|
| ಉಮಾಶ್ರೀ ಈಗ ಮಂತ್ರವಾದಿ |
| ಸೋಮವಾರ, 30 ಮಾರ್ಚ್ 2009 ( 16:24 IST ) | |
ಉಮಾಶ್ರೀ ಈಗ ಮಂತ್ರವಾದಿಯಾಗಿದ್ದಾರೆ. ಹಾಗಂತ ನಿಜ ಜೀವನದಲ್ಲಿ ಎಂದು ಭಾವಿಸಬೇಕಾಗಿಲ್ಲ. 'ಅಂತರಾತ್ಮ' ಎಂಬ ಹೊಸ ಚಿತ್ರವೊಂದರಲ್ಲಿ ಉಮಾಶ್ರೀ ಮಂತ್ರವಾದಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಇವರು ದ್ವಿತೀಯ ನಾಯಕಿ, ಹಾಸ್ಯ ಪಾತ್ರ ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಮಂತ್ರವಾದಿ ಪಾತ್ರದಲ್ಲಿ ನಟಿಸಿರಲಿಲ್ಲ. ಈಗ ಮೊದಲ ಬಾರಿಗೆ ಮಂತ್ರವಾದಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
'ನಾನು ಈವರೆಗೆ 380ಕ್ಕೂ ಹೆಚ್ಚು ಚಿತ್ರಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಮಂತ್ರವಾದಿಯಾಗಿ ನಟಿಸಿರಲಿಲ್ಲ. ಆ ಪಾತ್ರ ಈಗ ಸಿಕ್ಕಿದೆ. ಇದರೊಂದಿಗೆ ಮಂತ್ರವಾದಿಯಾಗಿ ನನ್ನ ಸಾಮರ್ಥ್ಯ ತೋರ್ಪಡಿಸಲು ಅವಕಾಶವಿದೆ' ಎನ್ನುತ್ತಾರೆ ಉಮಾಶ್ರೀ.
ಚಿತ್ರಕ್ಕೆ ಫ್ರೆಂಡ್ಸ್ ಪ್ರೊಡಕ್ಷನ್ಸ್ ಬಿ.ಶಂಕರ್ ಚಿತ್ರಕತೆ ಬರೆದು, ನಿರ್ದೇಶಿಸಿ ನಿರ್ಮಿಸುತ್ತಿರುವ ಈ ಚಿತ್ರ ಕುತೂಹಲಕಾರಿ ಕತೆ ಹೊಂದಿರುವುದರಿಂದ ಅದಕ್ಕೆ ಅಂತರಾತ್ಮ ಎಂದು ಹೆಸರಿಡಲಾಗಿದೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಚಿತ್ರದ ಉಮಾಶ್ರೀ ಅವರ ಭಾಗವನ್ನು ಮುಗಿಸಲಾಗಿದೆ ಎನ್ನುತ್ತಾರೆ ಶಂಕರ್.
ಮಿಥುನ್ ತೇಜಸ್ವಿ ಮತ್ತು ರೋಹನ್ ಗೌಡ ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ವಿಶಾಖಸಿಂಗ್. ಇವರು ಹೌಸ್‌ಫುಲ್ ಚಿತ್ರದಲ್ಲೂ ನಟಿಸಿದ್ದಾರೆ. ಸುಮನ್ ರಂಗನಾಥ್, ಹರೀಶ್ ರೈ, ಮೈಕೆಲ್ ಮಧು, ರೇಖಾದಾಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಶತ್ರು ಪತನ, ಔದ್ಯೋಗಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ, ನೆಂಟರ ಸಹಕಾರದಿಂದ ಸ್ವತ್ತು ವಿವಾದಗಳಿಗೆ ಚಾಲನೆ, ಬಂಧು ಮತ್ಸರ ಪರಾಕಾಷ್ಠೆ ತಲುಪುವುದರಿಂದ ಸ್ವತ್ತು ವಿವಾದಗಳಲ್ಲಿ ಕಂಗಾಲಾಗುವಿರಿ. ನೀವು ಮಾಡಬೇಕಾದ ಕಾರ್ಯಗಳು ಬಹಳ ಇವೆ. ಔತಣ ಕೂಟಗಳಿಗೆ ಆಮಂತ್ರಣ, ವಾಹನ ವಹಿವಾಟುಗಳಲ್ಲಿ ಹಿರಿಯರ ಪ್ರಶಂಸೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸಮೀಕ್ಷೆ - ಕನ್ನಡ ಚಿತ್ರವೊಂದರಲ್ಲಿ ಅಮೀಷಾ ಪಟೇಲ್ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿಬರುತ್ತಿದೆ. ತೆಲುಗು ಚಿತ್ರ 'ಆಥನೊಕ್ಕಡೆ' ಯನ್ನು ನವೀನ್ ಎಂಬುವರು ಕನ್ನಡದಲ್ಲಿ ರೀಮೇಕ್ ಮಾಡಿ |
| |
|
|
|
|
|
|