನ್ನ ಅಜಯ್ ಮನದ ಮಾತು
ಸೋಮವಾರ, 30 ಮಾರ್ಚ್ 2009   ( 17:05 IST )
ನಟ ಅಜಯ್ ಖುಷಿಯಲ್ಲಿದ್ದಾರೆ. ಅವರ ಅಭಿನಯದ 'ಜಾಜಿಮಲ್ಲಿಗೆ' ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. 'ತಾಜ್ಮಹಲ್' ಚಿತ್ರದ ನಂತರ ಬಿಡುಗಡೆಯಾಗುತ್ತಿರುವ ಚಿತ್ರವಾದ್ದರಿಂದ ಅಜಯ್‌ಗೆ ಸಹಜವಾಗಿಯೇ ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಪ್ರೇಮ್ ನಿರ್ದೇಶನದ 'ಎಕ್ಸ್‌ಕ್ಯೂಸ್ ಮಿ' ಚಿತ್ರದ ಮ‌ೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಜಯ್‌ಗೆ ತಾಜ್ಮಹಲ್ ಚಿತ್ರ ಸ್ಟಾರ್‌ಗಿರಿ ತಂದು ಕೊಟ್ಟಿತು.

ಅಜಯ್‌ಗೆ ತಾಜ್‌ಮಹಲ್ ಚಿತ್ರ ಒಂದು ಮರುಜನ್ಮದಂತೆ. ಆ ಚಿತ್ರವನ್ನು ಅವರು ಒಪ್ಪಿಕೊಳ್ಳದಿದ್ದರೆ ಇಂದು ಈ ಮಟ್ಟಕ್ಕೆ ಏರುತ್ತಿರಲಿಲ್ಲ. ಸ್ವತಃ ಅಜಯ್ ಇದನ್ನು ಒಪ್ಪಿಕೊಳ್ಳುತ್ತಾರೆ. ಈಗ ಅವರ ಜಾಜಿಮಲ್ಲಿಗೆ ಚಿತ್ರ ತೆರೆಕಾಣುತ್ತಿದೆ. ವಿಚಿತ್ರ ಪ್ರೇಮ ಕಥೆ ಇದೆ. ಪ್ರೀತಿಸಿದ ಹುಡುಗಿಯೊಬ್ಬಳು ಮೋಸ ಮಾಡಿದಾಗ ನ್ಯಾಯ ಕೇಳಲು ಕೋರ್ಟ್ ಮೊರೆ ಹೋಗುತ್ತೇನೆ. ಪ್ರೇಮಿಗಳು ಈ ಚಿತ್ರ ನೋಡಿದ ಮೇಲೆ ನನ್ನ ಪಾತ್ರವನ್ನು ಇಷ್ಟಪಡುತ್ತಾರೆ ಎನ್ನುತ್ತಾರೆ ಅಜಯ್.

ತಾಜ್ಮಹಲ್ ಚಿತ್ರ ಹಿಟ್ ಆದ ಬೆನ್ನಲ್ಲೇ ಅಜಯ್ ಸಿಕ್ಕಾಪಟ್ಟೆ ಸಂಭಾವನೆ ಕೇಳುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದರೆ ಅಜಯ್ ಇದನ್ನು ಅಲ್ಲಗಳೆಯುತ್ತಾರೆ. ತಾಜ್ಮಹಲ್ ಹಿಟ್ ಆಗುತ್ತಿದ್ದಂತೆ ಬಹಳಷ್ಟು ನಿರ್ಮಾಪಕರು ನನ್ನ ಕಾಲ್ಶೀಟ್ ಕೇಳಿದ್ದರು. ಕೆಲವರು ಕಥೆ, ನಿರ್ದೇಶಕರ ಬಗ್ಗೆ ಹೇಳದೇ ನೇರವಾಗಿ ನಿನ್ನ ರೇಟೆಷ್ಟು ಎಂದರು. ಅದಕ್ಕೆ ಅವರನ್ನು ದೂರ ಮಾಡಲು ಹೆಚ್ಚು ಸಂಭಾವನೆ ಕೇಳಿದೆ ಬಿಟ್ಟರೆ ಬೇರೆ ಯಾವ ಉದ್ದೇಶದಿಂದಲೂ ಅಲ್ಲ. ನನ್ನ ಸಂಭಾವನೆಯ ಮೀತಿ ನನಗೆ ಗೊತ್ತಿದೆ ಎನ್ನುತ್ತಾರೆ ಅಜಯ್.

