ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಹೊಸ ಚಿತ್ರ
ಶ್ರೀಮತಿಯಲ್ಲಿ ಉಪ್ಪಿ ಜತೆ ಪತ್ನಿ ಪ್ರಿಯಾಂಕ
ಬುಧವಾರ, 18 ಮಾರ್ಚ್ 2009   ( 18:24 IST )
ಬುದ್ದಿವಂತನಾಗಿ ಮೇಲೆ ಬಂದ ಉಪೇಂದ್ರ ಈಗ ಸಿಕ್ಕಾಪಟ್ಟೆ ಬಿಜಿಯಾಗಿ ಬಿಟ್ಟಿದ್ದಾರೆ. ಈಗ ತಮ್ಮ ಪತ್ನಿ ಪ್ರಿಯಾಂಕಾರೊಂದಿಗೆ ಚಿತ್ರವೊಂದರಲ್ಲಿ ಬಿಜಿಯಾಗಿದ್ದಾರೆ. ಚಿತ್ರಕ್ಕೆ 'ಶ್ರೀಮತಿ' ಎಂದು ಹೆಸರಿಡಲಾಗಿದೆ. ಎಚ್ಟೂ ಚಿತ್ರದ ನಂತರ ಉಪ್ಪಿ ಮತ್ತು ಪ್ರಿಯಾಂಕಾ ಜೊತೆಯಾಗಿ ನಟಿಸುತ್ತಿರುವ ಮೊದಲ ಚಿತ್ರವಿದು.

ವಿಶೇಷವೆಂದರೆ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಹೊರತುಪಡಿಸಿ ಉಪ್ಪಿ ಸ್ವತಃ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಬಾಲಿವುಡ್ನ ಸೆಲಿನಾ ಜೇಟ್ಲಿ ಕೂಡಾ ನಟಿಸಲಿದ್ದಾರೆ. ಈಗಾಗಲೇ ಹೈದರಾಬಾದ್ನಲ್ಲಿ ಚಿತ್ರೀಕರಣ ಆರಂಭವಾಗಿದೆ.

'ಉಪೇಂದ್ರ'ಚಿತ್ರದ ನಂತರ ಉಪ್ಪಿ ಕಥೆ, ಚಿತ್ರಕಥೆ ಬರೆಯುತ್ತಿರುವ ಚಿತ್ರ ಇದಾಗಿರುವುದರಿಂದ ಪ್ರೇಕ್ಷಕರಿಗೆ ಉಪ್ಪಿಯ ರುಚಿ ಸಿಗಲಿದೆ. ಉಪೇಂದ್ರ ಕೂಡಾ ಈ ಚಿತ್ರ ವಿಶಿಷ್ಟವಾಗಿ ಬರುವಲ್ಲಿ ಶ್ರಮಿಸುತ್ತಿದ್ದಾರೆ.

ಶ್ರೀಮತಿ ಚಿತ್ರ ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು ಮತ್ತು ಹಿಂದಿಯಲ್ಲೂ ನಿರ್ಮಾಣ ಮಾಡುವ ಯೋಜನೆ ಚಿತ್ರ ತಂಡಕ್ಕಿದೆ. ಹಿಂದಿಯಲ್ಲಿ ಬಿಡುಗಡೆ ಮಾಡುವ ಉದ್ದೇಶದಿಂದಲೇ ಸೆಲಿನಾ ಜೇಟ್ಲಿಯನ್ನು ಕರೆ ತರಲಾಗಿದೆ ಎನ್ನಲಾಗುತ್ತಿದೆ. ಚಿತ್ರವನ್ನು ಸಂಪತ್ ನಿರ್ದೇಶಿಸುತ್ತಿದ್ದಾರೆ.

ಅಂದ ಹಾಗೆ ಈ ಚಿತ್ರ ಅಕ್ಷಯ್ ಕುಮಾರ್ ಹಾಗೂ ಪ್ರಿಯಾಂಕಾ ಚೋಪ್ರಾ ಅಭಿನಯದ 'ಏತ್ರಾಜಿ' ಚಿತ್ರದ ರೀಮೇಕು ಎಂಬ ಮಾತು ಕೂಡಾ ಕೇಳಿಬರುತ್ತಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬಂದೇ ಬರ್ತಾಳೆಯಲ್ಲಿ ಸ್ಲಂಬಾಲನಾಗಿ ಸೂರ್ಯ
ಕನ್ನಡದಲ್ಲಿ ಸವಾರಿಯಾದ ತೆಲುಗಿನ ಗಮ್ಯಂ
ಗುರುದತ್‌ರಿಂದ ಮತ್ತೊಂದು ಚಿತ್ರ
ಖಾಕಿ ಖದರ್
ಮೇಲಕ್ಕೆ ಬಿದ್ದ ಚಿತ್ರಗಳು
ಬಂದ್ಲು ಸಾರ್…ರಾಜಕುಮಾರಿ
ಗ್ರಹ ಗತಿ
ದೈನಿಕ - ಶುಭಫಲಗಳು ದೊರೆಯುತ್ತವೆ. ಕಾರ್ಯದಕ್ಷತೆಯಿಂದ ಕರ್ತವ್ಯ ನೇರವೇರಿಸಿ ನೀವು ಅಂದುಕೊಂಡಿದ್ದನ್ನು ಸಾಧಿಸುತ್ತೀರಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನೆಯ ಕುಟುಂಬದ ಸದಸ್ಯರಿಗೆ ನೆಮ್ಮದಿಯ ವಾತಾವರಣ. ಉದ್ಯೋಗಿಗಳಿಗೆ ಕೆಲಸದ ಒತ್ತಡ ತಪ್ಪದು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಬಿಜೆಪಿ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಹಿಂದೇಟು: ಸಿಎಂ
ರಾಜ್ಯದಲ್ಲಿ ಬಿಜೆಪಿ ಪರವಾದ ಗಾಳಿ ಬೀಸುತ್ತಿದ್ದು ಬಿಜೆಪಿ ವಿರುದ್ಧ ಸ್ಪರ್ಧಿಸಲು ಪ್ರತಿಪಕ್ಷಗಳು ...
ಅನಂತ್ ವಿರುದ್ಧ ಮುನಿಸು-ಯಡಿಯೂರಪ್ಪ ಸಭೆಗೆ ಗೈರು
ಸುರೇಶ್ ಅಂಗಡಿ ಉಚ್ಚಾಟನೆಗೆ ಕರವೇ ಆಗ್ರಹ
ಮನರಂಜನೆ
ಚಿತ್ರ ಸುದ್ದಿ - ಶಿವಮಣಿ ನಿರ್ದೇಶನದ 'ಜೋಶ್' ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ಚಿತ್ರದ ಮೊದಲ ಪ್ರತಿ ಸಿದ್ಧವಾಗಿದೆ. ಚಿತ್ರವನ್ನು ಎಸ್.ವಿ.ಬಾಬು ನಿರ್ದೇಶಿಸುತ್ತಿದ್ದಾರೆ. ಜೋಶ್ ಚಿತ್ರತಂಡ ಮೊದಲಿನಿಂದಲೂ
ಮುಂದೆ ಓದಿ|ಮತ್ತಷ್ಟು...