ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ವಿಜಯ್ ರಾಘವೇಂದ್ರ ಕಾರಂಜಿಗೆ ಸೆನ್ಸಾರ್ ಪ್ರಶಂಸೆ
ಸೋಮವಾರ, 23 ಮಾರ್ಚ್ 2009   ( 16:53 IST )
ವಾರ ವಾರ ಒಂದಷ್ಟು ಚಿತ್ರಗಳು ಸೆಟ್ಟೇರುತ್ತಲೇ ಇರುತ್ತವೆ. ಆದರೆ ಇವುಗಳಲ್ಲಿ ಥಿಯೇಟರ್‌ನಲ್ಲಿ ನಿಲ್ಲುವ ಚಿತ್ರಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಕೆಲವು ಚಿತ್ರಗಳು ಹಿಂಸೆ ಅಥವಾ ಅಶ್ಲೀಲ ದೃಶ್ಯಗಳನ್ನು ವೈಭವೀಕರಿಸುವುದರಿಂದ ಸೆನ್ಸಾರ್ ಜೊತೆ ಜಿದ್ದಾಜಿದ್ದಿ ನಡೆಸುತ್ತವೆ. ಆದರೆ 'ಕಾರಂಜಿ' ಚಿತ್ರ ಮಾತ್ರ ಸೆನ್ಸಾರ್‌ನಿಂದ ಪ್ರಶಂಸೆಯ ಮಾತುಗಳೊಂದಿಗೆ ಹೊರ ಬಂದಿದೆ.

ವಿಜಯ್ ರಾಘವೇಂದ್ರ ನಟಿಸಿದ ಈ ಚಿತ್ರ ಪ್ರೇಮಿಗಳಿಗೆ ಹಾಗೂ ಚಿತ್ರ ಪ್ರೇಮಿಗಳಿಗೆ ರಸದೌತಣ ನೀಡಲಿದೆ. ಈಗಾಗಲೇ ಚಿತ್ರದ ಪ್ರಥಮ ಪ್ರತಿ ಹೊರ ಬಂದಿದ್ದು, ಚಿತ್ರಕ್ಕೆ 'ಯು' ಪ್ರಮಾಣ ಪತ್ರ ಕೂಡಾ ದೊರಕಿದೆ.

ಬಹು ದಿನಗಳ ನಂತರ ಒಂದು ಇಂಪಾದ ಸಂಗೀತವುಳ್ಳ ಚಿತ್ರವನ್ನು ಮಾಡಿದ್ದೀರಿ ಎಂದು ಸೆನ್ಸಾರ್ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿದೆಯಂತೆ. ಮುಂದಿನ ತಿಂಗಳು ಈ ಚಿತ್ರ ಬಿಡುಗಡೆಯಾಗಲಿದ್ದು, ಇದರಲ್ಲಿ ಗಿಟಾರ್, ಡ್ರಮ್ಸ್, ಕೊಳಲು ಸೇರಿದಂತೆ ಅನೇಕ ಸಂಗೀತ ಪರಿಕರಗಳನ್ನು ಬಳಸಿಕೊಳ್ಳಲಾಗಿದೆ. ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ವಿಜಯ್ ರಾಘವೇಂದ್ರ, ಗೌರಿ ಕಾರ್ನಿಕ್, ಚಂದನ್, ಚೇತನ್ ಮೊದಲಾದವರು ನಟಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಇಂದ್ರಜಿತ್‌ರಿಂದ 'ಹುಡುಗ-ಹುಡುಗಿ'
ಚೆಲುವಿನ ಚಿಲಿಪಿಲಿಯಲ್ಲಿ ನಾರಾಯಣ್
ಶ್ರೀಮತಿಯಲ್ಲಿ ಉಪ್ಪಿ ಜತೆ ಪತ್ನಿ ಪ್ರಿಯಾಂಕ
ಬಂದೇ ಬರ್ತಾಳೆಯಲ್ಲಿ ಸ್ಲಂಬಾಲನಾಗಿ ಸೂರ್ಯ
ಕನ್ನಡದಲ್ಲಿ ಸವಾರಿಯಾದ ತೆಲುಗಿನ ಗಮ್ಯಂ
ಗುರುದತ್‌ರಿಂದ ಮತ್ತೊಂದು ಚಿತ್ರ
ಗ್ರಹ ಗತಿ
ದೈನಿಕ - ಖಾಸಗಿ ಸಂಸ್ಥೆಗಳ ನೌಕರರಿಗೆ ಪರೀಕ್ಷಾ ಸಮಯ. ಹೆಚ್ಚಿನ ಶ್ರಮವಹಿಸಿ ದುಡಿದರು ತಕ್ಕ ಪ್ರತಿಫಲ ದೊರೆಯುವುದಿಲ್ಲ. ಕೃಷಿಕರಿಗೆ ತೋಟಗಾರಿಕೆಯಲ್ಲಿ ನಿರತರಾದವರಿಗೆ ಹೆಚ್ಚಿನ ಲಾಭ. ನೀವು ಅಂದುಕೊಂಡ ಕಾರ್ಯಗಳು ಅರ್ಧಕ್ಕೆ ನಿಲ್ಲಲಿವೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ವೈಯಕ್ತಿಕ ಆಸಕ್ತಿಯಿಂದ ಭಾಗವಹಿಸಿದೆ: ಆಚಾರ್ಯ
ಹಿಂದೂ ಸಮಾಜೋತ್ಸವ ಬಿಜೆಪಿ ಕಾರ್ಯಕ್ರಮ ....
ಯಡಿಯ‌ೂರಪ್ಪ-ಅನಂತ್ ಕಳ್ಳ-ಮಳ್ಳರು: ಎಚ್‌ಡಿಕೆ
ತಾವು ಯಾವುದೇ ಪಕ್ಷಕ್ಕೆ ಸೇರಿದವರಲ್ಲ: ಪೇಜಾವರಶ್ರೀ
ಮನರಂಜನೆ
ಚಿತ್ರ ಸುದ್ದಿ - ದೇವರಾಜ್ ಅಭಿನಯದ ಮೇಷ್ಟ್ರು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರವನ್ನು ಮಹದೇವ್ ನಿರ್ದೇಶಿಸುತ್ತಿದ್ದಾರೆ. ಇವರು ಸ್ವಮೇಕ್ ಚಿತ್ರಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಮೇಷ್ಟ್ರು ಕೂಡಾ ಸ್ವಮೇಕ್
ಮುಂದೆ ಓದಿ|ಮತ್ತಷ್ಟು...