ಚಿತ್ರರಂಗದಲ್ಲಿ ಹೆಚ್ಚು ಕಾಲ ಉಳಿಯಬೇಕೆಂಬ ಕಾರಣದಿಂದ ಅಜಯ್, ಉತ್ತಮ ಚಿತ್ರಕಥೆಯಿರುವ ಚಿತ್ರಗಳನ್ನಷ್ಟೇ ಆಯ್ಕೆ ಮಾಡುತ್ತಾರಂತೆ. ಜನರ ಮನಸ್ಸಿನಲ್ಲಿ ಉಳಿಯುವಂತಹ ಪಾತ್ರ ಮಾಡಬೇಕೆಂಬುದು ಅಜಯ್ ಆಸೆಯಂತೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಉಮಾಶ್ರೀ ಈಗ ಮಂತ್ರವಾದಿ
ಸಕಲ ವಲ್ಲಭ ಈ ಬಳೆಗಾರ
ರಾಮಕುಮಾರ್, ಅಎಭಿಜಿತ್ ಜೋಡಿ ನಂ.1
ವಿಜಯ್ ರಾಘವೇಂದ್ರ ಕಾರಂಜಿಗೆ ಸೆನ್ಸಾರ್ ಪ್ರಶಂಸೆ
ಇಂದ್ರಜಿತ್‌ರಿಂದ 'ಹುಡುಗ-ಹುಡುಗಿ'
ಚೆಲುವಿನ ಚಿಲಿಪಿಲಿಯಲ್ಲಿ ನಾರಾಯಣ್
ಗ್ರಹ ಗತಿ
ದೈನಿಕ - ಶತ್ರು ಪತನ, ಔದ್ಯೋಗಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ, ನೆಂಟರ ಸಹಕಾರದಿಂದ ಸ್ವತ್ತು ವಿವಾದಗಳಿಗೆ ಚಾಲನೆ, ಬಂಧು ಮತ್ಸರ ಪರಾಕಾಷ್ಠೆ ತಲುಪುವುದರಿಂದ ಸ್ವತ್ತು ವಿವಾದಗಳಲ್ಲಿ ಕಂಗಾಲಾಗುವಿರಿ. ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ಔತಣ ಕೂಟಗಳಿಗೆ ಆಮಂತ್ರಣ, ವಾಹನ ವಹಿವಾಟುಗಳಲ್ಲಿ ಹಿರಿಯರ ಪ್ರಶಂಸೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಚುನಾವಣೆ ಖರ್ಚಿಗಾಗಿ ನೈಸ್‌‌ಗೆ ಭೂಮಿ ಮಾರಾಟ: ಎಚ್‌ಡಿಕೆ
ಲೋಕಸಭಾ ಚುನಾವಣೆಯ ಖರ್ಚಿಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯ‌ೂರಪ್ಪ ನೇತೃತ್ವದ ಆಡಳಿತಾರೂಢ ...
ಪಟ್ಟಿಯಲ್ಲಿ ಹೆಸರಿರಲಿಲ್ಲ, ಮತದಾರರ ಅಳಲು
ನೀತಿ ಸಂಹಿತೆ ಉಲ್ಲಂಘನೆಯಲ್ಲಿ ಬಿಜೆಪಿ ನಂ-1
ಮನರಂಜನೆ
ಚಿತ್ರ ಸಮೀಕ್ಷೆ - ಕನ್ನಡ ಚಿತ್ರವೊಂದರಲ್ಲಿ ಅಮೀಷಾ ಪಟೇಲ್ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿಬರುತ್ತಿದೆ. ತೆಲುಗು ಚಿತ್ರ 'ಆಥನೊಕ್ಕಡೆ' ಯನ್ನು ನವೀನ್ ಎಂಬುವರು ಕನ್ನಡದಲ್ಲಿ ರೀಮೇಕ್ ಮಾಡಿ
ಮುಂದೆ ಓದಿ|ಮತ್ತಷ್ಟು...